ಕಣಿಯೂರು ಗ್ರಾಮದ ಮಲೆಂಗಲ್ಲು, ಉಪ್ಪಿನಂಗಡಿ ವಲಯ ರಕ್ಷಿತಾರಣ್ಯದಿಂದ ಮರ ಕಡಿದು ಸಾಗಾಟಕ್ಕೆ ಯತ್ನ ; ಮೂವರ ಬಂಧನ – ಕಹಳೆ ನ್ಯೂಸ್
ಉಪ್ಪಿನಂಗಡಿ ಅ 26 : ಕಣಿಯೂರು ಗ್ರಾಮದ ಮಲೆಂಗಲ್ಲು ಸರಕಾರಿ ಮೀಸಲು ರಕ್ಷಿತಾರಣ್ಯದಿಂದ ಮರ ಕಡಿದು ಅಲ್ಲೇ ತುಂಡುಗಳನ್ನಾಗಿ ಮಾಡಿ ಸಾಗಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚಿದ್ದು ಬೆಳೆಬಾಳುವ ದಿಮ್ಮಿ ಸಮೇತ ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಲ್ಲಿಗೆ ಸಮೀಪದ ಕಣಿಯೂರು ಗ್ರಾಮದ ಮಲೆಂಗಲ್ಲು ಎಂಬಲ್ಲಿನ ಸರಕಾರಿ ಮೀಸಲು ರಕ್ಷಿತಾರಣ್ಯದಿಂದ ಬೃಹತ್ ಗಾತ್ರದ ಕಲ್ಬಾಜಿ ಮರವನ್ನು ಕಡಿಯುತ್ತಿರುವ ಬಗ್ಗೆ ಉಪ್ಪಿನಂಗಡಿ ವಲಯ...