ತಾಕತ್ತಿದ್ದರೆ ಭಜರಂಗದಳ ನಿಷೇಧಿಸಿ : ಯಶ್ ಪಾಲ್ ಸುವರ್ಣ ಆಕ್ರೋಶ – ಕಹಳೆ ನ್ಯೂಸ್
ಉಡುಪಿ: ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ತಾಕತ್ತಿದ್ದರೆ ಭಜರಂಗದಳವನ್ನು ನಿಷೇಧಿಸಿ ಎಂದು ಉಡುಪಿ ಜಿಲ್ಲಾ ಭಜರಂಗ ದಳದ ಮಾಜಿ ಸಂಚಾಲಕ, ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದುತ್ವದ ವಿಚಾರಧಾರೆಯೊಂದಿಗೆ ರಾಷ್ಟ್ರ ವಿರೋಧಿಗಳಿಗೆ ಸಿಂಹ ಸ್ವಪ್ನ ಸಂಘಟನೆಯಾಗಿ, ಗೋ ಕಳ್ಳರ ಹಾಗೂ ಲವ್ ಜಿಹಾದಿಗಳ ವಿರುಧ್ದ ಕಠಿಣ ನಿಲುವು ತಾಳಿದ ದೇಶ ಭಕ್ತ ಹಿಂದೂ ಸಂಘಟನೆಯನ್ನು ದಮನಿಸುವ ಯತ್ನದ ಮೂಲಕ ರಾಜ್ಯ ಕಾಂಗ್ರೆಸ್ ಪಕ್ಷ...