Sunday, January 19, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಪ್ರಧಾನಿ ಮೋದಿಯಿಂದ ವಿಶ್ವದ ಅತಿ ಉದ್ದನೆಯ ಹೆದ್ದಾರಿ ಸುರಂಗ ‘ಅಟಲ್​ ಟನಲ್’ ಲೋಕಾರ್ಪಣೆ-ಕಹಳೆ ನ್ಯೂಸ್

ನವದೆಹಲಿ : ಮನಾಲಿಯನ್ನು ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಕಣಿವೆಯೊಂದಿಗೆ ಸಂಪರ್ಕಿಸುವ 9.02 ಕಿ.ಮೀ ಉದ್ದದ ಅಟಲ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು. ಭಾರೀ ಹಿಮಪಾತದ ಮಧ್ಯೆ ಪ್ರತಿವರ್ಷ ಆರು ತಿಂಗಳ ಕಾಲ ಕಣಿವೆಯನ್ನು ನಿರ್ಬಂಧಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಸುರಂಗವನ್ನು ನಿರ್ಮಾಣ ಮಾಡಲಾಗಿದ್ದು, ಇದರಿಂದ ಜನರಿಗೆ ಅನುಕೂಲವಾಗಿದೆ . ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಅವರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್...
ಹೆಚ್ಚಿನ ಸುದ್ದಿ

ಹತ್ರಾಸ್‌ಗೆ ಹೊರಟಿದ್ದ ರಾಹುಲ್‌ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು;ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಹೈ ಡ್ರಾಮಾ-ಕಹಳೆ ನ್ಯೂಸ್

ಲಖ್ನೋ,ಅ.1- ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ 19 ವರ್ಷದ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರವನ್ನು ಖಂಡಿಸಿ ಹತ್ರಾಸ್‍ನಲ್ಲಿ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉತ್ತರಪ್ರದೇಶದ ಪೊಲೀಸರು ಕೆಲಕಾಲಕ್ಕೆ ವಶಕ್ಕೆ ಪಡೆದುಕೊಂಡರು. ಯುಮುನಾ ಎಕ್ಸ್‍ಪ್ರೆಸ್ ಹೈವೇ ಮೂಲಕ ಹತ್ರಾಸ್‍ಗೆ ತೆರಳುತ್ತಿದ್ದ ರಾಹುಲ್ ಅವರನ್ನು ಭಾರತೀಯ ದಂಡ ಸಂಹಿತೆ ಕೆಲ ಸೆಕ್ಷನ್‍ಗಳ ಅನ್ವಯ ಪೊಲೀಸರು...
ಹೆಚ್ಚಿನ ಸುದ್ದಿ

BREAKING NEWS : ಎಪಿಎಂಸಿ, ಭೂ ಸುಧಾರಣೆ ಮತ್ತು ಕಾರ್ಮಿಕ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ-ಕಹಳೆ ನ್ಯೂಸ್

ಬೆಂಗಳೂರು : ತೀವ್ರ ವಿರೋಧದ ನಡುವೆಯೂ ರಾಜ್ಯದ ವಿಧಾನಮಂಡಲದ ಅಧಿವೇಶನದಲ್ಲಿ ಮೂರು ಕೃಷಿ ಕಾಯ್ದೆಗಳಿಗೆ ಅನುಮೋದನೆ ನೀಡಲಾಗಿತ್ತು. ಇಂತಹ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವಂತ ನಿರ್ಧಾರಕ್ಕೆ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಈ ಮೂಲಕ ಎಪಿಎಂಸಿ, ಭೂ ಸುಧಾರಣೆ ಮತ್ತು ಕಾರ್ಮಿಕ ತಿದ್ದುಪಡಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ಜಾರಿಗೆ ತರಲಿದೆ. ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮಹತ್ವದ ಸಚಿವ...
ಹೆಚ್ಚಿನ ಸುದ್ದಿ

ಶಾಲಾರಂಭದ ಕುರಿತು ಸಚಿವ ಸುರೇಶ್‌ ಕುಮಾರ್‌ ಮಹತ್ವದ ಹೇಳಿಕೆ- ಕಹಳೆ ನ್ಯೂಸ್

ಅಕ್ಟೋಬರ್‌ 15 ರಿಂದ ಶಾಲಾ - ಕಾಲೇಜುಗಳನ್ನು ಆರಂಭಿಸಬಹುದು ಎಂದು ಕೇಂದ್ರ ಸರ್ಕಾರ ಅನ್ಲಾಕ್‌ 5 ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದ್ದು, ಆದರೆ ಈ ಕುರಿತ ತೀರ್ಮಾನ ಕೈಗೊಳ್ಳುವ ಅವಕಾಶವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಹೀಗಾಗಿ ರಾಜ್ಯದಲ್ಲಿ ಅಕ್ಟೋಬರ್‌ 15 ರಿಂದ ಶಾಲಾ - ಕಾಲೇಜುಗಳು ಆರಂಭವಾಗಲಿದೆಯಾ ಎಂಬ ಗೊಂದಲ ಪೋಷಕರನ್ನು ಕಾಡುತ್ತಿದ್ದು, ಇದೀಗ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಈ ಕುರಿತ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಅಕ್ಟೋಬರ್‌ 15 ರಿಂದ ಶಾಲೆಗಳನ್ನು...
ಹೆಚ್ಚಿನ ಸುದ್ದಿ

ಬಾಬ್ರಿ ಮಸೀದಿ ಪ್ರಕರಣ; ಅಂತಿಮ ತೀರ್ಪು ನೀಡಿ ಸೇವೆಯಿಂದ ಜಡ್ಜ್ ಎಸ್.ಕೆ.ಯಾದವ್ ನಿವೃತ್ತಿ-ಕಹಳೆ ನ್ಯೂಸ್

28 ವರ್ಷಗಳಷ್ಟು ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪನ್ನು ಲಖ್ನೋ ಸಿಬಿಐ ಕೋರ್ಟ್ ನ ವಿಶೇಷ ನ್ಯಾಯಾಧೀಶರಾದ ಎಸ್.ಕೆ.ಯಾದವ್ ಬುಧವಾರ(ಸೆಪ್ಟೆಂಬರ್ 30, 2020) ಪ್ರಕಟಿಸಿದ್ದಾರೆ. ಲಖ್ನೋ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ 2017ರಿಂದ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ನಿರಂತರವಾಗಿ ವಿಚಾರಣೆ ನಡೆಸುತ್ತಿತ್ತು. ನಿವೃತ್ತಿ ದಿನ ಬಾಬ್ರಿ ಅಂತಿಮ ತೀರ್ಪು ಪ್ರಕಟಿಸಿದ ಜಡ್ಜ್ ಯಾದವ್: 60 ವರ್ಷದ ನ್ಯಾಯಾಧೀಶರಾದ ಎಸ್.ಕೆ.ಯಾದವ್ ಅವರು 2019ರಲ್ಲಿಯೇ ಸೇವೆಯಿಂದ ನಿವೃತ್ತಿಯಾಗಿದ್ದರು. ಆದರೆ 2005ರಿಂದ...
ಹೆಚ್ಚಿನ ಸುದ್ದಿ

BREAKING : ವಿಕ್ರಮ-ಬೇತಾಳ ಖ್ಯಾತಿಯ ಕಲಾವಿದ `ಶಿವಶಂಕರನ್’ ಇನ್ನಿಲ್ಲ-ಕಹಳೆ ನ್ಯೂಸ್

ಚೆನ್ನೈ : ವಿಕ್ರಮ ಬೇತಾಳ ಕಲಾವಿದ ಕರಟಲೋವು ಶಿವಶಂಕರನ್ ಅವರು (96) ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾಗಿದ್ದಾರೆ. ಶಿವಶಂಕರನ್ ಅವರು 1951 ರಲ್ಲಿ ಚಂದಮಾಮ ಮಕ್ಕಳ ನಿಯತಕಾಲಿಕೆ ಮೂಲಕ ಸಾಕಷ್ಟು ಖ್ಯಾತಿ ಪಡೆದಿದ್ದರು. ಸುಮಾರು 60 ವರ್ಷಗಳ ಕಾಲ ಚಂದಮಾಮಾ ಕಲಾವಿದರ ತಂಡವನ್ನು ಅವರು ಮುನ್ನಡೆಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಶಿವಶಂಕರನ್ ಅವರು ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಶಿವಶಂಕರನ್, ಕನ್ನಡ ಸೇರಿದಂತೆ ಟಿವಿ ವಾಹಿನಿಗಳಲ್ಲಿ ಜನ ಮೆಚ್ಚುಗೆ ಪಡೆದಿದ್ದ ವಿಕ್ರಮ-ಬೇತಾಳ ಕಥೆಯ...
ಹೆಚ್ಚಿನ ಸುದ್ದಿ

BREAKING : ಇಂದು 12 ಗಂಟೆಗೆ `ಬಾಬ್ರಿ ಮಸೀದಿ’ ಧ್ವಂಸ ಪ್ರಕರಣದ ಅಂತಿಮ ತೀರ್ಪು : ಎಲ್ಲರ ಚಿತ್ತ ಸಿಬಿಐ ನ್ಯಾಯಾಲಯದ ತೀರ್ಪೀನತ್ತ-ಕಹಳೆ ನ್ಯೂಸ್

ನವದೆಹಲಿ: ದೇಶವೇ ಕುತೂಹಲದಿಂದ ಕಾಯುತ್ತಿರುವ 1992 ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ವಿಶೇಷ ನ್ಯಾಯಾಲಯ ಇಂದು 12 ಗಂಟೆಗೆ ಅಂತಿಮ ತೀರ್ಪು ಪ್ರಕಟಿಸಲಿದೆ. ಸಿಸಿಬಿ ವಿಶೇಷ ಕೋರ್ಟ್​ ನ್ಯಾಯಾಧೀಶ ಎಸ್.ಕೆ. ಯಾದವ್ ನೇತೃತ್ವದ ನ್ಯಾಯಪೀಠವು 28 ವರ್ಷಗಳ ನಂತರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಪ್ರಕಟಿಸಲಿದೆ. ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ 32 ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಾಗಿರುವಂತೆ ನಿರ್ದೇಶಿಸಲಾಗಿದೆ....
ಹೆಚ್ಚಿನ ಸುದ್ದಿ

ಡ್ರೈವಿಂಗ್ ಲೈಸೆನ್ಸ್‌ನಿಂದ ಆದಾಯ ತೆರಿಗೆ ತನಕ: ನಾಳೆಯಿಂದ ಈ 10 ನಿಯಮದಲ್ಲಿ ಬದಲಾವಣೆಯಾಗಲಿದೆ ತಪ್ಪದೇ ಗಮನಿಸಿ-ಕಹಳೆ ನ್ಯೂಸ್

ಡಿಜಿಟಲ್‌ಡೆಸ್ಕ್‌: ಅಕ್ಟೋಬರ್ 1, 2020 ರಿಂದ, ಅನೇಕ ನಿಯಮಗಳು ಬದಲಾಗಲಿವೆ, ಮೋಟಾರು ವಾಹನ ನಿಯಮಗಳು, ಉಜ್ವಲ ಯೋಜನೆ, ಆರೋಗ್ಯ ವಿಮೆ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ನಿಯಮಗಳು ನಾಳೆಯಿಂದ ಬದಲಾಗುತ್ತಿವೆ. ಆದ್ದರಿಂದ ಅವುಗಳ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಳ್ಳುವುದು ಮುಖ್ಯ. ಹಾಗಾದ್ರೇ ನಾಳೆ ಅಂದ್ರೆ ಅಕ್ಟೋಬರ್ 1ರಿಂದ ಏನು ಬದಲಾಗಲಿದೆ ಎಂದು ನಾವು ನಿಮಗೆ ತಿಳಿಸುತ್ತಿದ್ದೇವೆ. 1) ಡ್ರೈವಿಂಗ್ ಲೈಸೆನ್ಸ್ ಮತ್ತು ಆರ್ ಸಿಯಂತಹ ದಾಖಲೆಗಳ ಭೌತಿಕ ಪರಿಶೀಲನೆ ಇರೋದಿಲ್ಲ ಡ್ರೈವಿಂಗ್...
1 123 124 125 126 127 132
Page 125 of 132