ಎರಡನೇ ಬಾರಿ ಬೆಳ್ತಂಗಡಿಯಲ್ಲಿ ಹರೀಶ್ ಪೂಂಜ ಕಣಕ್ಕೆ..! ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಕಂಡು ಕಂಗಾಲಾದ ಆಳಿದುಳಿದ ಕೈ ನಾಯಕರು ; 50 ರಿಂದ 60 ಸಾವಿರ ಮತಗಳ ಅಂತರದಲ್ಲಿ ಭಾರಿ ಗೆಲುವಿನ ನಿರೀಕ್ಷೆ ಹುಟ್ಟಿಸಿದ ಕಾರ್ಯಕರ್ತರ ಸಂಭ್ರಮ – ಕಹಳೆ ನ್ಯೂಸ್
ಬೆಳ್ತಂಗಡಿ : ಸುಳ್ಯ -ಪುತ್ತೂರು- ಬೆಳ್ತಂಗಡಿ ಒಂದೇ ವಿಧಾನಸಭಾ ಕ್ಷೇತ್ರವಾಗಿದ್ದ ಕಾಲದಲ್ಲಿ ಸುಳ್ಯದ ಬಾಳಗೋಡು ವೆಂಕಟರಮಣ ಗೌಡ ಬೆಳ್ತಂಗಡಿಯ ಮೊದಲ ಶಾಸಕರು. ಪ್ರತ್ಯೇಕ ಕ್ಷೇತ್ರವಾದ ನಂತರ 1957ರಲ್ಲಿ ನಡೆದ ಚುನಾವಣೆಯಲ್ಲಿ ಧರ್ಮಸ್ಥಳ ದೇವಸ್ಥಾನದ ಧರ್ಮಾಧಿಕಾರಿಯಾಗಿದ್ದ ರತ್ನವರ್ಮ ಹೆಗ್ಗಡೆ 1957ರಲ್ಲಿ ಕಾಂಗ್ರೆಸ್ನಿಂದ ಗೆದ್ದು ಶಾಸಕರಾದರು. 1962ರಲ್ಲಿ ಕಾಂಗ್ರೆಸ್ ರತ್ನವರ್ಮ ಹೆಗ್ಗಡೆಯವರನ್ನು ಕಾಪು ಕೇತ್ರದಲ್ಲಿ ಕಣಕ್ಕಿಳಿಸಿ, ಬಂಟ್ವಾಳದ ಕೊಂಕಣಿ ಸಮುದಾಯದ ವೈಕುಂಠ ಬಾಳಿಗರಿಗೆ ಅವಕಾಶ ಕೊಟ್ಟಿತ್ತು. 1962 ಮತ್ತು 1967ರಲ್ಲಿ ಎರಡು ಬಾರಿ...