ನಟಿ ಸಂಜನಾಗೆ ಇನ್ನಷ್ಟು ತಲೆಬಿಸಿ- ಸಿಮ್ ಇಲ್ಲದ ಮೊಬೈಲ್ ತಂದಿಟ್ಟಿದೆ ಸಂಕಷ್ಟ -ಕಹಳೆ ನ್ಯೂಸ್
ಬೆಂಗಳೂರು: ನಿನ್ನೆ ಕೋರ್ಟ್ ಜಾಮೀನು ನಿರಾಕರಿಸಿದ ನಂತರ ಜೈಲುಪಾಲಾಗಿರುವ ನಟಿ ರಾಗಿಣಿ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ರಾತ್ರಿ ಕಳೆದಿದ್ದರೆ, ಇತ್ತ ಸಾಂತ್ವನಾ ಕೇಂದ್ರದಲ್ಲಿ ನಟಿ ಸಂಜನಾ ಒಂಟಿಯಾಗಿದ್ದಾರೆ. ಈ ನಡುವೆಯೇ, ಸಂಜನಾರಿಗೆ ಸಿಸಿಬಿ ಅಧಿಕಾರಿಗಳು ಇನ್ನಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ ಸಂಜನಾ ತನಿಖೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತಿಲ್ಲ ಎಂದು ತಿಳಿದುಬಂದಿದೆ. ಈ ಹಿಂದೆ ವಿಚಾರಣೆ ವೇಳೆ ಸಂಜನಾ ಸರಿಯಾಗಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ, ಮತ್ತೆ ವಿಚಾರಣೆ ನಡೆಸಲು ಸಂಜನಾ...