ಎಕ್ಸಲೆಂಟ್ ಮೂಡಬಿದಿರೆ ಕಾಲೇಜಿನಲ್ಲಿ ಸಂಕ್ರಾಂತಿ ಹಬ್ಬ-ಕಹಳೆ ನ್ಯೂಸ್
ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನ ವಸತಿ ನಿಲಯದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮೂಡುಬಿದಿರೆಯ ದಕ್ಷ, ಪ್ರಾಮಾಣಿಕ ಪೋಲಿಸ್ ವೃತ್ತ ನಿರೀಕ್ಷಕರಾದ ಶ್ರಿ ದಿನೇಶ್ ಕುಮಾರ್ ರವರು ಸಂಕ್ರಾಂತಿ ಹಬ್ಬವನ್ನು ಉದ್ಘಾಟಿಸಿ ‘ಸಂಕ್ರಾಂತಿಯು ಪರಿವರ್ತನೆಯ ಕಾಲವಾಗಿದೆ. ನಾವೂ ಕೂಡ ನಮ್ಮೊಳಗಿನ ನಕಾರಾತ್ಮಕತೆಯನ್ನು ದೂರ ಮಾಡಿ ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡು ಬದಲಾದ ಕಾಲಘಟ್ಟದಲ್ಲಿ ಹೊಸ ಸಾಧ್ಯತೆಗಳ ಬಗ್ಗೆ ಚಿಂತಿಸಬೇಕಾಗಿದೆ. ಮನುಷ್ಯನಲ್ಲಿರುವ ಸುಪ್ತ ಪ್ರಜ್ಞೆಯನ್ನು ಜಾಗೃತವಾಗಿರಿಸಿಕೊಂಡು ಉತ್ತಮ ಮಾರ್ಗದರ್ಶನ ಪಡೆಯುತ್ತಾ ಜೀವನದಲ್ಲಿ...