ಕಾಂಗ್ರೆಸಿಗರಿಂದ ಕಾರ್ಕಳದ ಗೌರವ ಕೆಡಿಸುವ ಬೆಳವಣಿಗೆ ಒಳ್ಳೆಯದಲ್ಲ : ವೈಯಕ್ತಿಕ ಟೀಕೆ ಬಿಟ್ಟು ಕಾರ್ಕಳಕ್ಕೆ ಗೌರವ ತರುವಂತೆ ನಡೆದುಕೊಳ್ಳಲಿ – ಬಿಜೆಪಿ ಅಭ್ಯರ್ಥಿ ವಿ ಸುನಿಲ್ ಕುಮಾರ್ – ಕಹಳೆ ನ್ಯೂಸ್
ಕಾರ್ಕಳ: ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರವಿರುವ ಬೆಂಬಲಿಗರು ಸಾರ್ವಜನಿಕ ಸಭೆ, ವೇದಿಕೆಗಳಲ್ಲಿ,ಸಾಮಾಜಿಕ ಜಾಲತಾಣಗಳಲ್ಲಿ ವಯಕ್ತಿಕ ಟೀಕೆಗಳನ್ನು ಮಾಡುವುದು, ಕೀಳು ಮಟ್ಟದ ಪದ ಪ್ರಯೋಗಿಸುತ್ತಿರುವುದನ್ನು ಮಾಡುತ್ತಿದ್ದಾರೆ. ಈ ಎಲ್ಲ ನಡವಳಿಕೆಗಳು ಅನಾಗರಿಕ ಸಂಸ್ಕೃತಿಯಾಗಿದೆ. ಇಂತಹ ಸಭ್ಯತೆ ಮೀರಿದ ವರ್ತನೆ ಕಾರ್ಕಳದ ಗೌರವ ಕೆಡಿಸುವ ಯತ್ನ ಎಂದು ಬಿಜೆಪಿ ಅಭ್ಯರ್ಥಿ ವಿ ಸುನಿಲ್ ಕುಮಾರ್ಹೇಳಿದ್ದಾರೆ. ಕಾರ್ಕಳದ ಜನ ಗೌರವದಿಂದ ಬದುಕಿ ಬಾಳಿದವರು. ಇಂದಿಗೂ ಅದೇ ಬದುಕನ್ನುಮುಂದವರೆಸುತ್ತಿದ್ದಾರೆ. ಮುಂದೆಯೂ ಅದನ್ನೆ ಬಯಸುವರು. ಗೌರವದ...