ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಕಾರು ಪ್ರಯಾಣಿಕರಿಗೆ ಲಾಂಗ್ ತೋರಿಸಿ ಸುಲಿಗೆ, ಚಿನ್ನಾಭರಣಗಳನ್ನು ದೋಚಿ ಎಸ್ಕೇಪ್…!! – ಕಹಳೆ ನ್ಯೂಸ್
ರಾಮನಗರ: ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ (Bangalore Mysore Expressway) ಕಾರು ಪ್ರಯಾಣಿಕರಿಗೆ ಲಾಂಗ್ ತೋರಿಸಿ ಸುಲಿಗೆ (Robbery Case) ಮಾಡಲಾಗಿದೆ. ರಾಮನಗರ ತಾಲೂಕಿನ ಮಾಯಗಾನಹಳ್ಳಿ ಬಳಿ ಘಟನೆ ನಡೆದಿದೆ. ಹಿಮಾಚಲಂ ಹಾಗೂ ಅಂಕಯ್ಯ ಎಂಬವರು ಕಾರಿನಲ್ಲಿ ಚನ್ನಪಟ್ಟಣದಿಂದ ಬೆಂಗಳೂರಿಗೆ ಹೋಗುತ್ತಿದ್ದರು. ನಿದ್ರೆ ಮಂಪರು ಬಂದ ಹಿನ್ನೆಲೆಯಲ್ಲಿ ಕಾರು ಚಾಲಕ ಮಾಯಗಾನಹಳ್ಳಿ ಬ್ರಿಡ್ಜ್ ಕೆಳಗೆ ಕಾರ್ ನಿಲ್ಲಿಸಿಕೊಂಡು ಮುಖ ತೊಳೆಯುತ್ತಿದ್ದ ಸಂದರ್ಭದಲ್ಲಿ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಲಾಂಗ್ ತೋರಿಸಿ ಬೆದರಿಸಿ ಮೈಮೇಲೆ...