ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಸೇವೆಯಲ್ಲಿ ವ್ಯತ್ಯಯ | ಮೆಸೇಜ್ ಹೋಗುತ್ತಿಲ್ಲ, ಬರುತ್ತಿಲ್ಲ.. ರೀಸ್ಟಾರ್ಟ್ ಮಾಡಿ ಮಾಡಿ ರಾತ್ರಿಯಿಡೀ ಪರದಾಡಿದ ಸಾಮಾಜಿಕ ಜಾಲತಾಣ ಪ್ರೀಯರು – ಕಹಳೆ ನ್ಯೂಸ್
ನವದೆಹಲಿ, ಅ. 05 : ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಈ ನಡುವೆ ಉಂಟಾಗಿರುವ ವ್ಯತ್ಯಯಕ್ಕೆ ಫೇಸ್ ಬುಕ್ ಸಂಸ್ಥೆ ಕ್ಷಮೆಯಾಚಿಸಿದೆ. ಇನ್ನು ಉಂಟಾಗಿರುವ ವ್ಯತ್ಯಯದಿಂದಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗದ ಕಾರಣ ಭಾರತ ಸೇರಿದಂತೆ ವಿಶ್ವದಾದ್ಯಂತ ಲಕ್ಷಾಂತರ ಗ್ರಾಹಕರು ಪರದಾಡುವಂತಾಗಿದೆ. ವಾಟ್ಸಾಪ್ ಸ್ಥಗಿತಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ ಡೌನ್‌ಟೆಕ್ಟರ್ ಪ್ರಕಾರ, ಶೇ. 40 ರಷ್ಟು ಬಳಕೆದಾರರಿಗೆ ಆಪ್ ಡೌನ್‌ಲೋಡ್ ಮಾಡಲು...