ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಟಿಕೆಟ್ ಮುಂದಿನ ವರ್ಷಕ್ಕೂ ಅನ್ವಯ – ಕಹಳೆ ನ್ಯೂಸ್
ನವದೆಹಲಿ, ಜು. 23 : ಕೊರೊನಾ ಕಾರಣದಿಂದ ಕ್ರೀಡಾ ಕ್ಷೇತ್ರದ ಮೇಲೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಕ್ರೀಡಾ ಚಟುವಟಿಕೆಗಳು ಪೂರ್ಣಗೊಳ್ಳುವುದೇ ಪ್ರೇಕ್ಷಕರಿಂದ. ಆದರೆ, ಇದೀಗ ಪ್ರೇಕ್ಷಕರು ಸೇರುವ ಸಮಯವಲ್ಲ. ಈ ನಡುವೆ ಬಹುತೇಕ ಕ್ರೀಡಾಕೂಟಗಳು ಮುಂದೂಡಲ್ಪಟ್ಟಿವೆ. ಈಗಾಗಲೇ ಮುಂದೂಡಲ್ಪಟ್ಟಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಅಕ್ಟೋಬರ್-ನವಂಬರ್ ನಲ್ಲಿ ಆಯೋಜನೆಗೊಂಡಿದ್ದ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕ ವರ್ಗ ಟಿಕೆಟ್ ಪಡೆದುಕೊಂಡಿದೆ. ಆದರೆ, ಟೂರ್ನಿ ಮುಂದೂಡಲ್ಪಟ್ಟ...