ಮಿಟ್ಟೇಮರಿಯಲ್ಲಿ ಬ್ರಹ್ಮ ರಥೋತ್ಸವ ಅದ್ಧೂರಿ ಆಚರಣೆಗೆ ತಾಲೂಕು ಆಡಳಿತ ಬ್ರೇಕ್ ; ಭಕ್ತರಲ್ಲಿ ನಿರಾಸೆ –ಕಹಳೆ ನ್ಯೂಸ್
ಬಾಗೇಪಲ್ಲಿ : ಬಾಗೇಪಲ್ಲಿ ತಾಲೂಕು ಮಿಟ್ಟೇಮರಿ ಗ್ರಾಮದ ಐತಿಹಾಸಿಕ ಪುರಾಣ ಪ್ರಸಿದ್ದವಾದ ಗರುಡಾದ್ರಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಇದೆ ತಿಂಗಳು ಮಾರ್ಚ್ 29ರಂದು ನಡೆಯಬೇಕಾಗಿದ್ದ ಬ್ರಹ್ಮ ರಥೋತ್ಸವವನ್ನು ಕೋವಿಡ್-19 ಕರೋನ ವೈರಸ್ ಅನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರ್ವಜನಿಕರು ಪ್ರವೇಶಿಸಲು ನಿಷೇಧಿಸಿ ರದ್ದುಗೊಳಿಸಲಾಗಿದೆ ಎಂದು ಬಾಗೇಪಲ್ಲಿ ತಾಲೂಕು ದಂಡಾಧಿಕಾರಿಗಳು ಹಾಗೂ ತಹಶಿಲ್ದಾರ್ ರಾದ ಡಿ.ಎ.ದಿವಾಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ಅವರು ತಾಲೂಕು ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ...