Wednesday, April 16, 2025

ಅಂತಾರಾಷ್ಟ್ರೀಯ

ಅಂತಾರಾಷ್ಟ್ರೀಯಉಡುಪಿದಕ್ಷಿಣ ಕನ್ನಡಸುದ್ದಿ

ಸಿಡ್ನಿಯಲ್ಲಿ ಪ್ರಧಾನಿ ಸ್ವಾಗತಕ್ಕೆ ಕರಾವಳಿಯ ತಂಡದ ನೃತ್ಯ ; ಯಕ್ಷಗಾನದ ಸೊಬಗನ್ನು ಅಳವಡಿಸಿದ ವಿಶೇಷ ನೃತ್ಯದ ಮೂಲಕ ನರೇಂದ್ರ ಮೋದಿಯವರಿಗೆ ಸ್ವಾಗತ – ಕಹಳೆ ನ್ಯೂಸ್

ಮಂಗಳೂರು: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೇ 23ರಂದು ಸಿಡ್ನಿಯಲ್ಲಿ ಭಾರತೀಯ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆಗ ಮೋದಿಯವರನ್ನು ಸ್ವಾಗತಿಸಲು ನಡೆಯಲಿರುವ ವಿಶೇಷ ನೃತ್ಯ ಕಾರ್ಯಕ್ರಮವೊಂದು ಮಂಗಳೂರು ಮೂಲದವರಿಂದ ಸಿದ್ಧಗೊಂಡಿದೆ.   ಮಂಗಳೂರು ಮೂಲದ ವಿದುಷಿ ಪಲ್ಲವಿ ಭಾಗವತ್‌ ಅವರು ತಮ್ಮ ನೃತ್ಯ ಸಂಸ್ಥೆ “ನಾಟ್ಯೋಕ್ತಿ ಶಿಷ್ಯ ವೃಂದದೊಂದಿಗೆ “ಕಾಂತಾರ’ ಸಿನೆಮಾದ ಹಾಡುಗಳ ಮೂಲಕ ಮನರಂಜಿಸಲು ಸಜ್ಜಾಗಿದ್ದಾರೆ. ಕರ್ನಾಟಕದ ಹಳ್ಳಿಯ ಸೊಬಗನ್ನು ತೋರಿಸುವ ಜಾನಪದ ನೃತ್ಯ ಹಾಗೂ...
ಅಂತಾರಾಷ್ಟ್ರೀಯಸುದ್ದಿ

2,000 ರೂ. ಮುಖಬೆಲೆಯ ನೋಟ್‌ ಬ್ಯಾನ್‌ ಮಾಡಿದ RBI – ಕಹಳೆ ನ್ಯೂಸ್

ನವದೆಹಲಿ: 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ವಾಪಸ್‌ ಪಡೆದಿದೆ. ಇನ್ಮುಂದೆ ಗ್ರಾಹಕರಿಗೆ 2,000 ರೂ. ಮುಖಬೆಲೆಯ ನೋಟುಗಳನ್ನು ನೀಡದಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಬೇಕು. ಅವುಗಳನ್ನು 2023ರ ಸೆಪ್ಟೆಂಬರ್ 30 ರೊಳಗೆ ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಿ ಎಂದು ಆರ್‌ಬಿಐ ಪ್ರಕಟಣೆ ಮೂಲಕ ಸೂಚಿಸಿದೆ. ಸೆ.30 ರವರೆಗೆ 2,000 ರೂ. ಮುಖಬೆಲೆಯ ನೋಟುಗಳನ್ನು ಗ್ರಾಹಕರು ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲು...
ಅಂತಾರಾಷ್ಟ್ರೀಯಸುದ್ದಿ

ಪಾಕಿಸ್ತಾನದಲ್ಲಿ ಅರಾಜಕತೆ ತಾಂಡವ ; ಪಾಕಿಸ್ತಾನ ಇಬ್ಭಾಗವಾಗಲಿದೆಯೇ..!? – ಕಹಳೆ ನ್ಯೂಸ್

ಇಸ್ಲಾಮಾಬಾದ್:‌ ಪಾಕಿಸ್ತಾನ ದುರಂತ ಅವಸಾನದತ್ತ ಸಾಗುತ್ತಿದೆ ಎಂದು ಆರೋಪಿಸಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ದೇಶ ಇಬ್ಭಾಗವಾಗುವ ಸನಿಹದಲ್ಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆಡಳಿತಾರೂಢ ಸರ್ಕಾರದ ಕಾರ್ಯವೈಖರಿ ಖಂಡಿಸಿ ಇಮ್ರಾನ್‌ ಖಾನ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ‌, ಪಾಕ್‌ ಸರ್ಕಾರ ತನ್ನ ಪಕ್ಷದ ಬೆಂಬಲಿಗರ ವಿರುದ್ಧ ಸೇನೆಯನ್ನು ಎತ್ತಿಕಟ್ಟಿದ್ದು, ಪಿಟಿಐ ಪಕ್ಷವನ್ನು ಮುಗಿಸಲು ಸಂಚು ಹೂಡಿರುವುದಾಗಿ ಆರೋಪಿಸಿದ್ದಾರೆ. ಪಾಕಿಸ್ತಾನದಲ್ಲಿ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದಿದ್ದು, ರಾಜಕೀಯ ಅಸ್ಥಿರತೆ ದೇಶವನ್ನು ಅಪಾಯದ ಕೂಪಕ್ಕೆ ತಳ್ಳಿದೆ....
ಅಂತಾರಾಷ್ಟ್ರೀಯಸುದ್ದಿ

ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ವಿಶ್ವದ ದೊಡ್ಡಣ್ಣ ಅಮೆರಿಕ –ಕಹಳೆ ನ್ಯೂಸ್

ಅಮೆರಿಕ ಸಾಲದ ಸುಳಿಗೆ ಸಿಲುಕಿ ವಿಲ ವಿಲ ಒದ್ದಾಡುತ್ತಿದೆ. ಕಳೆದ ವರ್ಷವೇ ಅಮೆರಿಕ ಸರ್ಕಾರದ ಸಾಲಮಿತಿ ಮೀರಿಹೋಗಿದೆ.  ಈಗ ಕೆಲವೇ ದಿನಗಳಲ್ಲಿ, ಅಥವಾ ಹೆಚ್ಚೆಂದರೆ ಕೆಲವೇ ತಿಂಗಳಲ್ಲಿ ಅಮೆರಿಕ ಸಾಲದ ಹೊಡೆತಕ್ಕೆ ಕೆಳಗಪ್ಪಳಿಸಿ ಬೀಳಲಿದೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಅಮೆರಿಕದಲ್ಲಿ ಶೀತ ಆದರೆ ಜಗತ್ತಿನ ಇತರ ಭಾಗದಲ್ಲಿ ನೆಗಡಿ ಆಗುತ್ತಂತೆ. ಇದು ಜೋಕ್ ಅಂತಾದರೂ ವಾಸ್ತವದಲ್ಲಿ ನಿಜ. ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕ ಎಂದರೆ ಜಾಗತಿಕ ಆರ್ಥಿಕತೆಯ  ಬೆಳವಣಿಗೆಗೆ...
ಅಂತಾರಾಷ್ಟ್ರೀಯಬೆಂಗಳೂರುರಾಷ್ಟ್ರೀಯಸುದ್ದಿ

” ಆಪರೇಷನ್ ಕಾವೇರಿ ” ಮೋದಿ ಸರ್ಕಾರದಿಂದ ಯಶಸ್ವಿ ಕಾರ್ಯಾಚರಣೆ ; ಸುಡಾನ್‌ನಲ್ಲಿ ಸಿಲುಕಿದ್ದ 229 ಭಾರತೀಯರು ಮರಳಿ ತಾಯಿನಾಡಿಗೆ – ಕಹಳೆ ನ್ಯೂಸ್

ನವದೆಹಲಿ,ಏ.30 : ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ 229 ಭಾರತೀಯರನ್ನು ಆಪರೇಷನ್ ಕಾವೇರಿ ಹೆಸರಿನ ಕಾರ್ಯಾಚರಣೆಯ ಮೂಲಕ ಮತ್ತೊಂದು ಬ್ಯಾಚ್ ಮೂಲಕ ದೆಹಲಿಗೆ ಕರೆತರಲಾಗಿದೆ. 365 ಜನರು ಆಫ್ರಿಕನ್ ದೇಶ ಸುಡಾನ್‌ನಿಂದ ದೆಹಲಿಗೆ ಮರಳಿದ ಒಂದು ದಿನದ ನಂತರ, ಮತ್ತೊಂದು ಬ್ಯಾಚ್ ನಲ್ಲಿ ಇಂದು 229 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ರವಾನೆ ಮಾಡಲಾಗಿದೆ.ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್,  ಮತ್ತೊಂದು ವಿಮಾನವು 229...
ಅಂತಾರಾಷ್ಟ್ರೀಯಸುದ್ದಿ

ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಂಡ ಎಲಾನ್ ಮಸ್ಕ್ ಸ್ಪೇಸ್‌ಎಕ್ಸ್ ರಾಕೆಟ್ – ಕಹಳೆ ನ್ಯೂಸ್

ಟೆಕ್ಸಾಸ್: ಉದ್ಯಮಿ ಎಲಾನ್​ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ನಿರ್ಮಿಸಿದ ಜಗತ್ತಿನ ಅತಿದೊಡ್ಡ ರಾಕೆಟ್ ಸ್ಪೇಸ್ಎಕ್ಸ್ನ ರಾಕೆಟ್ ಗುರುವಾರ ಪ್ರಾಯೋಗಿಕ ಉಡಾವಣೆಯಲ್ಲೇ ಸ್ಫೋಟಗೊಂಡಿದೆ. ಇಂದು ಟೆಕ್ಸಾಸ್ನ ಬೊಕಾ ಚಿಕಾದಲ್ಲಿರುವ ಖಾಸಗಿ ಸ್ಪೇಸ್ಎಕ್ಸ್ ಕಂಪೆನಿಯ ಸ್ಟಾರ್ಬೆಸ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಈ ದೈತ್ಯಾಕಾರದ ರಾಕೆಟ್ ಅನ್ನು ಉಡಾವಣೆ ಮಾಡಲಾಗಿತ್ತು. ಆದರೆ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಂಡಿದ್ದು, ಗಲ್ಫ್ ಆಫ್ ಮೆಕ್ಸಿಕೊಗೆ ಅಪ್ಪಳಿಸಿದೆ. ಗಗನಯಾತ್ರಿಗಳನ್ನು ಚಂದ್ರ, ಮಂಗಳ ಹಾಗೂ ಅದರಾಚೆಗಿನ ಗ್ರಹಗಳಿಗೆ ಕಳುಹಿಸುವ...
ಅಂತಾರಾಷ್ಟ್ರೀಯಕ್ರೈಮ್ಸುದ್ದಿ

ಮಹಿಳೆಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ ಎಸಗಿದ ಆರೋಪಿ ನೋಕೋಚಾ ಕಾಸ್ಮೀರ್ ಅರೆಸ್ಟ್..! – ಕಹಳೆ ನ್ಯೂಸ್

ಯುಕೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ವಂಚನೆ ಎಸಗಿದ ನೈಜೀರಿಯನ್ ಪ್ರಜೆಯನ್ನು ಬಂಧಿಸಲಾಗಿದೆ. ಬಂಧಿತನನ್ನು ನೋಕೋಚಾ ಕಾಸ್ಮೀರ್ ಇಕೆಂಬಾ ಎಂದು ಗುರುತಿಸಲಾಗಿದೆ. ಆರೋಪಿಯು, ಯುಕೆ ದೇಶದ ಶೆಲ್ ಆಯಿಲ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ವಿವಿಧ ಶುಲ್ಕಗಳ ಹೆಸರಿನಲ್ಲಿ ಹಣ ಹಾಕಿಸಿಕೊಂಡು ಅಮಾಯಕ ಜನರನ್ನು ಈತ ವಂಚಿಸುತ್ತಿದ್ದ. ಇದೀಗ ಆರೋಪಿಯನ್ನು ಬೆಂಗಳೂರು ನಗರದ ಈಶಾನ್ಯ ವಿಭಾಗದ ಸಿ.ಇ.ಎನ್ ಪೊಲೀಸರು ಫೆ. 11 ರಂದು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು...
ಅಂತಾರಾಷ್ಟ್ರೀಯರಾಷ್ಟ್ರೀಯಸುದ್ದಿ

ನೇಪಾಳದಲ್ಲಿ ವಿಮಾನ ದುರಂತ : ಭಾರತೀಯ ಮಹಾರಾಷ್ಟ್ರದ ಥಾಣೆ ಮೂಲದ ಕುಟುಂಬ ಸೇರಿದಂತೆ 72 ಪ್ರಯಾಣಿಕರು ಸಜೀವ ದಹನ – ಕಹಳೆ ನ್ಯೂಸ್

ಕಠ್ಮಾಂಡ್‌ : ನೇಪಾಳದ ಭೀಕರ ವಿಮಾನ ಅಪಘಾತವಾಗಿದ್ದು, ನಾಲ್ವರು ಭಾರತೀಯರು ಸೇರಿದಂತೆ 72 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಹಾರಾಷ್ಟ್ರದ ಥಾಣೆ ಮೂಲದ ಕುಟುಂಬ ಸಜೀವ ದಹನಗೊಂಡಿದ್ದಾರೆ. ಆಶೋಕ್‌ ಕಲುಮಾರ್‌,ತ್ರಿಪಾಠಿ, ಪತ್ನಿ ವೈಭವಿ ಬಾಂಡೇಕರ್‌ಮಕ್ಕಳಾದ ಧನುಷ್‌, ರಿತಿಕಾ ಸೇರಿದಂತೆ ಐವರು ಸಜೀವ ದಹನಗೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಕಠ್ಮಂಡುದಿಂದ ಪೋಖಾರಾಗೆ ಹೊರಟಿದ್ದ ಯೇತಿ ಏರ್ಲೈನ್ಸ್ನ ಎಟಿಆರ್ 72 ವಿಮಾನವು ಇಂದು ಬೆಳಿಗ್ಗೆ ಕಾಸ್ಕಿ ಜಿಲ್ಲೆಯ ಪೋಖಾರಾದಲ್ಲಿ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ಅಪಘಾತಕ್ಕೀಡಾದ ವಿಮಾನದಲ್ಲಿ...
1 8 9 10 11 12 17
Page 10 of 17
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ