ಅತ್ಯಾಚಾರ ಎಸಗಿ ಬಿಜೆಪಿ ನಾಯಕಿ ಸೊನಾಲಿ ಕೊಲೆ? ಬೆಳಿಗ್ಗೆ ಬಂದ ಕರೆಯೇ ಅನುಮಾನಕ್ಕೆ ದಾರಿ! – ಕಹಳೆ ನ್ಯೂಸ್
ನವದೆಹಲಿ: ಬಿಗ್ ಬಾಸ್ ಕಾರ್ಯಕ್ರಮದ ಮಾಜಿ ತಾರೆ ಹಾಗೂ ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಅವರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಅವರ ಸೋದರ ರಿಂಕು ಧಾಕಾ ಆರೋಪಿಸಿದ್ದಾರೆ. 42 ವರ್ಷದ ಪೋಗಟ್ ಗೋವಾದ ಪಣಜಿಯಲ್ಲಿ ಸೋಮವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದರಲ್ಲೇನೋ 'ಮೋಸ ನಡೆದಿದೆ' ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಗಟ್ರನ್ನು ಅವರ ಇಬ್ಬರು ಸಹೋದ್ಯೋಗಿಗಳು ಕೊಲೆ ಮಾಡಿದ್ದಾರೆ ಎಂದು ಗೋವಾ ಪೊಲೀಸರಿಗೆ...