ಬಜೆಟ್ ಪ್ರತಿಯೊಂದಿಗೆ ತೆರಳಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್-ಕಹಳೆ ನ್ಯೂಸ್
ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೂರನೇ ಬಾರಿ ಕೇಂದ್ರ ಮುಂಗಡ ಪತ್ರ ಮಂಡಿಸಲಿರುವ ಇವರು ಇದೀಗ ಹಣಕಾಸು ಸಚಿವಾಲಯದಿಂದ ಬಜೆಟ್ ಪ್ರತಿ ಜತೆ ತೆರಳಿದ್ದಾರೆ. ಕೇಂದ್ರ ಸಚಿವ ಸಂಪುಟ ಮುಂಗಡ ಪತ್ರಕ್ಕೆ ಅನುಮೋದನೆ ನೀಡಿದ ಬಳಿಕ ಬೆಳಗ್ಗೆ 11 ಗಂಟೆಗೆ ಮುಂಗಡ ಪತ್ರ ಮಂಡನೆಯಾಗಲಿದೆ. ಹಾಗೂ ಕೊರೋನಾ ಕಾರಣದಿಂದಾಗಿ ಈ ಬಾರಿ ಬಜೆಟ್ ನ ಮುದ್ರಿತ ಪ್ರತಿ ಇರಲ್ಲ, ಆ್ಯಪ್ ನಲ್ಲಿ ಬಜೆಟ್ ಸಮಗ್ರ ಮಾಹಿತಿ ದೊರೆಯಲಿದೆ....