ಅಯೋಧ್ಯೆ ರಾಮಮಂದಿರಕ್ಕೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮಲಲಾ ವಿಗ್ರ – ಕಹಳೆ ನ್ಯೂಸ್
ಜನವರಿ 22 ರಂದು ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮಲಲಾ ಮೂರ್ತಿಯ ಪ್ರತಿಷ್ಠಾಪನೆಯಾಗಲಿದೆ. ಇಡೀ ದೇಶವೇ ಈ ಭವ್ಯ ಕ್ಷಣಕ್ಕೆ ಸಾಕ್ಷಿಯಾಗಲು ಕಾಯುತ್ತಿದೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡುವ ರಾಮಲಲಾ ಮೂರ್ತಿ ತಯಾರಿಸಲು ಮೂವರು ಶಿಲ್ಪಿಗಳಿಗೆ ಆಹ್ವಾನ ನೀಡಲಾಗಿತ್ತು. ಇದರಲ್ಲಿ ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೂಡ ಒಬ್ಬರು. ಇದೀಗ ಅರುಣ್ ಅವರು ಕೆತ್ತನೆ ಮಾಡಿದ ರಾಮಲಲಾ ಮೂರ್ತಿಯನ್ನೇ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಹೇಳಲಾಗಿದೆ. 51 ಇಂಚಿನ ರಾಮಲಲಾ ಮೂರ್ತಿ...