ಕರಾವಳಿ ಜಿಲ್ಲೆಯ ಶಾಲೆಯೊಂದರಿಂದ ಆತಂಕಕಾರಿ ಘಟನೆ ವರದಿ ; ಒಂದು ಶಾಲೆಯ 7 ಮಂದಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ – ಕಹಳೆ ನ್ಯೂಸ್
ಕಾಸರಗೋಡು : ಒಂದೇ ಶಾಲೆಯ 7 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಕರಾವಳಿ ಜಿಲ್ಲೆ ಕಾಸರಗೋಡಿನ ಬೇಕಲ ಎಂಬಲ್ಲಿ ನಡೆದಿದೆ. ಈ ಕುರಿತು ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದಲ್ಲಿ ತನಿಖೆ ಪ್ರಾರಂಭಗೊಂಡಿದೆ. ಮೂವರು ವಿದ್ಯಾರ್ಥಿಗಳು ನೀಡಿದ ದೂರಿನಂತೆ ನಾಲ್ವರ ವಿರುದ್ಧ ಬೇಕಲ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಮ್ಮ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ....