ದಲಿತ ಯುವತಿಯ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ-ಕಹಳೆ ನ್ಯೂಸ್
ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ ದಲಿತ ಯುವತಿಯ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆಯ ಕುರಿತು ಯುವತಿಯ ಕುಟುಂಬವು ತಮ್ಮ ಪ್ರದೇಶದ ಯುವಕರು ಕಿರುಕುಳ ಕೊಟ್ಟು ಕೊಲೆ ಮಾಡಿ ನಂತರ ಆಕೆಯ ದೇಹವನ್ನು ಗಲ್ಲಿಗೇರಿಸಿದ್ದಾರೆಂದು ಆರೋಪಿಸಿದ್ದಾರೆ. 18 ಪ್ರಾಯದ ಪ್ರೀತಿ ಎಂಬ ಯುವತಿ ಶನಿವಾರ ಮಧ್ಯಾಹ್ನ ತರಕಾರಿಗಳನ್ನು ಖರೀದಿಸಲು ಮನೆಯಿಂದ ತೆರಳಿದ್ದವಳು ಮತ್ತೆ ಮನೆಗೆ ಹಿಂದಿರುಗಲಿಲ್ಲ. ಬಳಿಕ, ಆಕೆಯ ಕುಟುಂಬದ ಸದಸ್ಯರು ಬೆಲಾಟಾಲ್ ಪ್ರದೇಶದ...