Monday, November 25, 2024

ರಾಜ್ಯ

ದಕ್ಷಿಣ ಕನ್ನಡರಾಜ್ಯಸುದ್ದಿ

ಹೆಣ್ಣು ಮಗು ನೀಡಿದ ಕಟೀಲು ಮಾತೆಗೆ ಶಿಲ್ಪಾ ಶೆಟ್ಟಿಯಿಂದ ಸೀರೆ ಹರಕೆ – ಕಹಳೆ ನ್ಯೂಸ್

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರು ಪತಿ ರಾಜ್‌ ಕುಂದ್ರಾ, ಮಕ್ಕಳು, ತಾಯಿ, ಸಹೋದರಿ ನಟಿ ಶಮಿತಾ ಶೆಟ್ಟಿ ಜತೆಗೆ ಭೇಟಿ ನೀಡಿ ಸೇವೆ ಸಲ್ಲಿಸಿದರು. ಹೆಣ್ಣು ಮಗುವಿಗಾಗಿ ಹರಕೆ ಹೊತ್ತುಕೊಂಡಿದ್ದ ಶಿಲ್ಪಾ ಶೆಟ್ಟಿ ದಂಪತಿ ಶ್ರೀದೇವಿಗೆ ಸೀರೆ ಹರಕೆ ಒಪ್ಪಿಸಿದರು. ಬಳಿಕ ರಥಬೀದಿಯಲ್ಲಿ ನಡೆಯುತ್ತಿದ್ದ ಯಕ್ಷಗಾನವನ್ನು ವೀಕ್ಷಿಸಿ, ವೇಷಗಳ ಭಾವಚಿತ್ರ ತೆಗೆದು ಸಂಭ್ರಮಿಸಿದರು....
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಕಾಂಗ್ರೆಸ್‌ ಟಿಕೆಟ್‌ ಮಾರಾಟ – ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ 2 ಕೋಟಿ ರೂ. ಪಡೆದು ಇನಾಯತ್‌ ಅಲಿಗೆ ಟಿಕೆಟ್‌ ಕೊಟ್ಟಿದ್ದಾರೆ ; ಮಾಜಿ ಶಾಸಕ ಮೊದೀನ್‌ ಬಾವಾ ಗಂಭೀರ ಆರೋಪ – ಕಹಳೆ ನ್ಯೂಸ್

ಬೆಂಗಳೂರು: ಟಿಕೆಟ್‌ ವಂಚಿತ ಕೆಲವರು ಪಕ್ಷದ ಟಿಕೆಟ್‌ ಮಾರಾಟವಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದು, ಇದು ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ಗೆ ತೀವ್ರ ಮುಜುಗರ ಉಂಟು ಮಾಡಿದೆ. ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರ ಸಹೋದರ ಎಸ್‌.ಎಂ.ಶಂಕರ್‌ ಅವರ ಪುತ್ರ ಹಾಗೂ ಮದ್ದೂರು ಕಾಂಗ್ರೆಸ್‌ ಟಿಕೆಟ್‌ ವಂಚಿತ ಗುರುಚರಣ್‌ ಹಾಗೂ ಮಂಗಳೂರು ನಗರ ಉತ್ತರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಮೊದೀನ್‌ ಬಾವಾ ಅವರು ಪಕ್ಷದ ವಿರುದ್ಧ ಟಿಕೆಟ್‌ ಮಾರಾಟದ ಆರೋಪ ಮಾಡಿರುವುದು...
ದಕ್ಷಿಣ ಕನ್ನಡಮೂಡಬಿದಿರೆರಾಜ್ಯಶಿಕ್ಷಣಸುದ್ದಿ

ದ್ವಿತೀಯ ಪಿಯುಸಿ ಫಲಿತಾಂಶ ; ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಮೂಡಬಿದಿರೆ ವಿದ್ಯಾರ್ಥಿನಿ ಅನನ್ಯಾ ರಾಜ್ಯಕ್ಕೆ ಪ್ರಥಮ ರ್‍ಯಾಂಕ್‌ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : 2022–23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಪಿಯು ಮಂಡಳಿ ನಿರ್ದೇಶಕರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಮೂಡಬಿದಿರೆ ವಿದ್ಯಾರ್ಥಿನಿ ಅನನ್ಯಾ ರಾಜ್ಯಕ್ಕೆ ಪ್ರಥಮ ರ್‍ಯಾಂಕ್‌ ಪಡೆದುಕೊಂಡಿದ್ದಾರೆ. https://karresults.nic.in  ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ ನಂಬರ್ ಹಾಗೂ ಜನ್ಮ ದಿನಾಂಕ ನಮೂದಿಸಿ ಫಲಿತಾಂಶ ವೀಕ್ಷಿಸಬಹುದು. ರಾಜ್ಯದಲ್ಲಿ ಪ್ರಥಮ ರ್‍ಯಾಂಕ್‌ ಪಡೆದವರ ವಿವರ:  ಕಲಾ ವಿಭಾಗ : ತಬಸುಮ್ ಶೇಕ್, ಜಯನಗರ ಬೆಂಗಳೂರು...
ಉಡುಪಿದಕ್ಷಿಣ ಕನ್ನಡಬೆಂಗಳೂರುರಾಜ್ಯಶಿಕ್ಷಣಸುದ್ದಿ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ; ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ, ಕೊಡಗು ತೃತೀಯ ಮತ್ತು ಉತ್ತರ ಕನ್ನಡ ನಾಲ್ಕನೇ ಸ್ಥಾನ – ಕಹಳೆ ನ್ಯೂಸ್

ಬೆಂಗಳೂರು, ಏ 21 :2022–23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಪಿಯು ಮಂಡಳಿ ನಿರ್ದೇಶಕರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. https://karresults.nic.in  ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ ನಂಬರ್ ಹಾಗೂ ಜನ್ಮ ದಿನಾಂಕ ನಮೂದಿಸಿ ಫಲಿತಾಂಶ ವೀಕ್ಷಿಸಬಹುದು. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಶೇ.61.22, ವಾಣಿಜ್ಯ ವಿಭಾಗದಲ್ಲಿ ಶೇ.75.89, ವಿಜ್ಞಾನ ವಿಭಾಗದಲ್ಲಿ ಶೇ.85.71 ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ(ಶೇ.95) ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಡುಪಿ ದ್ವಿತೀಯ, ಕೊಡಗು...
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಅಲಿ – ಬಾವಾ ಮುಖಾಮುಖಿ ; ಪರಸ್ಪರ ಅಭ್ಯರ್ಥಿಗಳ ಪರ ಮೊಳಗಿದ ಘೋಷಣೆ – ಕಹಳೆ ನ್ಯೂಸ್

ಮಂಗಳೂರು: ನಗರದ ಮಿನಿವಿಧಾನಸೌಧ ಬಳಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮುಖಾಮುಖಿಯಾಗಿ ಪರಸ್ಪರ ಅಭ್ಯರ್ಥಿಗಳ ಪರ ಘೋಷಣೆ ಮೊಳಗಿಸಿದ ಘಟನೆ ಗುರುವಾರ ನಡೆದಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿ ಇನಾಯತ್ ಅಲಿ ಅವರು ನಾಮಪತ್ರ ಸಲ್ಲಿಕೆಗೆ ಮಿನಿವಿಧಾನಸೌಧಕ್ಕೆ‌ಆಗಮಿಸಿದರು. ಇದೇ ವೇಳೆ ಜೆಡಿಎಸ್ ಪಕ್ಷದಿಂದ ಮೊಯ್ದಿನ್ ಬಾವಾ ನಾಮಪತ್ರ ಸಲ್ಲಿಕೆ ವಿಷಯ ತಿಳಿದು ಜೆಡಿಎಸ್ ಕಾರ್ಯಕರ್ತರು ಕೂಡ ಆಗಮಿಸಿದ್ದರು. ಪರಸ್ಪರ ಘೋಷಣೆ ಕೂಗಿದ ಘಟನೆ ನಡೆಯಿತು. ಮಾಜಿ ಶಾಸಕ ಮೊಯ್ದಿನ್...
ಉಡುಪಿರಾಜಕೀಯರಾಜ್ಯಸುದ್ದಿ

ಉಡುಪಿಯಲ್ಲಿ ಇಂದು ಬಿಜೆಪಿ ಮಹಿಳಾ ಕಾರ್ಯ ಪ್ರಮುಖರ ಸಭೆ ; ಮಹಿಳಾ ಕಾರ್ಯದ ರಾಜ್ಯ ಸಹ ಸಂಚಾಲಕಿ ಶ್ಯಾಮಲಾ ಕುಂದರ್‌ ಪತ್ರಿಕಾಗೋಷ್ಠಿ – ಕಹಳೆ ನ್ಯೂಸ್

ಉಡುಪಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಶಿವಮೊಗ್ಗ ವಿಭಾಗದ ಬಿಜೆಪಿ ಮಹಿಳಾ ಕಾರ್ಯ ಪ್ರಮುಖರ ಸಭೆ ಎ. 21ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಬಿಜೆಪಿ ಕಚೇರಿ ಯಲ್ಲಿ ನಡೆಯಲಿದೆ ಎಂದು ಮಹಿಳಾ ಕಾರ್ಯದ ರಾಜ್ಯ ಸಹ ಸಂಚಾಲಕಿ ಶ್ಯಾಮಲಾ ಕುಂದರ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ಸಭೆಯಲ್ಲಿ 90ರಿಂದ 95 ಮಂದಿ ಸೇರುವ ನಿರೀಕ್ಷೆಯಿದ್ದು ಮಹಿಳಾ ಕಾರ್ಯದ ರಾಷ್ಟ್ರೀಯ ಉಪಾಧ್ಯಕ್ಷೆ ಜ್ಯೋತಿ ಶೇಥಿ, ಮಹಿಳಾ ಮೋರ್ಚಾದ ರಾಜ್ಯ ಸಹಾ ಪ್ರಭಾರಿ...
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಬದಲಾವಣೆಯತ್ತ ಉಳ್ಳಾಲ – ಖಾದರ್ ಕೈಯಿಂದ ತಪ್ಪುತ್ತಾ ಕೈ ಭದ್ರಕೋಟೆ…!? ; ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ನಾಮಪತ್ರ ಸಲ್ಲಿಕೆ – ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಬಿಜೆಪಿ ಕಾರ್ಯಕರ್ತರು – ಕಹಳೆ ನ್ಯೂಸ್

ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಗುರುವಾರ ನಾಮ ಪತ್ರ ಸಲ್ಲಿಸಿದರು. ಸತೀಶ್ ಕುಂಪಲ ಅವರು ಕುಂಪಲದ ಶ್ರೀ ಬಾಲಕೃಷ್ಣ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮುನ್ನೂರು ದೆಕ್ಕಾಡು ಕೊರಗಜ್ಜನ ಕ್ಷೇತ್ರ, ಮಾಡೂರು ದೈವಸ್ಥಾನದಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ಉಳ್ಳಾಲ ಅಬ್ಬಕ್ಕ ಸರ್ಕಲ್‍ನಲ್ಲಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ನಡೆಸಿದರು. ಬಳಿಕ ಉಳ್ಳಾಲದಲ್ಲಿ ನವ ಮಂಗಳೂರು ನಿರ್ಮಾತೃ ಶ್ರೀನಿವಾಸ ಮಲ್ಯ ಅವರ ಮನೆಗೆ ಭೇಟಿ ನೀಡಿದ ಬಳಿಕ...
ದಕ್ಷಿಣ ಕನ್ನಡಬಂಟ್ವಾಳರಾಜಕೀಯರಾಜ್ಯಸುದ್ದಿ

ಬಂಟ್ವಾಳ ಕ್ಷೇತ್ರದ ಗ್ರಾಮ ಗ್ರಾಮಗಳನ್ನು ತಲುಪಿ ಶಕ್ತಿ ಕೇಂದ್ರದ ಪ್ರಮುಖರ ಜತೆ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಸಮಾಲೋಚನೆ – ಕಹಳೆ ನ್ಯೂಸ್

ಬಂಟ್ವಾಳ: ಕಾರ್ಯಕರ್ತರೂ ಯಾವತ್ತೂ ಕೂಡ ನಾಯಕರ ಹಿಂದೆ ಹೋಗದೆ ಪಕ್ಷದ ಹಿಂದೆ ಹೋದಾಗ ಆ ಕ್ಷೇತ್ರದಲ್ಲಿ ಪಕ್ಷ ಗಟ್ಟಿಯಾಗುತ್ತದೆ, ಯಾರೂ ಸ್ಪರ್ಧಿಸಿದರೂ ಗೆಲುವು ನಮ್ಮದಾಗುತ್ತದೆ ಎಂದು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಪ್ರತಿ ಬಾರಿಯೂ ಪಕ್ಷದ ಕುರಿತು ಅಭಿಮಾನದ ಮಾತು ಹೇಳಿ, ಅಭ್ಯರ್ಥಿ ಘೋಷಣೆಗೆ ಮುನ್ನಾ ಬಂಟ್ವಾಳ ಕ್ಷೇತ್ರದ ಎಲ್ಲಾ ಬಿಜೆಪಿ ಶಕ್ತಿ ಕೇಂದ್ರಗಳಿಗೂ ತೆರಳಿ ಕಾರ್ಯಕರ್ತರಲ್ಲಿ ಶಕ್ತಿ ತುಂಬುವ ಕಾರ್ಯ ಮಾಡಿದ್ದಾರೆ ಎಂದು ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ...
1 56 57 58 59 60 154
Page 58 of 154