ಕರೊನಾ ಭೀತಿಯಲ್ಲಿ ಸ್ಯಾನಿಟೈಸರ್ ಮೊರೆ ಹೋಗಿರುವಿರಾ? ಹಾಗಿದ್ದರೆ ಇದನ್ನೊಮ್ಮೆ ಓದಿಬಿಡಿ – ಕಹಳೆ ನ್ಯೂಸ್
ನವದೆಹಲಿ: ಇದೀಗ ಎಲ್ಲೆಲ್ಲೂ ಕರೊನಾ ಭೀತಿ. ಕರೊನಾ ವೈರಸ್ ಶುರುವಾದ ದಿನದಿಂದಲೂ ಕೇಳಿಬರುತ್ತಿರುವ ಇನ್ನೊಂದು ಹೆಸರು ಸ್ಯಾನಿಟೈಸರ್. ಸ್ಯಾನಿಟೈಸರ್‌ಗೆ ಡಿಮಾಂಡ್ ಜಾಸ್ತಿಯಾಗುತ್ತಿದ್ದಂತೆಯೇ ಹಲವು ಕಂಪೆನಿಗಳು ತಮ್ಮ ವಸ್ತುಗಳನ್ನು ತಯಾರು ಮಾಡುವುದನ್ನು ನಿಲ್ಲಿಸಿ ದುಡ್ಡಿನ ಆಸೆಗೆ ಬಿದ್ದು ಸ್ಯಾನಿಟೈಸರ್ ತಯಾರಿಕೆಯಲ್ಲಿ ತೊಡಗಿರುವುದು ಹೊಸ ವಿಷಯವೇನಲ್ಲ. ಈ ಬಗ್ಗೆ ಇದಾಗಲೇ ಸಾಕಷ್ಟು ಬಾರಿ ಎಚ್ಚರಿಕೆಯನ್ನೂ ನೀಡಲಾಗಿದೆ. ಸ್ಯಾನಿಟೈಸರ್ ಎಲ್ಲರಿಗೂ ಆಗಿಬರುವುದಿಲ್ಲ. ಚರ್ಮದ ಸಮಸ್ಯೆ ಇರುವವರು ಇದನ್ನು ಅತಿಯಾಗಿ ಬಳಸುವುದರಿಂದ ಮಾರಣಾಂತಿಕ ಕಾಯಿಲೆಗಳು ಬರುವುದು...