ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್ ವಿದ್ಯಾರ್ಥಿನಿಯರು ಸ್ನಾನ ಮಾಡುವ ವಿಡಿಯೋ ಲೀಕ್ – ಪೋರ್ನ್ ವೆಬ್ಸೈಟ್ನಲ್ಲಿ ವೈರಲ್ ಪ್ರಕರಣ ; ಕಠಿಣ ಕ್ರಮದ ಭರವಸೆ – ಪ್ರತಿಭಟನೆ ಕೈ ಬಿಟ್ಟ ಚಂಡೀಘಡ ವಿವಿ ವಿದ್ಯಾರ್ಥಿನಿಯರು, ಸೆ.25ರವರೆಗೆ ಕಾಲೇಜಿಗೆ ರಜೆ – ಕಹಳೆ ನ್ಯೂಸ್
ಚಂಡೀಗಢ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪಂಜಾಬ್ನ ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಸೋಮವಾರ ಮುಂಜಾನೆ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸರು ಹಲವಾರು ಮಹಿಳಾ ವಿದ್ಯಾರ್ಥಿಗಳ ಆಕ್ಷೇಪಾರ್ಹ ವೀಡಿಯೊಗಳನ್ನು ರೆಕಾರ್ಡ್ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ನ್ಯಾಯಯುತ ಮತ್ತು ಪಾರದರ್ಶಕ ತನಿಖೆ ನಡೆಸುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಸಭೆ ಬಳಿಕ ವಿದ್ಯಾರ್ಥಿನಿಯರು ಇದೀಗ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ. ನಿರ್ಲಕ್ಷ್ಯದ ಕಾರಣಕ್ಕಾಗಿ ವಿಶ್ವವಿದ್ಯಾನಿಲಯವು ಸೋಮವಾರ...