ರೆಕ್ಕೆ ತುಂಡಾಗಿ ನದಿಗೆ ಬಿದ್ದ ಹೆಲಿಕ್ಯಾಪ್ಟರ್ – ಕುಟುಂಬ ಸಹಿತ ಉದ್ಯಮಿ ದಾರುಣ ಸಾವು : ಭಯಾನಕ ವಿಡಿಯೋ ವೈರಲ್ -ಕಹಳೆ ನ್ಯೂಸ್
ನ್ಯೂಯಾರ್ಕ್ : ಮಾರ್ಗಮಧ್ಯದಲ್ಲಿಯೇ ರೆಕ್ಕೆ ತುಂಡಾಗಿ ಹೆಲಿಕ್ಯಾಪ್ಟರ್ ಒಂದು ನದಿಗೆ ಬಿದ್ದ ಪರಿಣಾಮ ಮೂವರು ಮಕ್ಕಳೂ ಸೇರಿದಂತೆ ಆರು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನ್ಯೂಯಾರ್ಕ್ ನ ಹಡ್ಸನ್ ನದಿ ಪಾತ್ರದಲ್ಲಿ ನಡೆದಿದೆ. ಮೃತಪಟ್ಟವರು ಸ್ಪೇನ್ ನಿಂದ ಬಂದಿದ್ದ ಪ್ರಯಾಣಿಕರು ಹಾಗೂ ಹೆಲಿಕ್ಯಾಪ್ಟರ್ ಪೈಲೆಟ್ ಎಂದು ತಿಳಿದುಬಂದಿದೆ. ಎಸ್ಕೋಬಾರ್ ಎಂಬಾತ ಸ್ಪೇನ್‌ನ ಖ್ಯಾತ ಉದ್ಯಮಿಯಾಗಿದ್ದು ತನ್ನ ಪತಿ ಮತ್ತು ಮೂವರು ಮಕ್ಕಳೊಂದಿಗೆ ಪ್ರವಾಸಕ್ಕೆ ಬಂದಿದ್ದರು. ಪೈಲೆಟ್ ಸೇರಿದಂತೆ ಕುಟುಂಬದ...