Recent Posts

Sunday, January 19, 2025

ರಾಜ್ಯ

ರಾಜ್ಯ

ಬ್ರೇಕಿಂಗ್ : ನಟಿ ರಾಗಿಣಿ ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ..! – ಕಹಳೆ ನ್ಯೂಸ್

ಬೆಂಗಳೂರು,ಸೆ.7- ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಸಿದಂತೆ ಸಿಸಿಬಿ ವಶದಲ್ಲಿರುವ ಚಿತ್ರನಟಿ ರಾಗಿಣಿ ದ್ವಿವೇದಿ ಅವರನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಸಿದಂತೆ ಸಿಸಿಬಿ ವಶದಲ್ಲಿರುವ ರಾಗಿಣಿ ದ್ವಿವೇದಿ ಅವರು ಮಹಿಳಾ ಸಾಂತ್ವಾನ ಕೇಂದ್ರದಲ್ಲಿದ್ದು, ಅಲ್ಲಿಂದಲೇ ವಿಡಿಯೋ ಕಾನರೆನ್ಸ್ ಮೂಲಕ ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯತಾಲಯದ ನ್ಯಾಯಾೀಶರಾದ ಜಗದೀಶ್ ಅವರು ಐದು ದಿನಗಳ ಕಾಲ ರಾಗಿಣಿ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲು ಆದೇಶಿಸಿದರು....
ರಾಜಕೀಯರಾಜ್ಯ

ಇಂದು ಸಂಜೆ ಸಿಎಂ ಮಹತ್ವದ ಸಭೆ, ಕಡ್ಡಾಯವಾಗಿ ಎಲ್ಲಾ ಸಚಿವರು ಹಾಜರಾಗುವಂತೆ ಸೂಚನೆ -ಕಹಳೆ ನ್ಯೂಸ್

ಬೆಂಗಳೂರು,ಸೆ.7-ಎಡೆಬಿಡದೆ ಕಾಡುತ್ತಿರುವ ಕೊರೊನಾ ಅಟ್ಟಹಾಸ, ಡಿಜೆಹಳ್ಳಿ ಗಲಭೆ, ಡ್ರಗ್ಸ್ ರಂಪಾಟದ ನಡುವೆ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಸಂಜೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಕರೆದಿರುವ ಸಭೆಗೆ ಎಲ್ಲಾ ಸಚಿವರು ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚನೆ ನೀಡಲಾಗಿದೆ. ಕೋವಿಡ್ ನಿಯಂತ್ರಣ, ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ, ಮುಂದೆ ನಡೆಯಲಿರುವ ವಿಧಾನಸಭಾ ಅಧಿವೇಶನ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಯಡಿಯೂರಪ್ಪ ಚರ್ಚೆ ನಡೆಸುವ ಸಾಧ್ಯತೆ ಇದೆ. ಸೆ. 21ರಿಂದ ವಿಧಾನಸಭೆಯ ಮುಂಗಾರು ಅಧಿವೇಶನ...
ರಾಜ್ಯ

ಕೇಂದ್ರ ಸರ್ಕಾರದ ಸಮ್ಮತಿ ನಂತರ ಶಾಲೆ ಆರಂಭ : ಸುರೇಶ್ ಕುಮಾರ್ – ಕಹಳೆ ನ್ಯೂಸ್

ಮಾಗಡಿ, ಸೆ.5- ಕೇಂದ್ರ ಸರ್ಕಾರದ ಹಸಿರು ನಿಶಾನೆ ಬಂದ ಕೂಡಲೆ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ತಾಲ್ಲೂಕಿನ ವಿವಿಧೆಡೆಗಳಲ್ಲಿ ನಡೆಯುತ್ತಿರುವ ವಿದ್ಯಾಗಮ ತರಗತಿಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾನಸ ವಿದ್ಯಾನಿಧಿ ಶಾಲೆಯಲ್ಲಿ ಅವರು ಮಾತನಾಡಿದರು. ನಿರಂತರ ಕಲಿಕೆಯಿಂದ ಮಕ್ಕಳು ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಈ ಜಾರಿಗೆ ತರಲಾಗಿದೆ. ಗುಡಿ, ಅರಳಿಕಟ್ಟೆ, ಮರದ ಕೆಳಗೆ ಅಂತರ ಕಾಯ್ದುಕೊಂಡು ಮಕ್ಕಳನ್ನು ಕೂಡಿಸಿ...
ರಾಜಕೀಯರಾಜ್ಯ

ಗ್ರಾ.ಪಂ ಚುನಾವಣೆಗೆ ಆಯೋಗ ಸಿದ್ಧತೆ ಗುಂಪು ಪ್ರಚಾರ, ವಿಜಯೋತ್ಸವ ಮಾಡಲು ಅನುಮತಿ ಇಲ್ಲ! – ಕಹಳೆ ನ್ಯೂಸ್

ಕೋವಿಡ್ ಪೀಡಿತರಿಗೂ ಸ್ಪರ್ಧೆಗೆ ಅವಕಾಶ, ಪ್ರಚಾರದ ವೇಳೆ ಅಭ್ಯರ್ಥಿ ಜತೆ 5 ಮಂದಿಗೆ ಮಾತ್ರ, ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಗೆದ್ದ ಮೇಲೆ ವಿಜಯೋತ್ಸವ ಆಚರಣೆ ಇಲ್ಲ. ಇಂತಹ ನಿಯಮದೊಂದಿಗೆ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣ ಆಯೋಗ ಸಿದ್ಧತೆ ನಡೆಸುತ್ತಿದೆ. ಈ ಕುರಿತು ಬಿಡುಗಡೆ ಮಾಡಿರುವ ಪ್ರಮಾಣಿತ ಕಾರ್ಯನಿರ್ವಹಣ ವಿಧಾನ (ಎಸ್‍ಒಪಿ)ಯ ಕರಡು ಮಾರ್ಗಸೂಚಿಗಳಾಗಿವೆ. ಕೇಂದ್ರ ಗೃಹ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್...
ರಾಜ್ಯಶಿಕ್ಷಣ

ಸೆಪ್ಟೆಂಬರ್ 7ರಿಂದ ದ್ವಿತೀಯ ಪಿಯು ಪೂರಕ ಪರೀಕ್ಷೆ: ಅಗತ್ಯ ಸಿದ್ದತೆಗೆ ಎಡಿಸಿ ಸೂಚನೆ – ಕಹಳೆ ನ್ಯೂಸ್

ರಾಯಚೂರು : ಇದೇ ಮಾಹೆಯ 7ರಿಂದ 19ರ ವರೆಗೆ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬರೆಯಲಿದ್ದು, ಶಾಂತಿ ಹಾಗೂ ಸುವ್ಯಸ್ಥೆಯಿಂದ ಈ ಪರೀಕ್ಷೆಗಳು ಜರುಗಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ದುರಗೇಶ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಗುರುವಾರ ನಗರದ ಸಹಾಯಕ ಆಯುಕ್ತರ ಕಚೇರಿಯಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಪೂರ್ವಭಾವಿ ಸಿದ್ದತೆಗಳ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಪೂರಕ...
ರಾಜ್ಯ

ಅಂಗವಿಕಲ ಭಿಕ್ಷುಕನ ಬಟ್ಟೆ ಗಂಟಿನಲ್ಲಿ ಸಾವಿರಾರು ನೋಟುಗಳು!-ಕಹಳೆ ನ್ಯೂಸ್

ಪುಷ್ಪಕ ವಿಮಾನ ಸಿನಿಮಾದಲ್ಲಿ ಭಿಕ್ಷುಕನ ಬಳಿ ಸಾವಿರಾರು ನೋಟುಗಳು ಪತ್ತೆಯಾದಂತೆ ಬೆಂಗಳೂರಿನಲ್ಲೊಂದು ಘಟನೆ ವರದಿಯಾಗಿದ್ದು, ಅಂಗವಿಕಲ ಭಿಕ್ಷುಕನ ಬಳಿಯ ಬಟ್ಟೆ ಗಂಟಿಯಲ್ಲಿ ಸಾವಿರಾರು ರೂಪಾಯಿ ಮೌಲ್ಯದ ನೋಟುಗಳು ಪತ್ತೆಯಾಗಿವೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬರದಿ ಗ್ರಾಮದಲ್ಲಿ ಅಂಗವಿಕಲ ಭಿಕ್ಷುಕನ ಬಳಿಯಿದ್ದ ಕೊಳಕು ಬಟ್ಟೆಯನ್ನು ಸಾರ್ವಜನಿಕರು ಎಸೆಯಲು ಹೋದಾಗ ನೋಟುಗಳು ಪತ್ತೆಯಾಗಿವೆ. ಪ್ರತಿದಿನ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಅಂಗವಿಕಲ ರಂಗಸ್ವಾಮಯ್ಯ ಬಳಿ ಹಣ ಪತ್ತೆಯಾಗಿದೆ. ರಂಗಸ್ವಾಮಯ್ಯ ಭಿಕ್ಷೆ ಬೇಡಿದ...
ರಾಜ್ಯ

ತುಮಕೂರು : ಇಂದಿರಾ ಕ್ಯಾಂಟೀನ್ ಅವ್ಯವಹಾರ ಕುರಿತು ಲೋಕಾಯುಕ್ತ ತನಿಖೆ..? – ಕಹಳೆ ನ್ಯೂಸ್

ತುಮಕೂರು, ಆ. 28-ನಗರದ ಇಂದಿರಾ ಕ್ಯಾಂಟೀನ್‍ಗಳಲ್ಲಿ ಈ ಹಿಂದೆ ನಡೆದಿದ್ದ ಅಕ್ರಮ, ಅವ್ಯವಹಾರದ ಬಗ್ಗೆ ಲೋಕಾಯುಕ್ತ ತನಿಖೆಗೆ ವಹಿಸುವ ಸಾಧ್ಯತೆಗಳಿವೆ. 2018-19ನೇ ಸಾಲಿನಲ್ಲಿ ನಡೆದಿದ್ದ ಇಂದಿರಾ ಕ್ಯಾಂಟೀನ್ ಅವ್ಯವಹಾರದ ಬಗ್ಗೆ ಈ ಸಂಜೆ ದಿನಪತ್ರಿಕೆಯಲ್ಲಿ ಸುದೀರ್ಘ ವರದಿ ಪ್ರಕಟಿಸಲಾಗಿತ್ತು. ಪತ್ರಿಕಾ ವರದಿ ಹಿನ್ನೆಲೆಯಲ್ಲಿ ಅಂದಿನ ಆಯುಕ್ತರು ಇದರ ತನಿಖೆಗಾಗಿ ಒಂದು ಸಮಿತಿಯನ್ನೂ ಸಹ ರಚಿಸಿದ್ದರು. ಈ ಸಮಿತಿ ವರದಿ ನೀಡಿ ವರ್ಷಗಳು ಉರುಳಿದರೂ ಅದನ್ನು ಬಹಿರಂಗಪಡಿಸಲೇ ಇಲ್ಲ. ಸದರಿ ವರದಿಯನ್ನು...
ರಾಜ್ಯ

ಡಿಸೆಂಬರ್ ಅಂತ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ..? -ಕಹಳೆ ನ್ಯೂಸ್

ಬೆಂಗಳೂರು,ಆ.27- ರಾಜ್ಯ ಚುನಾವಣಾ ಆಯೋಗ ವರ್ಷಾಂತ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಸುವ ಸಾಧ್ಯತೆಯಿದೆ. ಕೇಂದ್ರ ಚುನಾವಣಾ ಆಯೋಗ ಹೊರಡಿಸಿರುವ ಹೊಸ ಮಾರ್ಗಸೂಚಿಗಳಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಆಯೋಗ ಚುನಾವಣೆ ನಡೆಸಲು ಮುಂದಾಗಿದೆ. ಡಿಸೆಂಬರ್ ತಿಂಗಳ ಅಂತ್ಯಕ್ಕೆ ಕೋವಿಡ್-19 ನಿಯಂತ್ರಣಕ್ಕೆ ಬಂದರೆ ಆಯೋಗ ಚುನಾವಣೆ ನಡೆಸುವುದು ಬಹತೇಕ ಖಚಿತವಾಗಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಇದು ಪ್ರತಿಷ್ಟೆಯ ಕಣವಾಗಲಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ಯಾವುದೇ ರಾಜಕೀಯ ಪಕ್ಷದ...
1 155 156 157 158 159 165
Page 157 of 165