Wednesday, January 22, 2025

ಕ್ರೈಮ್

ಕ್ರೈಮ್ದಕ್ಷಿಣ ಕನ್ನಡಬಂಟ್ವಾಳರಾಜ್ಯಸುದ್ದಿ

ಬಸ್ ನಲ್ಲಿ ಅನ್ಯಮತೀಯ ಯುವತಿಯ ಪಕ್ಕದಲ್ಲಿ ಬಂದು ಕುಳಿತು ಚಾಕಲೇಟ್ ಬೇಕೇ ಎಂದು ಕಿಚಾಯಿಸಲು ಯತ್ನಿಸಿದ ಮಹಮ್ಮದ್ ಶಾಕೀರ್..! ; ಹಿಂದೂ ಸಂಘಟನೆ ಕಾರ್ಯಕರ್ತರಿಂದ ಬಿತ್ತು ಗೂಸಾ..! ಕೇಸ್ ದಾಖಲು – ಕಹಳೆ ನ್ಯೂಸ್

ವಿಟ್ಲ : ಬಸ್‌ನಲ್ಲಿ ಅನ್ಯಮತೀಯ ವಿದ್ಯಾರ್ಥಿನಿಗೆ ಚಾಕಲೇಟ್ ಬೇಕಾ, ಎಂದು ಚುಡಾಯಿಸಲು ಯತ್ನಿಸಿದ ಅನ್ಯ ಮತದ ವಿದ್ಯಾರ್ಥಿಗೆ ಹಿಂದೂ ಸಂಘಟನೆಗೆ ಸೇರಿದ ಯುವಕರು ಗೂಸಾ ನೀಡಿದ ಘಟನೆ ನಡೆದಿದೆ., ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀರಕಂಬ ಗ್ರಾಮದ ಮಂಗಳಪದವು ನಿವಾಸಿ ಮಹಮ್ಮದ್‌ ಶಾಕೀರ್‌ ನೀಡಿದ ದೂರಿನಂತೆ ಕೆಲಿಂಜ ನಿವಾಸಿಗಳಾದ ಚಂದ್ರಶೇಖರ, ಪ್ರಜ್ವಲ್‌, ರೋಹಿತ್‌ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಗಳೂರು ಬಲ್ಮಠದಲ್ಲಿರುವ ಖಾಸಗಿ ಕಾಲೇಜಿನಲ್ಲಿ...
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಬಜರಂಗದಳ ಕಲ್ಲಡ್ಕ ಪ್ರಖಂಡ ಗೋ ರಕ್ಷಣಾ ಪ್ರಮುಖ್ ರಾಜೇಶ್ ಸುವರ್ಣ ಶವಪತ್ತೆ ; ಆತ್ಮಹತ್ಯೆಯೋ, ಅಪಘಾತವೋ…? – ಸಾವಿನ ಸುತ್ತ ಹಲವು ಅನುಮಾನ..! – ಕಹಳೆ ನ್ಯೂಸ್

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆಯ ಬಳಿ ನೇತ್ರಾವತಿ ನದಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ‌ಸಜೀಪ ವಿಶ್ವ ಹಿಂದೂ ಪರಿಷತ್ ಮುಖಂಡ, ಬಜರಂಗದಳ ಕಲ್ಲಡ್ಕ ಪ್ರಖಂಡ ಗೋ ರಕ್ಷಣಾ ಪ್ರಮುಖ್ ರಾಜೇಶ್ ಸುವರ್ಣ ಸ್ಥಾನದಮನೆ ಮೃತಪಟ್ಟ ಯುವಕ. ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ದ್ವಿಚಕ್ರವಾಹನವೊಂದು ಪತ್ತೆಯಾದ ಹಿನ್ನೆಲೆ ಯಲ್ಲಿ ಸಂಶಯಗೊಂಡು ಪಾಣೆಮಂಗಳೂರು ಸೇತುವೆಯಲ್ಲಿ ಸಂಚರಿಸುವ ವಾಹನ ಸವಾರರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ನೇತ್ರಾವತಿ ನದಿಗೆ...
ಕ್ರೈಮ್ದಕ್ಷಿಣ ಕನ್ನಡರಾಜ್ಯರಾಷ್ಟ್ರೀಯಸುದ್ದಿ

ಇಸ್ಲಾಮಿಕ್ ಸ್ಟೇಟ್​​ನ ಭಯೋತ್ಪಾದಕ ಚಟುವಟಿಕೆಯಲ್ಲಿ ನಂಟು ಹೊಂದಿದ್ದ ಐಸಿಸ್ ನ ಶಂಕಿತ ಉಗ್ರ ಮಂಗಳೂರು ಹೊರವಲಯದ ಬಬ್ಬುಕಟ್ಟೆಯ ಮಝೀನ್ ಅಬ್ದುಲ್ ರೆಹಮಾನ್ ನನ್ನು ಹೆಡೆಮುರಿಕಟ್ಟಿದ ಎನ್​ಐಎ – ಕಹಳೆ ನ್ಯೂಸ್

ಮಂಗಳೂರು: ಭಯೋತ್ಪಾದಕ ಸಂಘಟನೆಯಾಗಿರುವ ಐಸಿಸ್​ ಜತೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳದವರು ಮುಂದುವರಿಸಿರುವ ಕಾರ್ಯಾಚರಣೆಯಲ್ಲಿ ಇನ್ನಿಬ್ಬರು ಶಂಕಿತರು ಸಿಕ್ಕಿ ಹಾಕಿಕೊಂಡಿದ್ದಾರೆ. ಭಯೋತ್ಪಾದಕ ಹಿನ್ನೆಲೆಯಲ್ಲಿ ಇಬ್ಬರು ಶಂಕಿತರನ್ನು ಎನ್​ಐಎ ಬಂಧಿಸಿದೆ. ಶಿವಮೊಗ್ಗದ ಐಸಿಸ್ ನಂಟಿನ ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ‌ಒಬ್ಬ ಶಂಕಿತ ಉಗ್ರ ಹಾಗೂ ದಾವಣಗೆರೆಯ ಹೊನ್ನಾಳಿಯಲ್ಲಿ ಇನ್ನೊಬ್ಬ ಶಂಕಿತ ಉಗ್ರನನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಮಂಗಳೂರು ಹೊರವಲಯದ ಬಬ್ಬುಕಟ್ಟೆಯ ಮಝೀನ್ ಅಬ್ದುಲ್ ರೆಹಮಾನ್, ದಾವಣಗೆರೆಯ ಹೊನ್ನಾಳಿಯಲ್ಲಿ ನದೀಮ್...
ಕ್ರೈಮ್ದಕ್ಷಿಣ ಕನ್ನಡಸುದ್ದಿ

ವೈದ್ಯರೇ ಗಾಂಜಾ ಜಾಲದಲ್ಲಿದ್ದರೆ ಹೇಗೆ..? ಮಂಗಳೂರು ಪೊಲೀಸರಿಂದ ಭಾರೀ ಕಾರ್ಯಾಚರಣೆ ; ಡಾ. ನದಿಯಾ ಸಿರಾಜ್ , ಡಾ.ಸಮೀರ್, ಡಾ. ಭಾನು ದಹಿಯಾ ಸೇರಿ 4 ವೈದ್ಯಕೀಯ ವಿದ್ಯಾರ್ಥಿನಿಯರು, 2 ವೈದ್ಯರು, 2 ವಿದ್ಯಾರ್ಥಿಗಳು ಅಂದರ್..! – ಕಹಳೆ ನ್ಯೂಸ್

ಮಂಗಳೂರು: ಆರೋಗ್ಯ ಹದಗೆಟ್ಟಾಗ ನಾವು ವೈದ್ಯರ ಬಳಿ ಹೋಗೋದು ಸಾಮಾನ್ಯ. ಇಂತಹ ವೈದ್ಯರೇ ವ್ಯಸನಕ್ಕೆ ಒಳಗಾದರೆ? ಅಥವಾ ಅವರೇ ಡ್ರಗ್ಸ್​ ದಂಧೆಯಲ್ಲಿ ತೊಡಗಿದ್ದರೆ? 'ವೈದ್ಯೋ ನಾರಾಯಣೋ ಹರಿಃ' ಅನ್ನೋ ಮಾತಿಗೆ ಅರ್ಥವೇ ಇಲ್ಲದಂತೆ ಆಗುತ್ತದೆ. ಇಂತಹ ಘಟನೆ ಮಂಗಳೂರಿನಲ್ಲಿ ನಡೆದಿದ್ದು ಎಲ್ಲರಿಗೂ ಆಘಾತ ನೀಡಿದೆ. ಇಂತಹ ವೈದ್ಯರು ಗಾಂಜಾ ನಶೆಯಲ್ಲಿ ಚಿಕಿತ್ಸೆ ನೀಡಿದರೆ ಹೇಗಿರಬಹುದು ಎಂದು ಯೋಚಿಸಿದರೂ ಭಯವಾಗುತ್ತದೆ. ಇದೀಗ ಮಂಗಳೂರು ಪೊಲೀಸರು ಭಾರೀ ಗಾಂಜಾ ದಂಧೆ ಭೇದಿಸಿದ್ದು ಮಂಗಳೂರಿನ ಪ್ರತಿಷ್ಠಿತ...
ಕ್ರೈಮ್ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಪುತ್ತೂರು: ಬಾಡಿಗೆ ಮನೆಯಿಂದ 14 ಅಂಗಿ, 4 ಜೀನ್ಸ್ ಪ್ಯಾಂಟ್ ಸೇರಿದಂತೆ 75 ಸಾವಿರ ಮೌಲ್ಯದ ಸೊತ್ತು ಕಳವು ; ಮಹಮ್ಮದ್ ಮುಸ್ತಫ್ಪ, ಚಾಪಳ್ಳ ಶಮೀರ್ ಅಂದರ್..! – ಕಹಳೆ ನ್ಯೂಸ್

ಪುತ್ತೂರು, ಜ 11 : ಎ.ಪಿ.ಎಂ.ಸಿ ರಸ್ತೆಯ ಸೂತ್ರಬೆಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಿರುವ ವಿವೇಕಾನಂದ ಯಾನೆ ಸತ್ಯನಾರಾಯಣ ಅವರ ಮನೆಯಿಂದ ಸುಮಾರು 75 ಸಾವಿರ ಮೌಲ್ಯದ ವಿವಿಧ ಸೊತ್ತುಗಳನ್ನು ಕಳವು ಗೈದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೂರ್ನಡ್ಕ ನಿವಾಸಿಗಳಾದ ಮಹಮ್ಮದ್ ಮುಸ್ತಫ್ಪ(28) ಹಾಗೂ ಸವಣೂರು ಚಾಪಳ್ಳ ಶಮೀರ್(24) ಬಂಧಿತ ಆರೋಪಿಗಳಾಗಿದ್ದಾರೆ.ಮನೆಯಲ್ಲಿ ಸತ್ಯನಾರಾಯಣ ಹಾಗೂ ಅವರ ಅಣ್ಣ ಗೋಪಿನಾಥ ವಾಸವಿದ್ದು, ಜನವರಿ 4 ರಂದು ಸತ್ಯ ನಾರಾಯಣ ಅವರು ತಾಯಿಯ ಅಸೌಖ್ಯತೆ...
ಕ್ರೈಮ್ಸುದ್ದಿ

ಸೋಷಿಯಲ್ ಮೀಡಿಯಾದಲ್ಲಿ ಮೋಹದ ಜಾಲ; ಹನಿಟ್ರ್ಯಾಪ್‌ಗೆ ಬಿದ್ದವನಿಂದ 28 ಕೋಟಿ ಮೌಲ್ಯದ ಕೊಕೇನ್ ಸೀಜ್ – ಕಹಳೆ ನ್ಯೂಸ್

ಮುಂಬೈ: ಹನಿಟ್ರ್ಯಾಪ್ ಅನ್ನೋ ಮೋಹದ ಜಾಲ ಸಾಮಾನ್ಯರಿಗೆ ಅರ್ಥವಾಗಲ್ಲ. ಅದು ಅರ್ಥವಾಗುವಷ್ಟರಲ್ಲಿ ಮೋಸದ ಮೋಹನಾಂಗಿಯರ ಬಲೆಗೆ ಬಿದ್ದಾಗಿರುತ್ತೆ. ಇಲ್ಲಿ ಆಗಿರೋದು ಅದೇ. ಮುಂಬೈ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಓರ್ವ ಪ್ರಯಾಣಿಕನನ್ನ ಅರೆಸ್ಟ್ ಮಾಡಿದ್ದಾರೆ. ಆ ಪ್ಯಾಸೆಂಜರ್ ಬಾಯ್ಬಿಟ್ಟ ಹನಿಟ್ರ್ಯಾಪ್ ಜಾಲದ ವಿಷಯವನ್ನ ಕೇಳಿ ಶಾಕ್ ಆಗಿದ್ದಾರೆ. 28 ಕೋಟಿ ಕೊಕೇನ್ ಸಾಗಾಟಮುಂಬೈ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಆರೋಪಿ 28 ಕೋಟಿ ಮೌಲ್ಯದ 2.81 ಕೆಜಿ ಕೊಕೇನ್ ಸಾಗಿಸುತ್ತಿದ್ದ. ಪ್ಯಾಸೇಂಜರ್ ಬ್ಯಾಗ್‌ಗಳನ್ನ ತಪಾಸಣೆ...
ಕ್ರೈಮ್ರಾಜ್ಯಸುದ್ದಿ

ಸಾಗರದ ಭಜರಂಗದಳ ಸಹ ಸಂಚಾಲಕನ ಮೇಲೆ ಹಲ್ಲೆಯತ್ನ ಪ್ರಕರಣದಲ್ಲಿ ಸಮೀರ್, ಇಮಿಯಾನ್ ಹಾಗೂ ಮನ್ಸೂರ್ ವಶಕ್ಕೆ ; ತಂಗಿಯನ್ನು ಚುಡಾಯಿಸಿದ್ದಕ್ಕೆ ಮಚ್ಚು ಬೀಸಿದೆ ಎಂದ ಆರೋಪಿ..! ಚುಡಾಯಿಸಿದ್ದು ನಿಜವೇ..? ಕಟ್ಟು ಕಥೆ..? ಕುರಿಗಳಿಗೆ ಸೊಪ್ಪು ತರಲು ಬೈಕಿನಲ್ಲಿ ಮಚ್ಚು ಇಟ್ಟುಕೊಂಡಿದ್ದನಂತೆ..!- ಕಹಳೆ ನ್ಯೂಸ್

ಶಿವಮೊಗ್ಗ: ಸಾಗರ ಪಟ್ಟಣದ ಭಜರಂಗದಳದ ಸಹ ಸಂಚಾಲಕನ ಮೇಲೆ ಹಲ್ಲೆಗೆ ಯತ್ನಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಸಮೀರ್ (ಎ1), ಇಮಿಯಾನ್ ಹಾಗೂ ಮನ್ಸೂರ್ ಎಂಬುವವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಹಲ್ಲೆ ಪ್ರಕರಣದ A1 ಆರೋಪಿ ಸಮೀರ್ ಎಂಬಾತನ ತಂಗಿಯನ್ನು ಸುನೀಲ್ ನಾಲ್ಕೈದು ತಿಂಗಳಿನಿಂದ ಚುಡಾಯಿಸುತ್ತಿದ್ದ. ಈ ಹಿನ್ನೆಲೆಯಲ್ಲಿ...
ಕಾಸರಗೋಡುಕ್ರೈಮ್ಸುದ್ದಿ

ಚಿಕನ್​ ತಿಂದು ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್​: ಶವಪರೀಕ್ಷೆ ಬೆನ್ನಲ್ಲೇ ಮೃತಳ ಮೊಬೈಲ್​ನಲ್ಲಿದ್ದ ಸ್ಫೋಟಕ ಮಾಹಿತಿ ಬಯಲು – ಕಹಳೆ ನ್ಯೂಸ್

ಕಾಸರಗೋಡು: ಚಿಕನ್​ ಬಿರಿಯಾನಿ ತಿಂದ ಬಳಿಕ ಫುಡ್ ಪಾಯ್ಸನಿಂಗ್​ನಿಂದ ಕಾಸರಗೋಡು ಮೂಲದ ಅಂಜುಶ್ರೀ ಪಾರ್ವತಿ (19) ಮೃತಪಟ್ಟ ಪ್ರಕರಣ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ ಅಂಜುಶ್ರೀ ಫುಡ್​ ಪಾಯ್ಸನಿಂಗ್​ನಿಂದ ಮೃತಪಟ್ಟಿಲ್ಲ. ಬದಲಾಗಿ ಆಕೆಯ ದೇಹದಲ್ಲಿ ವಿಷದ ಕುರುಹುಗಳು ಸಹ ಪತ್ತೆಯಾಗಿದ್ದು, ವಿಷವು ಆಕೆಯ ಲಿವರ್​ ಮೇಲೆ ಪರಿಣಾಮ ಬೀರಿ ಸಾವಿಗೀಡಾಗಿದ್ದಾಳೆ ಎಂಬ ಸ್ಫೋಟಕ ಸಂಗತಿ ಬಯಲಾಗಿದೆ. ನಿನ್ನೆಯವರೆಗೂ ಅಂಜುಶ್ರೀ ಫುಡ್​ ಪಾಯ್ಸನಿಂಗ್​ನಿಂದ ಮೃತಪಟ್ಟಿದ್ದಾಳೆ ಎಂದೇ ನಂಬಲಾಗಿತ್ತು....
1 63 64 65 66 67 111
Page 65 of 111