ಕಷಾಯ ಕುಡಿಯುವ ಮುನ್ನ… ಹಾಲೆ ಮರದ ಬಗ್ಗೆ ತಿಳಿಯೋಣ.!! – ಕಹಳೆ ನ್ಯೂಸ್
"ಪಾಲೆದ ಮರತ ಕಷಾಯ ಪರ್ಜಿಂಡ ವರ್ಷೋ ಇಡೀ ಇಜ್ಜಿ ಸೊರ್ದಯ" ಎಂಬ ಮಾತು ತುಳುವರಲ್ಲಿ ಪ್ರಚಲಿತ. ತೀಕ್ಷ್ಣವಾದ ಕಂಪು ನೀಡುವ ಈ ಮರಕ್ಕೆ ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ಹಾಗಾಗಿ ಆಟಿ ತಿಂಗಳ ಅಮಾವಾಸ್ಯೆಯ ಸಂದರ್ಭದಲ್ಲಿ ಈ ಮರದ ಕಷಾಯದ ಸೇವನೆ ತುಳುವರ ನಂಬಿಕೆಗೆ ಅರ್ಹವಾಗಿದೆ. ಮರದ ಬಗ್ಗೆ ಒಂದಿಷ್ಟು ತಿಳಿಯೋಣ : ಹಾಲೆಮರ,ಏಳೆಲೆಹೊನ್ನೆ, ಕೊಡಾಲೆಮರ,ಸಪ್ತಪರ್ಣಿ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಈ ಮರದಲ್ಲಿ ಕರೀಪಾಲೆ ಮತ್ತು ಬಿಳಿಪಾಲೆ ಎಂಬ ಎರಡು...