ಮೇ 3ರಂದು ಕರಾವಳಿಗೆ ಪ್ರಧಾನಿ ನರೇಂದ್ರ ಮೋದಿ ; ಸಮಾವೇಶಕ್ಕೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕೊಲ್ನಾಡಿನಲ್ಲಿ ಭರದ ಸಿದ್ಧತೆ – ಕಹಳೆ ನ್ಯೂಸ್
ಮಂಗಳೂರು: ಚುನಾವಣೆಯ ಕಾವು ಕರಾವಳಿಯಲ್ಲಿ ಹೆಚ್ಚಾಗುತ್ತಿದ್ದಂತೆ ಅಬ್ಬರದ ಪ್ರಚಾರಕ್ಕೆ ಪಕ್ಷಗಳು ಅಣಿಯಾಗಿವೆ. ಪ್ರಧಾನಿ ನರೇಂದ್ರ ಮೋದಿ ಮೇ 3ರಂದು ಕರಾವಳಿಗೆ ಆಗಮಿಸಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಬಿಜೆಪಿ ಪಾಳಯದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ಸಮಾವೇಶ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊಲಾ°ಡಿನಲ್ಲಿ ನಡೆಯಲಿದ್ದು, ಸಕಲ ತಯಾರಿ ಭರದಿಂದ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಬದಿಯ ಕೊಲ್ನಾಡು ಬಸ್ ತಂಗುದಾಣದ ಬಳಿಯ ಗದ್ದೆ ಪ್ರದೇಶವನ್ನು...