Sunday, January 19, 2025

ರಾಜ್ಯ

ಉಡುಪಿರಾಜ್ಯಸುದ್ದಿ

ಶ್ರೀಕೃಷ್ಣನ ಅನುಗ್ರಹದಿಂದ ಕೊರೊನಾ ಗೆದ್ದುಬಂದ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ; ಶ್ರೀಗಳು ಫೀಟ್ ಆಂಡ್ ಫೈನ್ – ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ – ಕಹಳೆ ನ್ಯೂಸ್

ಉಡುಪಿ, ಆ. 02 : ಕೊರೊನಾ ಸೋಂಕು ದೃಢಪಟ್ಟಿದ್ದ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು 12 ದಿನಗಳ ಚಿಕಿತ್ಸೆ ಪಡೆದ ಬಳಿಕ ಆಗಸ್ಟ್ 1 ರ ಶನಿವಾರ ಇಲ್ಲಿನ ಕೆಎಂಸಿ ಮಣಿಪಾಲದಿಂದ ಬಿಡುಗಡೆ ಆಗಿದ್ದಾರೆ. ಕೊರೊನಾ ಸೋಂಕು ಲಕ್ಷಣ ಕಾರಣ ಜುಲೈ 21 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಸ್ಪತ್ರೆಯಲ್ಲಿಯೂ ಅವರು ತಮ್ಮ ನಿತ್ಯ ಪೂಜೆಗಳನ್ನು ಮಾಡುತ್ತಿದ್ದರು. ತಮ್ಮ ವಾರ್ಷಿಕ ಚಾರ್ತುಮಾಸ ವ್ರತವನ್ನು ಆಸ್ಪತ್ರೆಯಲ್ಲಿಯೂ ಮಾಡುತ್ತಿದ್ದರು. ಈಗ ಅವರು...
ರಾಜ್ಯಶಿಕ್ಷಣ

ಆಗಸ್ಟ್ ಮೊದಲ ವಾರ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ ಸಾಧ್ಯತೆ-ಕಹಳೆ ನ್ಯೂಸ್

ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ನಡುವೆಯೂ ಯಶಸ್ವಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲಾಗಿತ್ತು. ಇಂತಹ ಪರೀಕ್ಷೆ ಮೌಲ್ಯಮಾಪನ ಕೂಡ ಭರದಿಂದ ಸಾಗಿದೆ. ಹೀಗಾಗಿ ಎಸ್ ಎಸ್ ಎಲ್ ಸಿ ಯ ಫಲಿತಾಂಶ ಆಗಸ್ಟ್ 6 ಇಲ್ಲವೇ 8ರಂದು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಇಂದು ರಾಜ್ಯಾಧ್ಯಂತ ತಾಂತ್ರಿಕ ಕೋರ್ಸ್ ಗಳ ಆಯ್ಕೆ ಸಂಬಂಧ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಯುತ್ತಿದೆ. ಎಸ್ ಎಸ್ ಎಲ್ ಸಿ ನಂತ್ರದ ವಿವಿಧ...
ರಾಜ್ಯಸುದ್ದಿ

ತೆಂಗಿನ ಎಣ್ಣೆಯಿಂದ ಸ್ಯಾನಿಟೈಸರ್ ಸಂಶೋಧಿಸಿದ ವಿದ್ಯಾರ್ಥಿ ; ಜಗತ್ತನೇ ನಡುಗಿಸುತ್ತಿರೋ ಕೊರೊನಾ ವೈರಸ್ ತಡೆಗಟ್ಟೋಕೆ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ‘ಕಲ್ಪಶುದ್ಧಿ’ – ಕಹಳೆ ನ್ಯೂಸ್

ತುಮಕೂರು: ಕೊರೊನಾ ತಡೆಗೆ ಈಗ ಸ್ಯಾನಿಟೈಸರ್ ಕೂಡ ಒಂದು ಮದ್ದಾಗಿದೆ. ಹೀಗಾಗಿ ಕಲ್ಪತರು ನಾಡಿನ ವಿದ್ಯಾರ್ಥಿಯೋರ್ವ ತೆಂಗಿನ ಎಣ್ಣೆ ಬಳಸಿಕೊಂಡು ಸ್ಯಾನಿಟೈಸರ್ ಸಂಶೋಧಿಸಿದ್ದಾರೆ. ಜಗತ್ತನೇ ನಡುಗಿಸುತ್ತಿರೋ ಕೊರೊನಾ ವೈರಸ್ ತಡೆಗಟ್ಟೋಕೆ ಮತ್ತೊಂದು ರೀತಿಯ ಸ್ಯಾನಿಟೇಸರ್ ಹೊರತರೋಕೆ ವಿದ್ಯಾರ್ಥಿ ಕಾಯುತ್ತಿದ್ದಾರೆ. ತುಮಕೂರು ನಗರದ ಎಸ್‍ಐಟಿ ಕಾಲೇಜಿನ ಎಂಜಿನಿಯರಿಂಗ್ ಬಯೋಕೆಮಿಕಲ್ ವಿಭಾಗದ ವಿಧ್ಯಾರ್ಥಿ ಎಚ್.ಎನ್.ಚಿದಾನಂದ್ ಹೊಸ ಸ್ಯಾನಿಟೈಸರ್ ಸಂಶೋಧಿಸಿದ್ದು, ಆ ಮೂಲಕ ಗಮನ ಸೆಳೆದಿದ್ದಾರೆ. ಅಂದುಕೊಂಡಂತೆ ಆದರೆ ಕೆಲವೇ ದಿನಗಳಲ್ಲಿ ‘ಕಲ್ಪಶುದ್ಧಿ’ ಎಂಬ ಹೆಸರಿನ...
ಆರೋಗ್ಯರಾಜ್ಯರಾಷ್ಟ್ರೀಯಸುದ್ದಿ

ಅನ್ ಲಾಕ್ 3.0 : ಆ. 5ರಿಂದ ರಾತ್ರಿ ಕರ್ಫ್ಯೂ ತೆರವು ; ಜಿಮ್, ಯೋಗ ಕೇಂದ್ರಕ್ಕೆ ಅನುಮತಿ – ಕಹಳೆ ನ್ಯೂಸ್

ನವದೆಹಲಿ, ಜು 30 : ಕೊರೊನಾದ ಗಣನೀಯ ಏರಿಕೆಯ ನಡುವೆ ಕೇಂದ್ರ ಸರ್ಕಾರ ಬುಧವಾರ ಅನ್ ಲಾಕ್-3 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಆಗಸ್ಟ್ 5ರಿಂದ ರಾತ್ರಿ ಕರ್ಫ್ಯೂ ತೆರವುಗೊಳಿಸಿ ,ಜಿಮ್, ಯೋಗ ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಈ ಮಾರ್ಗಸೂಚಿ ಪ್ರಕಾರ ಶಾಲಾ- ಕಾಲೇಜು , ಕೋಚಿಂಗ್ ಸೆಂಟರ್ ಗಳು, ಮೆಟ್ರೋ , ಸಿನಿಮಾ ಮಂದಿರಗಳನ್ನು ತೆರೆಯಲು ಆಗಸ್ಟ್ 31ರ ವರೆಗೆ ಅವಕಾಶ ನೀಡಿಲ್ಲ.   ಕಂಟೈನ್​ಮೆಂಟ್​ ಜೋನ್​ಗಳಲ್ಲಿ ಆ.31ರವರೆಗೆ...
ದಕ್ಷಿಣ ಕನ್ನಡರಾಜ್ಯಸುದ್ದಿ

ದ.ಕ. ಜಿಲ್ಲೆಯಲ್ಲಿ ಮತ್ತೆ 208 ಮಂದಿಯಲ್ಲಿ ಸೋಂಕು- ರಾಜ್ಯದಲ್ಲಿ 5,503 ಹೊಸ ಕೊರೊನಾ ಪ್ರಕರಣ ಪತ್ತೆ- ಕಹಳೆ ನ್ಯೂಸ್

ದ.ಕ. ಜಿಲ್ಲೆಯಲ್ಲಿ ಮತ್ತೆ 208 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆ ಮೂಲಕ ಸೋಂಕಿತರ ಸಂಖ್ಯೆ 5311ಕ್ಕೆ ಏರಿಕೆಯಾಗಿದೆ.ಸದ್ಯ ಜಿಲ್ಲೆಯಲ್ಲಿ 2715 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2556 ಮಂದಿ ಜಿಲ್ಲೆಯಲ್ಲಿ ಇಲ್ಲಿಯ ತನಕ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಬುಧವಾರವೂ ಕೂಡ 118 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂದಿದ್ದಾರೆ. 65 ಮಂದಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. 73 ಮಂದಿಯಲ್ಲಿ ಐಎಲ್ ಐ ಪ್ರಕರಣ ದೃಢಪಟ್ಟಿದೆ. 12 ಮಂದಿಯಲ್ಲಿ ಸಾರಿ ಪ್ರಕರಣ ಪತ್ತೆಯಾಗಿದ್ದು, 58 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ....
ಬೆಂಗಳೂರುರಾಜಕೀಯರಾಜ್ಯಸುದ್ದಿ

ಓರ್ವ ಕೊರೊನಾ ರೋಗಿಗೆ 5 ಲಕ್ಷ ಬಿಲ್ ; ಖಾಸಗಿ ಆಸ್ಪತ್ರೆ ವಿರುದ್ಧ ಸುಧಾಕರ್ ಕೆಂಡಾಮಂಡಲ – ಕಹಳೆ ನ್ಯೂಸ್

ಬೆಂಗಳೂರು: ಕೊರೊನಾ ರೋಗಿಗೆ 5 ಲಕ್ಷ ರೂ. ಬಿಲ್‌ ಮಾಡಿದ ಖಾಸಗಿ ಆಸ್ಪತ್ರೆಯ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಕೆಂಡಾಮಂಡಲವಾಗಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳ ಹಣ ಲೂಟಿ ಮಾಡುವ ಕೆಲಸ ನಡೆಯುತ್ತಲೇ ಇದೆ. ಕೊರೊನಾ ರೋಗವನ್ನು ಬಂಡವಾಳ ಮಾಡಿಕೊಂಡಿರುವ ಕೆಲ ಖಾಸಗಿ ಆಸ್ಪತ್ರೆಗಳು ದುಡ್ಡು ಮಾಡುವ ದಂಧೆಗೆ ಇಳಿದಿವೆ. ಸರ್ಕಾರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದರ ನಿಗದಿ ಮಾಡಿದ್ದರೂ ಆಸ್ಪತ್ರೆಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಈಗ...
ರಾಜಕೀಯರಾಜ್ಯಸುದ್ದಿಹಾಸನ

ಹುಲಿಯಾ ಮತ್ತು ಬಂಡೆ ಝೂನಲ್ಲಿ ಇರಲು ಫಿಟ್ “- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯ – ಕಹಳೆ ನ್ಯೂಸ್

ಹಾಸನ: ಹುಲಿಯಾ ಮತ್ತು ಬಂಡೆ ಝೂನಲ್ಲಿ ಇರಲು ಫಿಟ್ ಸಮಾಜದಲ್ಲಿ ಇರಲು ಅನ್‍ಫಿಟ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಹಾಸನದ ಚನ್ನರಾಯಪಟ್ಟಣದಲ್ಲಿ ಕಾಂಗ್ರೆಸ್‍ನ ಆರೋಪಕ್ಕೆ ತಿರುಗೇಟು ನೀಡಿದ ಅವರು, ಆಡಳಿತದಲ್ಲಿ ತಪ್ಪಿದ್ರೆ ವಿಧಾನಸೌಧದಲ್ಲಿ ಬಂದು ಗಲಾಟೆ ಮಾಡಿ. ನಿಮಗೆ ಹಕ್ಕಿದೆ. ಬಹಳ ಪುರಾತನ ಇತಿಹಾಸ ಇರುವ ರಾಜಕೀಯ ಪಕ್ಷವಾಗಿ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಜನರಿಗೆ...
ಬೆಂಗಳೂರುರಾಜ್ಯಸುದ್ದಿ

ಐಜಿಪಿ ರೂಪಾ ಖಡಕ್ ಎಚ್ಚರಿಕೆಗೆ ಬೆಚ್ಚಿದ ಖಾಸಗಿ ಆಸ್ಪತ್ರೆ ; ಸೋಂಕಿತರಿಂದ ಹೆಚ್ಚುವರಿಯಾಗಿ ಪಡೆದಿದ್ದ ರೂ. 24 ಲಕ್ಷ ವಾಪಸ್! – ಕಹಳೆ ನ್ಯೂಸ್

ಬೆಂಗಳೂರು: ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಮತ್ತು ಐಜಿಪಿ ಡಿ.ರೂಪಾ ನೇತೃತ್ವದ ತಂಡ ಎಚ್ಚರಿಕೆ ನೀಡಿದ ಬೆನ್ನಲ್ಲೇ ಕೊರೋನಾ ಚಿಕಿತ್ಸೆ ಸಲುವಾಗಿ 22 ಮಂದಿ ಸೋಂಕಿತರಿಂದ ಹೆಚ್ಚುವರಿಯಾಗಿ ಪಡೆದಿದ್ದ ರೂ.24 ಲಕ್ಷ ಹಣವನ್ನು ರಾಜರಾಜೇಶ್ವರಿ ನಗರ ಸಮೀಪದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಸೋಮವಾರ ಹಿಂತಿರುಗಿಸಿದೆ. ಸರ್ಕಾರದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸುಲಿಗೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ರೂಪಾ ಎಚ್ಚರಿಗೆ ನೀಡಿದ್ದಾರೆ. ನಮ್ಮ...
1 160 161 162 163 164 165
Page 162 of 165