ತುಮಕೂರು ಜಿಲ್ಲೆ ಶಿರಾ ಮೂಲದ ಜೆನೀಶ್ ಎಂಬ ಮಗುವಿನ ಚಿಕಿತ್ಸೆಗೆ ರೂ 40. ಸಾವಿರದಷ್ಟು ಹಣವನ್ನು ಸಂಗ್ರಹಿಸಿ ಅವರ ಪೋಷಕರಿಗೆ ತಲುಪಿಸಿದ ಸಂಡೂರಿನ ಯುವಕರು-ಕಹಳೆ ನ್ಯೂಸ್
ಸಂಡೂರು : ತುಮಕೂರು ಜಿಲ್ಲೆ ಶಿರಾ ಮೂಲದ ಜೆನೀಶ್ ಎಂಬ ಹಸುಗೂಸು ಸ್ಪೈನಲ್ ಮಸ್ಕುಲರ್ ಆಟ್ರೋಫಿ ಎಂಬ ಕಾಯಿಲೆಗೆ ತುತ್ತಾಗಿತ್ತು. ಈ ಬಗ್ಗೆ ಆ ಮಗುವಿನ ಪೋಷಕರು ಆಘಾತಗೊಂಡಿದ್ದರು. ಚಿಕಿತ್ಸೆಗೆ ಸರಿ ಸುಮಾರು ಹದಿನಾರು ಕೋಟಿ ವೆಚ್ಚ ತಗುಲುವುದು ಎಂದು ವೈದ್ಯರು ತಿಳಿಸಿದಾಗ ಪೋಷಕರ ಜಂಘಾಬಲವೇ ಕುಗ್ಗಿಹೋಗಿತ್ತು. ಈ ಸುದ್ದಿ ಮಾದ್ಯಮಗಳಲ್ಲಿ ಭಿತ್ತರಗೊಂಡ ನಂತರ ಇಡೀ ರಾಜ್ಯವೇ ಮರುಗಿತ್ತು. ಮಗುವಿನ ಚಿಕಿತ್ಸೆಗೆ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡಲು ಮುಂದಾದರು....