Friday, January 24, 2025

ಕ್ರೈಮ್

ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಬೆಂಬಲಿಗರು ದಾಂದಲೆ ನಡೆಸಿದ ಬಿಜೆಪಿ ಕಾರ್ಯಕರ್ತ ಜಯಾನಂದ ಬಂಗೇರ ಮನಗೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿ ; ಘಟನೆ ಕುರಿತು ಆಕ್ರೋಶ – ಕಹಳೆ ನ್ಯೂಸ್

ಪುತ್ತೂರಿನ ಶಾಸಕರಾದ ಅಶೋಕ್ ರೈಯವರಿಂದ ಕ್ಷೇತ್ರಕ್ಕೆ ಬಿಡುಗಡೆಯಾದ 1400 ಕೋಟಿಯ ಅನುದಾನದ ಸತ್ಯಾಸತ್ಯತೆಯ ಬಗ್ಗೆ ಸಾಮಾಜಿಕ ಜಲಾತಾಣದಲ್ಲಿ ಮಾಹಿತಿ ಕೇಳಿದ ಬಿಜೆಪಿಯ ಕಾರ್ಯಕರ್ತ ಜಯಾನಂದ ಕೆ ಬಂಗೇರ ಅವರ ಮನೆಗೆ ಶಾಸಕರ ಬೆಂಬಲಿತ ತಂಡವೊಂದು ನುಗ್ಗಿ ದಾಂದಲೇ ನಡೆಸಿರುವುದು ಖಂಡನೀಯ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು. ಜಯಾನಂದ್ ಬಂಗೇರರ ಮನೆಗೆ ಭೇಟಿ ನೀಡಿದ ಅರುಣ್ ಕುಮಾರ್ ಪುತ್ತಿಲ, ಜಗನ್ನಿವಾಸ್ ರಾವ್ ಸಹಿತ ಬಿಜೆಪಿ ನಾಯಕರು ಕಾರ್ಯಕರ್ತನಿಗೆ ದೈರ್ಯ ತುಂಬಿದರು....
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಕಾಂಗ್ರೆಸ್ ಮರಿರೌಡಿಗಳ ಅಟ್ಟಹಾಸಕ್ಕೆ ಉತ್ತರಿಸಲು ನಾವು ಸಿದ್ದರಿದ್ದೇವೆ ; ಪುತ್ತೂರು‌ ಕಾಂಗ್ರೆಸ್ ಶಾಸಕರ ಬೆಂಬಲಿಗರ ಗೂಂಡಾ ವರ್ತನೆ ಘಟನೆಗೆ ಬ್ರಿಜೇಶ್ ಚೌಟ ಆಕ್ರೋಶ – ಕಹಳೆ ನ್ಯೂಸ್

ಕಾಂಗ್ರೆಸ್ ನ ಗೂಂಡಾಗಿರಿ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ- ಕ್ಯಾಪ್ಟನ್ ಬ್ರಿಜೇಶ್ ಚೌಟ ಪುತ್ತೂರು :  ಬಿಜೆಪಿ ಕಾರ್ಯಕರ್ತ ಜಯಾನಂದ ಬಂಗೇರ ಮೇಲಿನ ಕಾಂಗ್ರೆಸ್ ಗೂಂಡಾಗಿರಿ ಖಂಡನೀಯ. ಪುತ್ತೂರಿನ ಶಾಸಕರ 1400 ಕೋಟಿಯ ಅನುದಾನದ ಬಗ್ಗೆ ಮಾಹಿತಿ ಕೇಳಿದ ಬಿಜೆಪಿ ಕಾರ್ಯಕರ್ತ ಜಯಾನಂದ ಬಂಗೇರರ ಮನೆಗೆ ನುಗ್ಗಿ ದಾಂದಲೆ ನಡೆಸಿರುವ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ತಾನು 1400 ಕೋಟಿಯ ಅನುದಾನ ತಂದಿದ್ದೇನೆ ಎಂದು ಹೇಳುವ ಶಾಸಕರಿಗೆ ಆ ಬಗ್ಗೆ ಮಾಹಿತಿ ನೀಡಲು...
ಕ್ರೈಮ್ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ : ಶಿಕ್ಷಕನ ವಿರುದ್ದ ಪೊಲೀಸ್ ಠಾಣೆಗೆ ದೂರು – ಕಹಳೆ ನ್ಯೂಸ್

ಮೂಡುಬಿದಿರೆ: ತಾಲೂಕಿನ ಕಲ್ಲಮುಂಡ್ಕೂರು ಗ್ರಾ.ಪಂಚಾಯತ್ ವ್ಯಾಪ್ತಿಯ ಸರಕಾರಿ ಅನುದಾನಿತ ಪ್ರೌಢಶಾಲೆಯ ಶಿಕ್ಷಕರೋರ್ವರ ವಿರುದ್ಧ ಲೈಂಗಿಕ ಕಿರುಕುಳ ಆರೋಪದಲ್ಲಿ ಪ್ರಕರಣ ದಾಖಲಾಗಿರುವ ಘಟನೆ ತಡವಾಗಿ ಬೆಳಕಿಗೆ‌ ಬಂದಿದೆ. ಶಾಲೆಯ ಸಹ ಅಧ್ಯಾಪಕ, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ನಿವಾಸಿ ಗುರುವ ಮೊಗೇರಾ ಎಂಬವರು ಆರೋಪಿತ ಶಿಕ್ಷಕ ಎಂದು ಗುರುತಿಸಲಾಗಿದೆ. ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿಯರಿಗೆ ಅಧ್ಯಾಪಕ ಗುರುವ ಮೊಗೇರಾ ಅವರು ಲೈಂಗಿಕ ಕಿರುಕುಳ ನೀಡಿರುವ ಕುರಿತು ಶಾಲೆಯ ಮುಖ್ಯ ಶಿಕ್ಷಕ ಸದಾನಂದ ಅವರು...
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಫೋಕ್ಸೋ ಕಾಯ್ದೆಯಡಿ ಎಫ್‍ಐಆರ್ ದಾಖಲು – ಕಹಳೆ ನ್ಯೂಸ್

ಬೆಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಸಂತ್ರಸ್ತ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಯಡಿಯೂರಪ್ಪ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ಫೋಕ್ಸೋಕಾಯ್ದೆ ಸೆಕ್ಷನ್ 8, ಮತ್ತು ಐಪಿಸಿ ಸೆಕ್ಷನ್ 354(ಎ) ಅಡಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಗುರುವಾರ(ಮಾ.14) ಸಂಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫೆಬ್ರುವರಿ...
ಕ್ರೈಮ್ಸುದ್ದಿಸುಳ್ಯ

ಸುಳ್ಯ ಬಾಲಕಿಗೆ ಲೈಂಗಿಕ ಕಿರುಕುಳ: ನಡುರಾತ್ರಿಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು –ಕಹಳೆ ನ್ಯೂಸ್

ಸುಳ್ಯ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮಂಡೆಕೋಲಿನಲ್ಲಿ ಬುಧವಾರ ರಾತ್ರಿ ನಡೆದಿದೆ.ಮೂಲತಃ ಉಪ್ಪಿನಂಗಡಿಯ ನಿತಿನ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಸುಳ್ಯ-ಮಂಡೆಕೋಲು ಖಾಸಗಿ ಬಸ್ನಲ್ಲಿ ನಿರ್ವಾಹಕ ಆಗಿ ಕೆಲಸ ಮಾಡುತ್ತಿದ್ದ ನಿತಿನ್ ಬುಧವಾರ ತಡರಾತ್ರಿ ಬಾಲಕಿಯ ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದರು ಎಂದು ತಿಳಿದುಬಂದಿದೆ.ಆರೋಪಿ ನಿತಿನ್ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೊ...
ಕ್ರೈಮ್ದಕ್ಷಿಣ ಕನ್ನಡಸುದ್ದಿಸುಳ್ಯ

ಮನೆಯಲ್ಲಿ ಯಾರು ಇಲ್ಲದ ವೇಳೆ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ : ಆಸ್ಪತ್ರೆಗೆ ದಾಖಲು – ಕಹಳೆ ನ್ಯೂಸ್

ಬೆಳ್ಳಾರೆ: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮಹಿಳೆಯೋರ್ವರು ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಬೆಳ್ಳಾರೆ ನಿವಾಸಿ ಲಕ್ಷ್ಮೀಕಾಂತ ಹೆಗ್ಡೆಯವರ ಪತ್ನಿ ವೀಣಾ ಆತ್ಮಹತ್ಯೆಗೆ ಯತ್ನಿಸಿದವರು. ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಮಹಿಳೆಯು ಆ್ಯಸಿಡ್ ಸೇವಿಸಿ ತನ್ನ ಸಹೋದ್ಯೋಗಿಗೆ ಕರೆಮಾಡಿ ತಿಳಿಸಿದ್ದರು. ತಕ್ಷಣ ಮನೆಯವರಿಗೆ ವಿಚಾರ ತಿಳಿಸಿ ಆಟೋ ರಿಕ್ಷದ ಮೂಲಕ ಆಸ್ಪತ್ರೆಗೆ ಸಾಗಿಸಿದ್ದು ಅಷ್ಟರಲ್ಲಿ ಮಹಿಳೆಯು ವಾಂತಿ ಮಾಡಲು ಪ್ರಾರಂಭಿಸಿದ್ದಾರೆ....
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಆತ್ಮಹತ್ಯೆ ಗೆ ಶರಣಾದ ಸರಪಾಡಿ ಅಲ್ಲಿಪಾದೆ‌ ನಿವಾಸಿ‌ ವಿನೋದ್ : ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ಮನೆ ಮಂದಿಗೆ ಸಾಂತ್ವನ – ಕಹಳೆ ನ್ಯೂಸ್

ಸರಪಾಡಿ ಗ್ರಾಮದ ಪೆರ್ಲ ಅಲ್ಲಿಪಾದೆ ನಿವಾಸಿ ಕೃಷ್ಣಪ್ಪ ನಾಯ್ಕ ಇವರ ಮಗ ವಿನೋದ ಕುಮಾರ್ (33) ಭಾನುವಾರ ತಡರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಮೃತದೇಹವನ್ನ ಬಂಟ್ಟಾಳ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಂಸದ ನಳಿನ್ ಕುಮಾರ್ ಕಟೀಲ್ , ಹರಿಕೃಷ್ಣ ಬಂಟ್ವಾಳ ಭೇಟಿ ನೀಡಿ ಮೃತರ ತಂದೆಯಲ್ಲಿ ಘಟನೆಯ ಬಗ್ಗೆ ವಿಚಾರಿಸಿ ಸಾಂತ್ವನ ಹೇಳಿದ್ದಾರೆ. ಇನ್ನು...
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲ: ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ದರೋಡೆ ಪ್ರಕರಣ : ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರ ವಿಶೇಷ ತಂಡ – ಕಹಳೆ ನ್ಯೂಸ್

ವಿಟ್ಲ: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ ಭೇದಿಸುವಲ್ಲಿ ಪೊಲೀಸರ ವಿಶೇಷ ತಂಡ ಮಹತ್ತರ ಯಶಸ್ಸು ಸಾಧಿಸಿದ್ದು ಪ್ರಮುಖ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಆರೋಪಿಗಳಾದ ರಫೀಕ್ ಯಾನೆ ಗೂಡಿನ ಬಳಿ ರಫೀಕ್ , ಮೂಲತಃ ಸುಳ್ಯದ ಕೊಯಿಲ, ಕಾಸರಗೋಡಿನ ಚೌಕಿ ನಿವಾಸಿ ಖಲಂದರ್ ಹಾಗೂ ಬಾಯಾರು ನಿವಾಸಿ ದಯಾನಂದ ಎಂದು ಗುರುತಿಸಲಾಗಿದೆ ಫೆಬ್ರವರಿ 7 ರಂದು ರಾತ್ರಿ ಬ್ಯಾಂಕ್ ಕಟ್ಟಡದ ಹಿಂಬದಿ ಕಿಟಕಿಯ ಸರಳುಗಳನ್ನು ತುಂಡರಿಸಿ...
1 35 36 37 38 39 111
Page 37 of 111