Saturday, November 23, 2024

ಕ್ರೀಡೆ

ಕ್ರೀಡೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಿ.ಸಿ.ರೋಡಿನ ಚಂಡಿಕಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ನಡೆದ ಕ್ರೀಡೋತ್ಸವ : ಕ್ರೀಡಾ ಕೂಟದಿಂದ ಸಂಘಟನೆ ಸಾಧ್ಯ : ಲೋಕನಾಥ ಶೆಟ್ಟಿ- ಕಹಳೆ ನ್ಯೂಸ್

ಬಿ.ಸಿ.ರೋಡ್ : ಕ್ರೀಡೆಯಿಂದ ಸಂಘಟನೆ ಮಾಡಲು ಸಾಧ್ಯ.ಜಾತ್ರೋತ್ಸವ ಸಂದರ್ಭ ಮೊದಲ ಬಾರಿ ಕ್ರೀಡೊತ್ಸವನ್ನು ಹಮ್ಮಿಕೊಂಡಿದ್ದು, ಗ್ರಾಮಸ್ಥರಿಂದ ಒಳ್ಳೆಯ ಸ್ಪಂದನೆ ದೊರೆತಿದೆ ಎಂದು ಚಂಡಿಕಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಲಯನ್ ಲೋಕನಾಥ ಶೆಟ್ಟಿ ತಿಳಿಸಿದ್ದಾರೆ. ಅವರು ಬಿ.ಸಿ.ರೋಡಿನ ಚಂಡಿಕಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ದೇವಸ್ಥಾನದ ಹಿಂಬದಿಯ ಕ್ರೀಡಾಂಗಣದಲ್ಲಿ ನಡೆದ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಪುಟಾಣಿ ಮಕ್ಕಳಿಂದ ಎಲ್ಲಾ ವಯಸ್ಸಿನವರಿಗೂ ಸ್ಫರ್ಧೆ ನಡೆಯಲಿದ್ದು ಎಲ್ಲಾ ಸ್ಪರ್ಧಾಳುಗಳಿಗೆ ಶುಭವಾಗಲಿ ಎಂದು ಶುಭ ಹಾರೈಸಿದರು....
ಕ್ರೀಡೆದಕ್ಷಿಣ ಕನ್ನಡಪುತ್ತೂರುಸುದ್ದಿ

ಕಬಕ : ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಮಂಜೂರಾದ ಜಾಗವನ್ನು ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ಸಂಸ್ಥೆಗೆ ಹಸ್ತಾಂತರಿಸಿದ ಶಾಸಕ ಅಶೋಕ್ ಕುಮಾರ್ ರೈ – ಕಹಳೆ ನ್ಯೂಸ್

ಪುತ್ತೂರು : ಕಬಕದಲ್ಲಿ ಆರಂಭಗೊಳ್ಳಿರುವ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಪುತ್ತೂರು ಶಾಸಕರ ಪ್ರಯತ್ನದಿಂದ ಸುಮಾರು 22.5 ಎಕ್ರೆ ಜಾಗ ಮಂಜೂರಾಗಿದ್ದು, ಜಾಗವನ್ನು ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ಸಂಸ್ಥೆಗೆ ಶಾಸಕ ಅಶೋಕ್ ಕುಮಾರ್ ರೈ ಹಸ್ತಾಂತರಿಸಿದರು. ಪುತ್ತೂರು ಸಹಾಯಕ ಕಮಿಷನರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜಾಗ ಹಸ್ತಾಂತರಿಸಿ, ಬಳಿಕ ಮಾತನಾಡಿದ ಶಾಸಕರು ಪುತ್ತೂರಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆರಂಭಗೊಳ್ಳುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಸ್ಟೇಡಿಯ ಕಾರಣಕ್ಕೆ ಪುತ್ತೂರು ಮುಂದಿನ ದಿನಗಳಲ್ಲಿ ಅಂತರ...
ಕ್ರೀಡೆದಕ್ಷಿಣ ಕನ್ನಡಮೂಡಬಿದಿರೆಶಿಕ್ಷಣಸುದ್ದಿ

ರಾಷ್ಟ್ರೀಯ ಫ್ಲೋರ್ ಬಾಲ್ ಚಾಂಪಿಯನ್ ಶಿಫ್ : ಎಡಪದವು ವಿವೇಕಾನಂದ ಪ.ಪೂ ಕಾಲೇಜಿನ ವಿಜೇತ ನಾಲ್ವರು ವಿದ್ಯಾರ್ಥಿಗಳಿಗೆ ಸನ್ಮಾನ -ಕಹಳೆ ನ್ಯೂಸ್

ಮೂಡುಬಿದಿರೆ: ಇಂಟರ್‌ನ್ಯಾಷನಲ್ ಫ್ಲೋರ್ ಬಾಲ್ ಫೆಡರೇಶನ್ ಹಾಗೂ ಫ್ಲೋರ್ ಬಾಲ್ ಅಸೋಸಿಯೇಷನ್ ತಮಿಳುನಾಡು ಮತ್ತು ಫಿಟ್ ಇಂಡಿಯಾ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಜ.25-28 ವರೆಗೆ ನಡೆದ 17ನೇ ರಾಷ್ಟ್ರೀಯ ಫ್ಲೋರ್ ಬಾಲ್ ಚಾಂಪಿಯನ್ ಶಿಫ್ 2023-24ರಲ್ಲಿ ಕರ್ನಾಟಕ ತಂಡವು ಜಯಗಳಿಸಿದ್ದು, ಈ ತಂಡದಲ್ಲಿ ಎಡಪದವು ಸ್ವಾಮಿ ವಿವೇಕಾನಂದ ಪ.ಪೂ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಆಟವಾಡಿದ್ದು ಅವರನ್ನು ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 17ನೇ ವರ್ಷದ ಕೆಳಗಿನ ಬಾಲಕರ...
ಕ್ರೀಡೆದಕ್ಷಿಣ ಕನ್ನಡಮೂಡಬಿದಿರೆಶಿಕ್ಷಣಸುದ್ದಿ

ರಾಷ್ಟ್ರೀಯ ಜ್ಯೂನಿಯರ್ ಅಥ್ಲೆಟಿಕ್ಸ್ : ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ರಕ್ಷಿತಾ ಆಯ್ಕೆ – ಕಹಳೆ ನ್ಯೂಸ್

ಮೂಡುಬಿದಿರೆ: ಗುಜರಾತಿನ ಆಲಹಾಬಾದ್ ನಲ್ಲಿ ಫೆ. 16-18 ರಿಂದ ನಡೆಯುವ ರಾಷ್ಟ್ರೀಯ ಜ್ಯೂನಿಯರ್ ಅಥ್ಲೆಟಿಕ್ಸ್ ಗೆ ಎಡಪದವು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ರಕ್ಷಿತಾ ಆಯ್ಕೆಯಾಗಿದ್ದಾರೆ. 2023-24 ನೇ ಸಾಲಿನಲ್ಲಿ ಪುತ್ತೂರಿನಲ್ಲಿ ನಡೆದ ರಾಜ್ಯಮಟ್ಟದ 17ವರ್ಷ ವಯೋಮಿತಿ ಶಾಲಾ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಅವರು ಆಯ್ಕೆಯಾಗಿದ್ದಾರೆ. 2022-23 ನೇ ಸಾಲಿನಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಶಾಲಾ ಅಥ್ಲೆಟಿಕ್ಸ್...
ಕ್ರೀಡೆದಕ್ಷಿಣ ಕನ್ನಡಸುದ್ದಿ

ಗೋವಾದ ಕಡಲ ಮಡಿಲಲ್ಲಿ ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಆಯೋಜಿಸುವ ಜಿಪಿಎಲ್ ಎಂಟನೇ ವರ್ಷದ ಉತ್ಸವ್ 2024ರ ಜೆರ್ಸಿ ಲಾಂಚ್..! – ಕಹಳೆ ನ್ಯೂಸ್

ಮಂಗಳೂರು : ಬಹುನಿರೀಕ್ಷಿತ ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಆಯೋಜಿಸುವ ಜಿಪಿಎಲ್ ಉತ್ಸವ್ 2024 ಇದರ ಎಂಟನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯ ಜೆರ್ಸಿಯ ಲಾಂಚ್ ಕಾರ್ಯಕ್ರಮವು ಗೋವಾದ ಕಡಲ ಮಡಿಲಲ್ಲಿ ನಡೆಯಿತು. ಗೋವಾದ ರಾಜಧಾನಿ ಪಣಜಿಯ ಕಡಲಲ್ಲಿ ಖಾಸಗಿ ನೌಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಆಯೋಜಿಸುವ ಜಿಪಿಎಲ್...
ಕ್ರೀಡೆದಕ್ಷಿಣ ಕನ್ನಡಪುತ್ತೂರುಸುದ್ದಿ

ವಿನಾಯಕ ಚಾರಿಟೇಬಲ್ ಟ್ರಸ್ಟ್ ರಿ. ಬಲ್ನಾಡು ಇದರ 9ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುವ ವಿನಾಯಕ ಟ್ರೋಫಿ- 2024ರ ಆಮಂತ್ರಣ ಪತಿಕೆ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು : ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಬಲ್ನಾಡು, ವಿನಾಯಕ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಬಲ್ನಾಡು ವತಿಯಿಂದ ಫೆ.11ರಂದು “ವಿನಾಯಕ ಟ್ರೋಫಿ - 2024” ಪುರುಷರ ಗ್ರಾಮ ಸೀಮಿತ ಮಟ್ಟದ ಮುಕ್ತ ಹಾಗೂ ಬಲ್ನಾಡು ವಲಯ ಮಟ್ಟದ ಪ್ರೊ ಮಾದರಿಯ ಮ್ಯಾಟ್ ಅಂಕಣದಲ್ಲಿ ಕಬಡ್ಡಿ ಪಂದ್ಯಾಟವು ಬಲ್ನಾಡಿನ ವಿನಾಯಕ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೆ.11ರಂದು ನಡೆಯುವ “ವಿನಾಯಕ ಟ್ರೋಫಿ - 2024”ರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು...
ಕ್ರೀಡೆಮೂಡಬಿದಿರೆಸುದ್ದಿ

69ನೇ ಹಿರಿಯ ಮಹಿಳೆಯರ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ : ಜಯಭೇರಿ ಬಾರಿಸಿದ ಆಳ್ವಾಸ್ ಆಟಗಾರ್ತಿಯರು – ಕಹಳೆ ನ್ಯೂಸ್

ಮೂಡುಬಿದಿರೆ: ಮಹಾರಾಷ್ಟ್ರ ಗಡ್ಚಿರೋಲಿಯಲ್ಲಿ ನಡೆದ 69ನೇ ಮಹಿಳೆಯರ ಹಿರಿಯ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕ ತಂಡವು ಜಯಭೇರಿಯಾಗಿದ್ದಾರೆ. ರಾಜ್ಯ ತಂಡವನ್ನು ಪ್ರತಿನಿಧಿಸಿದ 10 ಆಟಗಾರರ ಪೈಕಿ 9ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ರಾಜ್ಯ ತಂಡವನ್ನು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ಎಂ. ಮುನ್ನಡೆಸಿದೆ. ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ್ತಿಯರಿಗೆ ನೀಡುವ ‘ಸ್ಟಾರ್ ಆಫ್ ಇಂಡಿಯಾ’ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ ಪಲ್ಲವಿ ಬಿ.ಎಸ್. ಹಾಗೂ ಸಹನಾ ಎಚ್.ವೈ. ಮುಡಿಗೇರಿಸಿಕೊಂಡಿದ್ದಾರೆ. ಕರ್ನಾಟಕ...
ಕ್ರೀಡೆದಕ್ಷಿಣ ಕನ್ನಡರಾಜ್ಯಸುದ್ದಿ

ಮಂಗಳೂರಿನ ಕುಂಪಲದ ಬಾಡಿಗೆ ಮನೆಯಲ್ಲಿ ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ಮೊಹಮ್ಮದ್‌ ರಝೀನ್‌ ಬಂಧನ – ಕಹಳೆ ನ್ಯೂಸ್

ಮಂಗಳೂರು, ಜ.02 : ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಓರ್ವನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಅನಜೂರು ಗ್ರಾಮದ ಮೊಹಮ್ಮದ್‌ ರಝೀನ್‌(25) ಎಂದು ಗುರುತಿಸಲಾಗಿದೆ. ಆರೋಪಿ ಅಪ್ರಾಪ್ತೆ ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿ ಮಂಗಳೂರಿನ ಪಂಪ್‌ವೆಲ್‌ಗೆ ಬಸ್ಸಿನಲ್ಲಿ ಬರಮಾಡಿಕೊಂಡು ಬಳಿಕ ಆಟೋದಲ್ಲಿ ಕುಂಪಲದ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ ಮದುವೆ ಯಾಗುತ್ತೇನೆ ಎಂದು ಹೇಳಿ ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ...
1 5 6 7 8 9 29
Page 7 of 29