ಡ್ರಗ್ಸ್ ಪ್ರಕರಣ: ಕರ್ನಾಟಕದ ಕ್ರಿಕೆಟ್ ಪಟು, ಸದ್ಯದಲ್ಲೇ ವಿಚಾರಣೆ-ಕಹಳೆ ನ್ಯೂಸ್
ಬೆಂಗಳೂರು- ಡ್ರಗ್ಸ್ ಜಾಲಕ್ಕೆ ಸಂಬಂಸಿದಂತೆ ಕ್ರಿಕೆಟ್ ಆಟಗಾರರೊಬ್ಬರನ್ನು ಸಿಸಿಬಿ ಪೊಲೀಸರು ಸದ್ಯದಲ್ಲೇ ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಆಟಗಾರ ಈಗಾಗಲೇ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಆಪ್ತ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖಾ ಅಧಿಕಾರಿಗಳು ಅವರನ್ನು ವಿಚಾರಣೆ ಗೊಳಪಡಿಸಲಿದ್ದಾರೆ. ಈಗಾಗಲೇ ಕೆಪಿಎಲ್ ಕ್ರಿಕೆಟ್ ತಂಡದ ಮಾಲೀಕ ಹಾಗೂ ಉದ್ಯಮಿಯೊಬ್ಬರನ್ನು ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿ ದ್ದಾರೆ ಎಂದು ತಿಳಿದುಬಂದಿದೆ. ಅವರಿಂದ ಎರಡು ಮೊಬೈಲ್ಗಳನ್ನು ವಶಪಡಿಸಿಕೊಂಡಿರುವ ತನಿಖಾಕಾರಿಗಳು...