ರಬ್ಬರ್ ಬೆಳೆಗೆ ಬಜೆಟ್‌ನಲ್ಲಿ ಬೆಂಬಲ ಬೆಲೆ – ಕೇರಳ ಮಾದರಿ ಪರಿಹಾರಕ್ಕೆ ಆಗ್ರಹ ; ಉಜಿರೆ ರಬ್ಬರ್ ಸೊಸೈಟಿ ನೇತೃತ್ವದಲ್ಲಿ ಶಾಸಕ ಹರೀಶ್ ಪೂಂಜ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ಅವರನ್ನು ಭೇಟಿ ಮಾಡಿ ರಬ್ಬರ್ ಕೃಷಿಕರ ಸಮಸ್ಯೆ ಕುರಿತು ಮನವರಿಕೆ – ಕಹಳೆ ನ್ಯೂಸ್
ಬೆಳ್ತಂಗಡಿ: ವರ್ಷದ ಎಲ್ಲ ದಿನಗಳಲ್ಲೂ ಆದಾಯ ತರುವಂತಹ ಬೆಳೆ ರಬ್ಬರ್. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಡಿಕೆಯ ಜತೆಗೆ ಮುಖ್ಯ ವಾಣಿಜ್ಯ ಬೆಳೆಯಾಗಿ ರಬ್ಬರನ್ನು ಅವಲಂಬಿ ಸಿದ್ದರೂ ಐದು ವರ್ಷಗಳಿಂದ ಉತ್ತಮ ಧಾರಣೆ ಕಾಣದಿರುವ ಹಿನ್ನೆಲೆಯಲ್ಲಿ ಮಕ್ಕಳಂತೆ ಸಲಹಿದ ರಬ್ಬರ್ ಮರಗಳ ಬುಡಕ್ಕೆ ಕೊಡಲಿ ಏಟು ಹಾಕಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿದೆ. ರಾಜ್ಯದಲ್ಲಿ 60 ಸಾವಿರ ಹೆಕ್ಟೇರ್‌ಗೂ ಮೇಲ್ಪಟ್ಟು ಪ್ರದೇಶದಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ. ದ.ಕ., ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ...