30 ಮಾರ್ಚ್ 2021 ರಂದು ಸಂತ ತುಕಾರಾಮ ಮಹಾರಾಜರ ಪುಣ್ಯತಿಥಿಯಿದೆ ಈ ನಿಮಿತ್ತ ಲೇಖನ ! ಸಂತ ತುಕಾರಾಮ ಮಹಾರಾಜರ ಬುದ್ಧಿಯ ಸೂಕ್ಷ್ಮತೆ !-ಕಹಳೆ ನ್ಯೂಸ್
ಸಂಕಲನಕಾರರು : ಶ್ರೀ. ವಿನೋದ ಕಾಮತ ವಕ್ತಾರರು, ಸನಾತನ ಸಂಸ್ಥೆ, ಕರ್ನಾಟಕ ಸಂತ ತುಕಾರಾಮ ಮಹಾರಾಜರು ದೇಹು ಎಂಬ ಊರಿನಲ್ಲಿ ವಾಸಿಸುತ್ತಿದ್ದರು. ಒಂದು ದಿನ ಆ ಊರಿನಲ್ಲಿ ಓರ್ವ ಸಾಧು ಬರುವವರಿದ್ದಾರೆ ಎಂಬ ಸುದ್ದಿ ಹರಡಿತು. ಸಾಧುವಿನ ಸ್ವಾಗತಕ್ಕಾಗಿ ಊರಿನ ಜನರು ದೊಡ್ಡ ಮಂಟಪವನ್ನು ನಿಲ್ಲಿಸಿದರು. ಅವರ ದರ್ಶನ ಪಡೆಯಲು ಬಹಳ ಜನ ನೆರೆದಿದ್ದರು. ಎಲ್ಲರೂ ಅವರ ಗುಣಗಾನ ಮಾಡುತ್ತಿದ್ದರು. ಆ ಸಾಧುವಿನ ದರ್ಶನದಿಂದ ನಮ್ಮ ಎಲ್ಲ ಇಚ್ಛೆಗಳು ಪೂರ್ಣಗೊಳ್ಳುವವು,...