ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ 65ನೇ ವರ್ಷದ ಮಹಾಸಭೆ – ಕಹಳೆ ನ್ಯೂಸ್
ವಿಟ್ಲ: ಕೋವಿಡ್ 19 ಹಿನ್ನಲೆಯಲ್ಲಿ ಕೆಲವೊಂದು ಲೋಪಗಳು ಆಗಿದ್ದು, ಸದಸ್ಯರ ಬೇಡಿಕೆಯಂತೆ ಮುಂದಿನ ಬಾರಿಗೆ ಅದನ್ನು ಸರಿಪಡಿಸಲಾಗುವುದು. ಹಾಗೂ ಕಲ್ಲಡ್ಕ ಶಾಖೆಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಒಪ್ಪಿಗೆ ಬೇಕಾಗಿದ್ದು, ಅದರ ನಿರೀಕ್ಷೆಯಲ್ಲಿದ್ದೇವೆ ಎಂದು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ ಅಧ್ಯಕ್ಷ ಎಚ್. ಜಗನ್ನಾಥ ಸಾಲ್ಯಾನ್ ಹೇಳಿದರು. ಅವರು ಬುಧವಾರ ವಿಟ್ಲದ ಬೊಬ್ಬೆಕೇರಿ ಅಕ್ಷಯ ಸಮುದಾಯ ಭವನದಲ್ಲಿ ನಡೆದ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ...