Sunday, January 19, 2025

ರಾಜ್ಯ

ಕೊಡಗುಮಡಿಕೇರಿರಾಜ್ಯಸುದ್ದಿ

ಕೊಡಗಿನಲ್ಲಿ ಧಾರಾಕಾರ ಮಳೆ ; ಇದೂವರೆಗೆ 52 ಪ್ರದೇಶಗಳಲ್ಲಿ ಪ್ರವಾಹ – 14 ಪ್ರದೇಶದಲ್ಲಿ ಭೂಕುಸಿತ – ಕಹಳೆ ನ್ಯೂಸ್

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದೂವರೆಗೆ ಜಿಲ್ಲೆಯ 52 ಪ್ರದೇಶಗಳಲ್ಲಿ ಪ್ರವಾಹ, 14 ಪ್ರದೇಶಗಳಲ್ಲಿ ಭೂಕುಸಿತವಾಗಿದೆ. 591 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. 9 ಪರಿಹಾರ ಕೇಂದ್ರಗಳಿಗೆ 591 ಜನರ ಸ್ಥಳಾಂತರ ಮಾಡಲಾಗಿದೆ. ಪ್ರವಾಹ ಭೂಕುಸಿತದಿಂದಾಗಿ 8 ಕಡೆ ರಸ್ತೆ ಸಂಚಾರ ಕಡಿತಗೊಂಡಿದೆ ಎಂದು ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ವಿರಾಜಪೇಟೆ ತಾಲೂಕಿನಲ್ಲಿರುವ ಅರಮೇರಿ ಕಳಂಚೇರಿ ಮಠ ಕಳೆದ ಬಾರಿಯೂ ಪ್ರವಾಹದಲ್ಲಿ ಮುಳುಗಿತ್ತು. ಸದ್ಯ ಜಿಲ್ಲೆಯಲ್ಲಿ...
ರಾಜ್ಯಶಿಕ್ಷಣ

Breaking News : ಆ.10ರಂದು SSLC ಫಲಿತಾಂಶ ಪ್ರಕಟ ; ಸಚಿವ ಎಸ್ ಸುರೇಶ್ ಕುಮಾರ್ ಘೋಷಣೆ – ಕಹಳೆ ನ್ಯೂಸ್

ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ನಡುವೆಯೂ ನಡೆದಿದ್ದಂತ ರಾಜ್ಯದ ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ, ಆಗಸ್ಟ್ 10ರಂದು ರಾಜ್ಯದಲ್ಲಿ ಪ್ರಕಟಗೊಳ್ಳಲಿದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಆಗಸ್ಟ್ 10ರಂದು ಮಧ್ಯಾಹ್ನ 3ಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷಾ...
ದಕ್ಷಿಣ ಕನ್ನಡಬೆಳ್ತಂಗಡಿರಾಜ್ಯಸುದ್ದಿ

ಶಾಸಕ‌ ಹರೀಶ್ ಪೂಂಜಗೆ ಕೊರೊನಾ ಪಾಸಿಟಿವ್ ; ಸಿ.ಎಂ. ಯಡಿಯೂರಪ್ಪರನ್ನು ಭೇಟಿಯಾಗಿದ್ದೇ ಮುಳುವಾಯಿತಾ ‘ಶ್ರಮಿಕ’ನಿಗೆ..? – ಕಹಳೆ ನ್ಯೂಸ್

ಬೆಳ್ತಂಗಡಿ : ಶಾಸಕ ಹರೀಶ್ ಪೂಂಜಾಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಇತ್ತೀಚೆಗಷ್ಟೇ ಸಿ.ಎಂ. ಯಡಿಯೂರಪ್ಪ ಅವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಸಿ.ಎಂ. ಅವರ ವರದಿ ಬರುವ ಕೆಲ ದಿನಗಳ ಹಿಂದೆಯಷ್ಟೇ ಹರೀಶ್ ಪೂಂಜಾ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಇದೀಗ ಪೂಂಜಾಗೂ ಸೋಂಕು ದೃಢಪಟ್ಟಿದ್ದು, ಸಿ.ಎಂ. ಭೇಟಿಯೇ ಮುಳುವಾಯಿತೇ ಎಂಬ ಮಾತುಗಳು ಕೇಳಿಬರುತ್ತಿದೆ....
ದಕ್ಷಿಣ ಕನ್ನಡರಾಜ್ಯರಾಷ್ಟ್ರೀಯಸುದ್ದಿ

ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ‘ಮನೆಯಲ್ಲಿಯೇ ರಾಮನ ಪೂಜೆ ಮಾಡಿ, ಪಟಾಕಿ ಸಿಡಿಸದಿರಿ, ಸಂಭ್ರಮಾಚರಣೆ ಬೇಡ’ – ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮನವಿ – ಕಹಳೆ ನ್ಯೂಸ್

ಮಂಗಳೂರು, ಆ. 04  : ''ಬುಧವಾರ ಆಗಸ್ಟ್‌ 5 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ನಡೆಯಲಿದ್ದು, ಈ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಮನೆಯಲ್ಲಿಯೇ ಪೂಜೆ ಮಾಡಿ, ಬೀದಿಯಲ್ಲಿ ಪೂಜೆ ಮಾಡಿ, ಪಟಾಕಿ ಸಿಡಿಸಿ, ಮೆರವಣಿಗೆ ಮಾಡುವುದನ್ನು ಮಾಡಬೇಡಿ. ಅಯೋಧ್ಯೆಯಂತಹ ಸೂಕ್ಷ್ಮ ವಿಚಾರದಲ್ಲಿ ಯಾರ ಭಾವನೆಗೂ ಧಕ್ಕೆ ಉಂಟಾಗಬಾರದು'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಬಿಜೆಪಿ ಕಾರ್ಯಕರ್ತರಿಗೆ ತಿಳಿಸಿದ್ದಾರೆ.   ''ಎಲ್ಲಾ ಕಾರ್ಯಕರ್ತರು ಜವಾಬ್ದಾರಿಯಿಂದ ವರ್ತಿಸಬೇಕು. ಗುಂಪು ಸೇರಿ ಸಂಭ್ರಮಾಚರಣೆ ಮಾಡಬೇಡಿ, ಪ್ರತಿ...
ಕಾಸರಗೋಡುದಕ್ಷಿಣ ಕನ್ನಡರಾಜ್ಯಸುದ್ದಿ

ಕಾಸರಗೋಡು – ದಕ್ಷಿಣ ಕನ್ನಡ ಜಿಲ್ಲೆ : ನಿಬಂಧನೆಗಳೊಂದಿಗೆ ಸಂಚಾರ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್ – ಕಹಳೆ ನ್ಯೂಸ್

ಕಾಸರಗೋಡು, ಆ. 03 : ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಗಡಿ ತೆರವಿಗೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲಾಡಳಿತ ಹಾಗೂ ಕಾಸರಗೋಡು ಉಸ್ತುವಾರಿ ಸಚಿವರ ಸಭೆ ಇಂದು ನಡೆದಿದ್ದು ಈ ಹಿಂದೆ ಇದ್ದ ದೈನಂದಿನ ಪಾಸ್‌ನ್ನು ಕೆಲವೊಂದು ನಿಬಂಧನೆಗಳೊಂದಿಗೆ ಪುನರ್‌ ಆರಂಭ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.   ಗಡಿ ಜಿಲ್ಲೆಗಳ ನಡುವೆ ಸಂಚಾರ ಮಾಡುವವರು ಏಳು ದಿನಕ್ಕೊಮ್ಮೆ ಕೋವಿಡ್ ತಪಾಸಣೆಗೆ ಒಳಗಾಗಬೇಕಾಗಿದ್ದು ವಿವಾಹ, ಮರಣ ಮೊದಲಾದ ಕಾರ್ಯಕ್ರಮಗಳಿಗೆ ಅಂತಾರಾಜ್ಯ ಸಂಚಾರಕ್ಕೆ ನಿಬಂಧನೆಗಳೊಂದಿಗೆ...
ಬೆಂಗಳೂರುರಾಜಕೀಯರಾಜ್ಯಸುದ್ದಿ

ಸಿಎಂ ಬಿ.ಎಸ್‌.ಯಡಿಯೂರಪ್ಪ ಪುತ್ರಿ, ಕಾವೇರಿ ನಿವಾಸದ ಆರು ಮಂದಿ ಸಿಬ್ಬಂದಿಗಳಿಗೂ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ಬೆಂಗಳೂರು, ಆ 03 : ಸಿಎಂ ಬಿಎಸ್‌‌ವೈ ಅವರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ, ಸಿಎಂ ಅವರ ಕಾವೇರಿ ಮತ್ತು ಕೃಷ್ಣಾ ನಿವಾಸಗಳ ಎಲ್ಲಾ ಸಿಬ್ಬಂದಿಗಳಿಗೂ ಕೊರೊನಾ ತಪಾಸಣೆ ಮಾಡಲಾಗುತ್ತಿದ್ದು, ಕಾವೇರಿ ನಿವಾಸದ ಆರು ಮಂದಿಗೆ ಕೊರೊನಾ ಸೋಂಕು ಖಚಿತವಾಗಿದೆ.   ಕೊರೊನಾ ತಪಾಸಣೆಯ ಸಂದರ್ಭ ಸಿಎಂ ಅವರ ಕಾವೇರಿ ನಿವಾಸದಲ್ಲಿದ್ದ ಬಾಣಸಿಗ ಮಹಿಳೆ ಸೇರಿ ಗನ್‌‌ ಮ್ಯಾನ್‌‌‌, ವಿಶೇಷ ಕರ್ತವ್ಯಾಧಿಕಾರಿ ಹಾಗೂ ಆರು ಮಂದಿಗೆ ಸೋಂಕು ಪತ್ತೆಯಾಗಿದೆ. ತಮಗೆ ಕೊರೊನಾ ಸೋಂಕು...
ಆರೋಗ್ಯಬೆಂಗಳೂರುರಾಜ್ಯಸುದ್ದಿ

ಕರೊನಾಗೆ ಆಯುರ್ವೇದ ಔಷಧ ಪ್ರಯೋಗ; ಬಿಎಂಸಿಆರ್​ಐ ನೋಟಿಸ್ ವಿಚಾರಕ್ಕೆ ಡಾ.ಗಿರಿಧರ ಕಜೆ ಹೇಳಿದ್ದೇನು? – ಕಹಳೆ ನ್ಯೂಸ್

ಬೆಂಗಳೂರು: ಕರೊನಾ ರೋಗಿಗಳ ಮೇಲೆ ಆಯುರ್ವೇದ ಔಷಧ ಪ್ರಯೋಗ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನೋಟಿಸೊಂದು ಹರಿದಾಡುತ್ತಿದೆ. ಇದು ಹಲವು ಗೊಂದಲಗಳಿಗೂ ಕಾರಣವಾಗಿತ್ತು. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್​ಐ) ಎಥಿಕಲ್ ಕಮಿಟಿ ಹೆಸರಲ್ಲಿರುವ ಲೆಟರ್​ ಹೆಡ್​ನಲ್ಲಿ ಆಯುರ್ವೇದ ತಜ್ಞ ಡಾ.ಗಿರಿಧರ ಕಜೆಯವರಿಗೆ ನೋಟಿಸ್ ಎಂದು ಬರೆಯಲಾಗಿದೆ. ಇದರಲ್ಲಿ ಆಯುರ್ವೇದ ಔಷಧದ ಕ್ಲಿನಿಕಲ್​ ಟ್ರಯಲ್​ ಇನ್ನೂ ಜಾರಿಯಲ್ಲಿರುವಾಗಲೇ ಯಶಸ್ವಿಯಾಗಿದೆ ಎಂದು ಸಾರ್ವಜನಿಕವಾಗಿ ಘೋಷಿಸಿದ್ದೀರಿ ಎಂದು...
ಕಾಸರಗೋಡುದಕ್ಷಿಣ ಕನ್ನಡರಾಜ್ಯಸುದ್ದಿ

ಕಾಸರಗೋಡು – ದ.ಕ. ಜಿಲ್ಲೆ ಗಡಿ ತೆರವಿಗೆ ದ.ಕ. ಜಿಲ್ಲಾಡಳಿತದ ಅಭ್ಯಂತರವಿಲ್ಲ ; ಕಾಸರಗೋಡು ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ – ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. – ಕಹಳೆ ನ್ಯೂಸ್

ಮಂಗಳೂರು, ಆ. 03: ಅಂತರ ರಾಜ್ಯ ಸಂಚಾರ ವಿಚಾರಕ್ಕೆ ಸಂಬಂಧಿಸಿದಂತೆ ನೂತನವಾಗಿ ಅಧಿಕಾರ ಸ್ವೀಕರಿಸಿರುವ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಪ್ರತಿಕ್ರಿಯೆ ನೀಡಿದ್ದು, ಸರಕಾರ ಆದೇಶ ನೀಡಿದ್ದಲ್ಲಿ ನಮ್ಮ ಯಾವುದೇ ಅಭ್ಯಂತರವಿಲ್ಲ ಎಂದಿದ್ದಾರೆ.   ಆಗಸ್ಟ್ 5ರಿಂದ ಅಂತರ ರಾಜ್ಯ ಸಂಚಾರಕ್ಕೆ ಅವಕಾಶ ನೀಡುವಂತೆ ಕೇಂದ್ರ ಸರಕಾರ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. ಆದರೆ, ಕರ್ನಾಟಕ ಹಾಗೂ ಕೇರಳ ಸರಕಾರದ ಆದೇಶದಂತೆ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು. ಕಾಸರಗೋಡಿನಿಂದ ಹೆಚ್ಚಿನ...
1 159 160 161 162 163 165
Page 161 of 165