Sunday, January 26, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ವಿಶ್ವದ 136 ಅಡಿ ಎತ್ತರದ ಶಿವದೇವಾಲಯದಲ್ಲಿ ಮಹಾ ಮೃತ್ಯುಂಜಯ ದೇವರ ಪ್ರತಿಷ್ಠೆ ಫೆ. 22 ರಿಂದ ಮಾರ್ಚ್ 3 ರ ತನಕ-ಕಹಳೆ ನ್ಯೂಸ್

ಅಸ್ಸಾಂ: ವಿಶ್ವದ 136 ಅಡಿ ಎತ್ತರದ ಶಿವದೇವಾಲಯ ಅಸ್ಸಾಂನ ನವಗಾಂವ್ ಜಿಲ್ಲೆಯ ನರಸಿಂಹ ಕ್ಷೇತ್ರದಲ್ಲಿ ಮಹಾ ಮೃತ್ಯುಂಜಯ ದೇವರ ಪ್ರತಿಷ್ಠೆ ಇದೇ ಫೆ. 22 ರಿಂದ ಮಾರ್ಚ್ 3 ರ ತನಕ ನಡೆಯಲಿದೆ. ಭಾರತದ ಎರಡನೇ ಮಹಾ ಮೃತ್ಯುಂಜಯ ದೇವರ ಪ್ರತಿಷ್ಠೆ ಇದಾಗಿದ್ದು, ಪ್ರಾಚೀನ ಮಹಾಮೃತ್ಯುಂಜಯ ದೇವಾಲಯ ಮಧ್ಯಪ್ರದೇಶದ ರೇವಾದಲ್ಲಿ ಈ ಮೊದಲು ನೆಲೆಯಾಗಿತ್ತು. ಇದೀಗಾ ಅಸ್ಸಾಮಿನ ನವಗಾಂವ್ ಜಿಲ್ಲೆಯ ನರಸಿಂಹ ಕ್ಷೇತ್ರದಲ್ಲಿ ನಿರ್ಮಾಣಗೊಂಡಿದೆ. ಪುರಾಣ ಇತಿಹಾಸದಲ್ಲಿ ಹಿರಣ್ಯಕಶಿಪು ತಪಸ್ಸು...
ಹೆಚ್ಚಿನ ಸುದ್ದಿ

ಬೆಳ್ತಂಗಡಿ ತಾಲೂಕಿನಲ್ಲಿ ಮನೆಯ ಪಕ್ಕಾಸಿಗೆ ಚೂಡಿದಾರ ಶಾಲು ಬಿಗಿದು ಪದವಿ ವಿದ್ಯಾರ್ಥಿನಿಯೊರ್ವಳು ಆತ್ಮಹತ್ಯೆ-ಕಹಳೆ ನ್ಯೂಸ್

ವೇಣೂರು : ಮನೆಯ ಪಕ್ಕಾಸಿಗೆ ಚೂಡಿದಾರ ಶಾಲು ಬಿಗಿದು ಪದವಿ ವಿದ್ಯಾರ್ಥಿನಿಯೊರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಳ್ತಂಗಡಿ ತಾಲೂಕು ವೇಣೂರು ಕತ್ತೋಡಿಬೈಲು ಬಳಿ ನಡೆದಿದೆ. ಬೆಳ್ತಂಗಡಿ ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿನಿಯಾಗಿರುವ ಸೌಮ್ಯಾ ಲಾಕ್‍ಡೌನ್ ಬಳಿಕ ತರಗತಿಗೆ ತೆರಳದೆ ಮಾನಸಿಕವಾಗಿ ಕುಗ್ಗಿದ್ದರು ಎಂದು ತಿಳಿದು ಬಂದಿದೆ. ಬೆಳಗ್ಗೆ ಎದ್ದು ಉಪಹಾರ ಸೇವಿಸಿದ್ದ ಸೌಮ್ಯ ಬಳಿಕ ಮನೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇನ್ನು ಈ ವೇಳೆ ಮನೆ ಮಂದಿ ಹುಡುಕಾಟ...
ಹೆಚ್ಚಿನ ಸುದ್ದಿ

ಗದಗದಲ್ಲಿ ಸ್ವಂತ ಮಗುವನ್ನೆ ಕೊಂದ ತಂದೆಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ-ಕಹಳೆ ನ್ಯೂಸ್

ಗದಗ : ಒಂದೂವರೆ ವರ್ಷದ ಪುಟ್ಟ ಕಂದಮ್ಮನನ್ನು ತಂದೆಯೊಬ್ಬ 2015ರ ಎಪ್ರಿಲ್ 6 ರಂದು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದನು. ಈ ಪ್ರಕರಣದ ವಿಚಾರಣೆ ನಡೆಸಿದ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಲಯವು ಕ್ರೂರಿ ತಂದೆಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿಯಾದ ಪ್ರಶಾಂತ್ ಗೌಡ ಪಾಟೀಲ್, ಪ್ರೀತಿ ಹೆಸರಿನಲ್ಲಿ ಮಹಿಳೆಯನ್ನು ನಂಬಿಸಿ ಮದುವೆಯಾಗಿ ದಂಪತಿಗಳಿಗೆ ಒಂದು ಮಗು ಜನಿಸಿತ್ತು. ನಂತರ...
ಹೆಚ್ಚಿನ ಸುದ್ದಿ

ತುಮಕೂರಿನಲ್ಲಿ ಮದುವೆಗೆ ಹೊರಟಿದ್ದ ಬಸ್ ಉರುಳಿ ಬಿದ್ದ ಪರಿಣಾಮ ಇಬ್ಬರ ಸಾವು; 20 ಮಂದಿಗೆ ಗಾಯ-ಕಹಳೆ ನ್ಯೂಸ್

ತುಮಕೂರು : ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮೆಕ್ಕೇರಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಮದುವೆಗೆ ಹೊರಟಿದ್ದ ಬಸ್ ಉರುಳಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರ್ಘಟನೆ ನಡೆದಿದೆ. ಈ ಘಟನೆ ವಿನಾಯಕ ಹೆಸರಿನ ಖಾಸಗಿ ಬಸ್ ನಲ್ಲಿ ತೋವಿನಕೆರೆ ಸಮೀಪದ ಶಂಭೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಿಂದ ಶಿರಾ ತಾಲೂಕಿನ ಬುಕ್ಕಾಪಟ್ಟಣ ಗ್ರಾಮಕ್ಕೆ ಮದುವೆ ಕಾರ್ಯಕ್ರಮಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಶಿರಾ ತಾಲೂಕಿನ...
ಹೆಚ್ಚಿನ ಸುದ್ದಿ

ಕಾಂಚನದಲ್ಲಿ ಫೆಬ್ರುವರಿ 27 ರಂದು 67ನೇ ವರ್ಷದ ಕಾಂಚನೋತ್ಸವ-ಕಹಳೆ ನ್ಯೂಸ್

ಕಾಂಚನದಲ್ಲಿ ಫೆಬ್ರುವರಿ 27 ರಂದು 67ನೇ ವರ್ಷದ ಕಾಂಚನೋತ್ಸವ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಂಗೀತ ಪೋಷಕರಾಗಿ ಬರಮಾಡಿಕೊಳ್ಳಲಾಗಿದೆ. ಸಂಗೀತ ಪೋಷಣೆಯ ಸ್ಥಾನತ್ರಯಗಳು - ಅರಮನೆ, ಗುರುಮನೆ, ದೇವರಮನೆಗಳು. ಧರ್ಮಪೀಠಗಳಾದ ಗುರುಮನೆಗಳಲ್ಲಿ, ಮಠಗಳಲ್ಲಿ ಭಗವದ್ಭಕ್ತಿಯನ್ನೂ ಶೀಲಸಂಪನ್ನತೆಯನ್ನೂ ಆಧ್ಯಾತ್ಮಿಕ ಪ್ರಜ್ಞೆಯನ್ನೂ ಜನಸಾಮಾನ್ಯರಲ್ಲಿ ಜಾಗೃತಗೊಳಿಸುವುದಕ್ಕಾಗಿ ಸಂಗೀತಕಚೇರಿಗಳು ನಡೆಯುತ್ತಿದ್ದವು. ದೇವಸ್ಥಾನಗಳೂ ರಾಜಾಸ್ಥಾನಗಳಂತೆ, ಧರ್ಮಸ್ಥಾನಗಳಂತೆ, ಬಹುಶಃ ಇನ್ನೂ ಹೆಚ್ಚಾಗಿ, ಇನ್ನೂ ಚೆನ್ನಾಗಿ ನಮ್ಮ ಸಂಗೀತವನ್ನು ಪೋಷಿಸಿ ಬೆಳೆಸಿದವು. ವಿಲಾಸದ, ಆಡಂಬರದ ಬಹಿರಂಗ ನಿಬರ್ಂಧಗಳ ಬಾಧೆಯಿಲ್ಲದೆ ಇಲ್ಲಿ ಸಂಗೀತ...
ಹೆಚ್ಚಿನ ಸುದ್ದಿ

ಕಾಸರಗೋಡಿನ ಬೋಳಂಗಳದಲ್ಲಿ ಇಂದು ಸೋಲಾರ್ ಪಾರ್ಕ್ ನ್ನು ಆನ್ ಲೈನ್ ಮೂಲಕ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ-ಕಹಳೆ ನ್ಯೂಸ್

ಉಪ್ಪಳ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಪೈವಳಿಕೆಯ ಬೋಳಂಗಳದಲ್ಲಿ ಸ್ಥಾಪಿಸಿರುವ ಸೋಲಾರ್ ಪಾರ್ಕ್ ನ್ನು ಆನ್ ಲೈನ್ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಗುರಿಯೊಂದಿಗೆ ಆರಂಭಿಸಿರುವ ಸೋಲಾರ್ ಪಾರ್ಕ್ ನ ಎರಡನೇ ಯೋಜನೆಯಾದ ಪೈವಳಿಕೆಯ ಕೊಮ್ಮಂಗಳದಲ್ಲಿ ಸುಮಾರು 250 ಎಕರೆ ಸ್ಥಳದಲ್ಲಿ 50 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸೋಲಾರ್ ಪಾರ್ಕ್ ನಿರ್ಮಿಸಲಾಗಿದ್ದು, ಈ ಯೋಜನೆಯನ್ನು ಜವಾಹರ್ ಲಾಲ್ ನೆಹರೂ ನ್ಯಾಷನಲ್ ಸೋಲಾರ್ ಮಿಷನ್ ನಡಿ ಜಾರಿಗೊಳಿಸಲಾಗಿದೆ....
ಹೆಚ್ಚಿನ ಸುದ್ದಿ

ಕೋಟ ‘ಶ್ರೀ ಅಮೃತೇಶ್ವರಿ ದೇವಸ್ಥಾನ’ದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ-ಕಹಳೆ ನ್ಯೂಸ್

ಕೋಟ : ಕೋಟ ‘ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಾಲಯ’ ದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಬುಧವಾರ ನಡೆಯಿತು. ರಾಜ್ಯ ಸರಕಾರದ ಹಿಂದೂ ಧಾರ್ಮಿಕ ದತ್ತಿ ಸಚಿವಾಲಯದ ಮಹಾತ್ವಕಾಂಕ್ಷೆಯ ಈ ಯೋಜನೆಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸರಕಾರದ ವತಿಯಿಂದ ಜಾರಿಗೆ ತಂದು ಬಡ ಹಾಗೂ ಮಧ್ಯಮವರ್ಗದವರ ಬಾಳಿಗೆ ನೆರವಾದರು. ಶ್ರೀ ದೇವಾಲಯದಲ್ಲಿ ನಡೆದ ಸಪ್ತಪದಿ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಸಾವಿರಾರು ಜನರು ಸಾಕ್ಷಿಯಾಗಿ ವೇ.ಮೂ.ಮಧುಸೂದನ್...
ಹೆಚ್ಚಿನ ಸುದ್ದಿ

ಉತ್ತರಪ್ರದೇಶದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಬಾಲಕಿಯರ ನಿಗೂಢ ಸಾವು; ಇನ್ನೊಬ್ಬ ಬಾಲಕಿಯ ಸ್ಥಿತಿ ಗಂಭೀರ-ಕಹಳೆ ನ್ಯೂಸ್

ಲಕ್ನೋ : ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಬಾಲಕಿಯರು ನಿಗೂಢವಾಗಿ ಸಾವನ್ನಪ್ಪಿದ್ದು, ಹಲ್ಲೆಗೆ ತುತ್ತಾಗಿದ್ದ ಇನ್ನೊಬ್ಬ ಬಾಲಕಿಯ ಸ್ಥಿತಿ ಗಂಭೀರವಾದ ಘಟನೆ ಉತ್ತರಪ್ರದೇಶದ ಉನಾವೋ ಜಿಲ್ಲೆಯ ಅಶೋಹ ಬ್ಲಾಕ್ ನಲ್ಲಿ ನಡೆದಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು ಬಾಲಕಿಯರ ಮೇಲೆ ಹಲ್ಲೆ ನಡೆಸಲಾಗಿದ್ದು, ಮೃತಪಟ್ಟ ಇಬ್ಬರು ಬಾಲಕಿಯರ ಮೃತದೇಹ ಕೈ ಕಾಲುಗಳನ್ನು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಈ ಸಂಬಂಧ...
1 51 52 53 54 55 132
Page 53 of 132