Saturday, January 18, 2025

ರಾಜ್ಯ

ಕ್ರೈಮ್ಚಿಕ್ಕಮಂಗಳೂರುಬೆಂಗಳೂರುರಾಜ್ಯಸುದ್ದಿ

ಕಾಡಿನ ರಹಸ್ಯ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿದ್ದಾರೆ ನಕ್ಸಲರು..! – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಶರಣಾದ ನಕ್ಸಲರು ಇನ್ನೂ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿಲ್ಲ. ಆಧುನಿಕ ಶಸ್ತ್ರಾಸ್ತ್ರಗಳನ್ನು  ಕಾಡಿನ ರಹಸ್ಯ ಸ್ಥಳದಲ್ಲಿ ಅಡಗಿಸಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಯಾವೊಬ್ಬ ನಕ್ಸಲರು ಕೂಡ ಆಯುಧಗಳನ್ನು ಪೊಲೀಸರಿಗೆ ನೀಡಿಲ್ಲ. ಮುಂದಿನ ವಾರ ಪೊಲೀಸರು ನಕ್ಸಲರ ವಶಕ್ಕೆ ಪಡೆಯಲಿದ್ದು ಬಳಿಕ ಅಡಗಿಸಿಟ್ಟ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಪೊಲೀಸರು 6 ಮಂದಿ ನಕ್ಸಲರನ್ನು ರಾಷ್ಟ್ರೀಯ ತನಿಖಾ ದಳದ (NIA) ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸುವ ಮೊದಲು ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ....
ತುಮಕೂರುರಾಜ್ಯಸುದ್ದಿ

ನಿವೃತ್ತ RTO ಆಪ್ತನ ಮನೆ ಮೇಲೆ ಲೋಕಾಯುಕ್ತ ದಾಳಿ-ಕಹಳೆ ನ್ಯೂಸ್

ತುಮಕೂರು: ಪ್ರಾದೇಶಿಕ ಸಾರಿಗೆ ಕಚೇರಿಯ ನಿವೃತ್ತ ಸಾರಿಗೆ ಅಧಿಕಾರಿ ಎಸ್.ರಾಜು ಅವರ ಆಪ್ತ, ಮಧ್ಯವರ್ತಿ ದಿಬ್ಬೂರಿನ ಸತೀಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸ್.ರಾಜು ಅವರಿಗೆ ಸಂಬಂಧಿಸಿದ ಬೆಂಗಳೂರಿನ ಎರಡು ಮನೆ, ಬಳ್ಳಾರಿಯಲ್ಲಿ ಒಂದು ಮನೆ ಮತ್ತು ತುಮಕೂರಿನ ದಿಬ್ಬೂರು ಬಳಿಯ ರಾಜು ಆಪ್ತ ಸತೀಶ್ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ತುಮಕೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀನಾರಾಯಣ ನೇತೃತ್ವದ ಅಧಿಕಾರಿಗಳ ತಂಡ ದಾಖಲೆ ಪರಿಶೀಲನೆಯಲ್ಲಿ...
ದಕ್ಷಿಣ ಕನ್ನಡಬೆಂಗಳೂರುಮಂಗಳೂರುರಾಜ್ಯಸಂತಾಪಸುದ್ದಿ

ತೀವ್ರ ಅನಾರೋಗ್ಯದಿಂದ ಹಿರಿಯ ಸಾಹಿತಿ ನಾ.ಡಿಸೋಜ ವಿಧಿವಶ : ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸದ ಸರ್ಕಾರ- ಕಹಳೆ ನ್ಯೂಸ್

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ನೋರ್ಬೆರ್ಟ್ ಡಿಸೋಜ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. 88 ವರ್ಷದ ಡಿಸೋಜ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ 7.50ಕ್ಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನೂ ಅವರ ನಿಧನದ ಗೌರವಾರ್ಥ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ರಾಜಕೀಯ ವ್ಯಕ್ತಿಗಳು ನಿಧನ ಹೊಂದಿದಾಗ ರಜೆ ಘೋಷಿಸುವ ಸರ್ಕಾರಗಳು, ಇಂತಹ...
ಆರೋಗ್ಯಬೆಂಗಳೂರುರಾಜ್ಯಸುದ್ದಿ

ಕರ್ನಾಟಕಕ್ಕೂ ಕಾಲಿಟ್ಟ `HMPV’ ವೈರಸ್ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ- ಕಹಳೆ ನ್ಯೂಸ್

ಬೆಂಗಳೂರು : ಚೀನಾದಲ್ಲಿ ಅಟ್ಟಹಾಸ ಮೆರೆಯುತ್ತಿರುವ HMPV ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ ಮಗುವಿಗೆ ಜ್ವರ ಕಂಡು ಬಂದ ಹಿನ್ನೆಲೆಯಲ್ಲಿ ಮಗುವಿಗೆ ರಕ್ತ ಪರೀಕ್ಷೆ ಮಾಡಿಸಲಾಗಿದೆ. ಈ ವೇಳೆ ಸೋಂಕು ಇರುವುದು ದೃಢಪಟ್ಟಿದೆ. HMPV ಎಂದರೇನು..? 2001 ರಲ್ಲಿ ಪತ್ತೆಯಾದ ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (HMPV), ನ್ಯುಮೊವಿರಿಡೆ ಕುಟುಂಬಕ್ಕೆ ಸೇರಿದ್ದು, ಇದು...
ಯಕ್ಷಗಾನ / ಕಲೆರಾಜ್ಯಸುದ್ದಿ

ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ – ಕಹಳೆ ನ್ಯೂಸ್

ದಾವಣಗೆರೆ: ನಗರದ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಗಾರಿ ಬಾರಿಸುವುದು ಹಾಗೂ ಅಡಿಕೆ ಹೊಂಬಾಳೆ ಬಿಡಿಸುವ ಮೂಲಕ ಚಾಲನೆ‌ ನೀಡಿದರು. ಯುವಜನೋತ್ಸವ‌ ನಿಮಿತ್ತ ಬೆಳಿಗ್ಗೆ ವಿವಿಧ ಜಾನಪದ ಕಲಾ ಪ್ರಕಾರಗಳ ಮೆರವಣಿಗೆ ನಡೆಯಿತು. ಕಲಾ ಮೆರವಣಿಗೆಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಚಾಲನೆ‌ ನೀಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 1500ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದು, ಜ‌ನಪದ ನೃತ್ಯ,...
ಮೈಸೂರುರಾಜ್ಯಸುದ್ದಿ

ಆಹಾರ ಅರಸುತ್ತ ಕಾಡಿನಿಂದ ನಾಡಿಗೆ ಬಂದ ಕಾಡಾನೆ : ತಡೆಗೋಡೆ ಕಂಬಗಳ ನಡುವೆ ಸಿಲುಕಿ ಒದ್ದಾಡಿದ ಒಂಟಿ ಸಲಗ – ಕಹಳೆ ನ್ಯೂಸ್

ಮೈಸೂರು: ಕಾಡಿನಿಂದ ನಾಡಿಗೆ ಆಹಾರ ಅರಸುತ್ತ ಬಂದ ಕಾಡಾನೆಯೊಂದು ತಡೆಗೋಡೆ ಕಂಬಗಲ ನಡುವೆ ಸಿಲುಕಿ ಒದ್ದಾಡಿದ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಳ್ಳಿಯ ಮದಗನೂರು ಕೆರೆಯಂಚಲ್ಲಿ ನಡೆದಿದೆ. ಸುಮಾರು 30 ವರ್ಷದ ಕಾಡಾನೆಯೊಂದು ತಡೆಗೋಡೆ ಕಂಬಗಳ ನಡುವೆ ಸಿಲುಕಿಕೊಂಡಿದೆ. 2021ರಲ್ಲಿ ಈ ಆನೆಗೆ ನಾಗರಹೊಳೆ ಎಲಿಫೆಂಟ್ 1 ಎಂಬ ಹೆಸರಲ್ಲಿ ರೆಡಿಯೋ ಕಾಲರ್ ಅಳವಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆನೆ ಯಾವ ಸ್ಥಳದಲ್ಲಿ ಸಿಲುಕುಕಿಕೊಂಡಿದೆ ಎಂಬುದನ್ನು ಪತ್ತೆಮಾಡುವುದು ಅರಣ್ಯ ಇಲಾಖೆ...
ಬೆಂಗಳೂರುರಾಜ್ಯಸುದ್ದಿ

 ಪ್ರಯಾಣಿಕರ ಜೇಬಿಗೆ ಶೇ.15ರಷ್ಟು ಕತ್ತರಿ ಪ್ರಯೋಗ : ಮಧ್ಯರಾತ್ರಿಯಿಂದಲೇ KSRTC ಬಸ್‌ ಟಿಕೆಟ್‌ ಪರಿಷ್ಕೃತ ದರ ಜಾರಿ – ಕಹಳೆ ನ್ಯೂಸ್

ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ರಾಜ್ಯದ ನಾಲ್ಕು ನಿಗಮಗಳಲ್ಲಿ ಏರಿಕೆಯಾಗಿದ್ದ ಬಸ್ ದರ ಪ್ರಯಾಣ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಶನಿವಾರ ಮಧ್ಯರಾತ್ರಿ 11 ಗಂಟೆಯಿಂದ ನೂತನ ದರ ಪರಿಷ್ಕರಣೆಯಾಗಿದ್ದು, ಭಾನುವಾರದಿಂದ ಹೊಸ ದರ ಜಾರಿಗೆ ಬರಲಿದೆ. ಕೆಎಸ್‌ಆರ್‌ಟಿಸಿ ಕಲ್ಯಾಣ ಕರ್ನಾಟಕ, ವಾಯುವ್ಯ ಮತ್ತು ಬಿಎಂಟಿಸಿಗಳಲ್ಲಿ ಭಾನುವಾರದಿಂದಲೇ ಹೊಸ ದರ ಅನ್ವಯವಾಗಲಿದ್ದು, ಪ್ರಯಾಣಿಕರ ಜೇಬಿಗೆ ಶೇ.15ರಷ್ಟು ಕತ್ತರಿ ಪ್ರಯೋಗವಾಗಲಿದೆ. ಹಾಲಿ ಇದ್ದ ದರಕ್ಕೆ 15% ಏರಿಕೆಯಾಗಲಿದ್ದು, ಶಕ್ತಿ ಯೋಜನೆಯಿಂದ ನಷ್ಟದಲ್ಲಿರುವ ಸಾರಿಗೆ ನಿಗಮಗಳನ್ನು ಲಾಭಕ್ಕಿಂತ...
ಬೆಂಗಳೂರುಮಂಗಳೂರುರಾಜ್ಯಸುದ್ದಿ

ಬೆಂಗಳೂರು-ಮಂಗಳೂರು ಪ್ರತಿ ತಿಂಗಳ ಭಾನುವಾರದಂದು ಖ್ಯಾತ ವಾಗ್ಮಿಗಳಿಂದ ತತ್ವಾಧಾರ ಪ್ರವಚನಮಾಲಿಕೆ ಕಾರ್ಯಕ್ರಮ-ಕಹಳೆ ನ್ಯೂಸ್

ಬೆಂಗಳೂರು: ಸದ್ವಿಚಾರಗಳ ಸುಪ್ರಸಾರ ಸಾರ್ವಕಾಲಿಕ ಸತ್ಕಾರ್ಯ, ಅವುಗಳ ಪಾಲನೆ, ಪ್ರಸರಣಗಳಿಂದಲೇ ಸಂಸ್ಕೃತಿಯ ಸೌರಭ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಶೋಧ ಕೇಂದ್ರವು ಪ್ರವಚನಗಳ ಮೂಲಕ ಸದ್ವಿಚಾರಗಳನ್ನು ಸಮಾಜಕ್ಕೆ ನೀಡಲಿದ್ದು, ನಾಡಿನ ವಿದ್ವನ್ಮಣಿಗಳಿಂದ ವಿವಿಧ ವಿಚಾರಗಳ ಕುರಿತು ಪ್ರವಚನಗಳು ನಡೆಯಲಿವೆ. ವಾಗ್ನಿಗಳಾದ ಪ್ರೊ. ಜಿ. ಶಿವರಾಮ ಅಗ್ನಿಹೋತ್ರಿ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ವಿದ್ವಾನ್ ಉಮಾಕಾಂತ ಭಟ್ಟ, ಡಾ. ಕೆ.ಎಸ್. ಕಣ್ಣನ್, ಡಾ. ಪಾದೇಕಲ್ಲು ವಿಷ್ಣು ಭಟ್ಟ,...
1 2 3 4 165
Page 2 of 165