ಮುಲ್ಕಿಯ ಬಳ್ಕುಂಜೆ ಪಟೇಲರ ಮನೆಯಲ್ಲಿ ಸುಮಾರು 300 ವರ್ಷಗಳಷ್ಟು ಹಳೆಯ ಇತಿಹಾಸವಿರುವ ದೈವಗಳ ಸೊತ್ತು ಪತ್ತೆ-ಕಹಳೆ ನ್ಯೂಸ್
ಮುಲ್ಕಿ : ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಪಟೇಲರ ಮನೆಯಲ್ಲಿ ಕಾಲಗರ್ಭದಲ್ಲಿ ಹುದುಗಿ ಹೋಗಿರುವ ಸುಮಾರು 300 ವರ್ಷಗಳಷ್ಟು ಹಳೆಯ ಇತಿಹಾಸವಿರುವ ದೈವಗಳ ಸೊತ್ತು ಪತ್ತೆಯಾಗಿದೆ. ಬಳ್ಕುಂಜೆ ಗುತ್ತು ಜುಮಾದಿ- ಬಂಟ ದೈವಗಳ ಕಾಲಾವಧಿ ನೇಮದಲ್ಲಿ ಬಳ್ಕುಂಜೆ ಪಟೇಲರ ಮನೆಯವರು ದೈವದ ಹತ್ತಿರ ತಮ್ಮ ಕಷ್ಟವನ್ನು ಪರಿಹರಿಸುವ ಸಲುವಾಗಿ ಪ್ರಾರ್ಥನೆ ಮಾಡಿದರು. ಆ ಪ್ರಕಾರವಾಗಿ ದೈವವು ಒಂದು ರಹಸ್ಯವನ್ನು ಪಟೇಲರ ಕುಟುಂಬದವರಿಗೆ ತಿಳಿಸಿತು. ಪುರಾತನ ಕಾಲದಲ್ಲಿ ಪಟೇಲರ ಮನೆಯಲ್ಲಿ ಜುಮಾದಿ- ಬಂಟ...