ಕೌಟುಂಬಿಕ ಕಲಹದಿಂದಾಗಿ ಐದು ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರು ಬಲಿ-ಕಹಳೆ ನ್ಯೂಸ್
ಜಾರ್ಖಂಡ್ ನ ಗುಮ್ಲಾದಲ್ಲಿ ಬುಡಕಟ್ಟು ಜನಾಂಗದ ಐವರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಹತ್ಯೆ ಕೌಟುಂಬಿಕ ಕಲಹದಿಂದ ನಡೆದಿದ್ದು, ಮೃತರನ್ನು ನಿಕೋಡಿನ್ ಟೊಪ್ನೊ, ಭೀಮ್ಸೆನ್ ಟೊಪ್ನೊ, ಶಿಲ್ವಂತಿ ಟೊಪ್ನೊ ಮತ್ತು ಐದು ವರ್ಷದ ಮಗು ಎಂದು ಗುರುತಿಸಲಾಗಿದೆ. ಕುಟುಂಬದಲ್ಲಿನ ವೈಯಕ್ತಿಕ ಕಲಹವೇ ಇದಕ್ಕೆ ಕಾರಣ ಎಂದು ಪ್ರಾಥಮಿಕ ವರದಿ ತಿಳಿಸಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಭದ್ರತೆ ಹಾಕಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ....