ಉತ್ತರ ನೈಜೀರಿಯಾದ ವಸತಿ ಶಾಲೆಯೊಂದರಿಂದ 317 ಬಾಲಕಿಯರ ಸಾಮೂಹಿಕ ಅಪಹರಣ-ಕಹಳೆ ನ್ಯೂಸ್
ಲಾಗೋಸ್ : ಉತ್ತರ ನೈಜೀರಿಯಾದ ವಸತಿ ಶಾಲೆಯೊಂದರಿಂದ 317 ಬಾಲಕಿಯರನ್ನು ಬಂದೂಕುಧಾರಿಗಳು ಶುಕ್ರವಾರ ಅಪಹರಿಸಿರುವ ಘಟನೆ ನಡೆದಿದೆ. ಇಲ್ಲಿನ ಜಂಗೆಬೆ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಕಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರ ಸಾಮೂಹಿಕ ಅಪಹರಣ ಮಾಡಲಾಗಿದ್ದು, ಪೊಲೀಸ್ ಮತ್ತು ಮಿಲಿಟರಿ ಪಡೆ ವಿದ್ಯಾರ್ಥಿನಿಯರ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಶಾಲೆಯ ಹತ್ತಿರದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇನಾ ಪಡೆಯಿದ್ದರೂ, ಬಾಲಕಿಯರನ್ನು ರಕ್ಷಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಇನ್ನೂ ಈ ಬಗ್ಗೆ ಎಲ್ಲಾ...