ಮಂಗಳೂರಿನಲ್ಲಿ ಶುಕ್ರವಾರ ಸಾರ್ವಜನಿಕ ಸ್ಥಳದಲ್ಲಿ ನಮಾಜ್ ನಡೆದರೆ, ಬಜರಂಗದಳದ ಇದರ ವಿರುದ್ಧ ನೇರ ಕಾರ್ಯಾಚರಣೆ ನಡೆಸಿ, ನಿಲ್ಲಿಸುತ್ತೇವೆ ಎಂದ ಶರಣ್ ಪಂಪ್ವೆಲ್ ವಿರುದ್ಧ FIR – ಕಹಳೆ ನ್ಯೂಸ್
ಮಂಗಳೂರು : ಕಂಕನಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಮಾಜು ಮಾಡಿದ ಪ್ರಕರಣವನ್ನು ಖಂಡಿಸಿ, ಪೋಸ್ಟ್ ಹಾಕಿದ ಹಿಂದೂ ಸಂಘಟನೆಯ ಮುಖಂಡ ಶರಣ್ ಪಂಪ್ವೆಲ್ ಅವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. " ಮಂಗಳೂರು ಕಂಕನಾಡಿ ಬಳಿ ಸಾರ್ವಜನಿಕವಾಗಿ ಉದ್ದೇಶ ಪೂರ್ವಕವಾಗಿ ತೊಂದರೆ ನೀಡಲು ನಡೆಸಿದ ನಮಾಜಿನ ಸಂಬಂಧಪಟ್ಟವರಿಗೆ ಈಗಾಗಲೇ ತಿಳಿಸಲಾಗಿದೆ. ಶುಕ್ರವಾರ ಮತ್ತೆ ಅದೇ ಜಾಗದಲ್ಲಿ ನಮಾಜ್ ನಡೆದರೆ ನೇರವಾಗಿ ಬಜರಂಗದಳದ ಇದರ ವಿರುದ್ಧ ನೇರ ಕಾರ್ಯಾಚರಣೆ ನಡೆಸಿ, ನಿಲ್ಲಿಸಲಾಗುವುದು ಎಂದು...