ಪಾಣೆಮಂಗಳೂರು ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಪುತ್ತೂರು ಮೂಲದ ನಿರಂಜನ್ ಆತ್ಮಹತ್ಯೆ – ಕಹಳೆ ನ್ಯೂಸ್
ಬಂಟ್ವಾಳ, ಏ 29: ಬೈಕಿನಲ್ಲಿ ಬಂದ ವ್ಯಕ್ತಿಯೋರ್ವರು ಪಾಣೆಮಂಗಳೂರು ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬೈಕ್ ನಲ್ಲಿ ದೊರೆತ ದಾಖಲೆ ಪ್ರಕಾರ ಪುತ್ತೂರು ಮೂಲದ ನಿರಂಜನ್ (35) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಹಳೆ ಸೇತುವೆ ಬಳಿ ಬೈಕೊಂದು ನಿಲ್ಲಿಸಿದ್ದು, ಅನುಮಾನಗೊಂಡು ಸ್ಥಳೀಯರು ಗುರುವಾರ ಸೇವಾಂಜಲಿ ರಕ್ಷಕ ದೋಣಿಯ ಮೂಲಕ ನದಿಗೆ ಹಾರಿದ ವ್ಯಕ್ತಿಗಾಗಿ ಶೋಧ ನಡೆಸಿದ್ದಾರೆ. ಮಧ್ಯಾಹ್ನದ ವೇಳೆಗೆ...