Monday, January 27, 2025

ರಾಜ್ಯ

ಬೆಂಗಳೂರುರಾಜ್ಯಸುದ್ದಿ

ಮೂರು ದಿನಗಳ ಭಾರತ ಇಂಧನ ಸಪ್ತಾಹಕ್ಕೆ ಚಾಲನೆ – ಗ್ರೀನ್ ಮೊಬಿಲಿಟಿ ರ‍್ಯಾಲಿಗೆ ಹಸಿರು ನಿಶಾನೆ ; ವಿಶ್ವದಲ್ಲಿ ಭಾರತ ಮುಂಚೂಣಿಯಲ್ಲಿರುವ ಮತ್ತೊಂದು ಕ್ಷೇತ್ರವೆಂದರೆ ಗ್ರೀನ್​ ಹೈಡ್ರೋಜನ್ : ಪ್ರಧಾನಿ ಮೋದಿ ಭಾಷಣ – ಕಹಳೆ ನ್ಯೂಸ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಗ್ರೀನ್ ಮೊಬಿಲಿಟಿ ರ‍್ಯಾಲಿಗೆ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಈ ರ‍್ಯಾಲಿಯ ಮೂಲಕ ಹಸಿರು ಇಂಧನಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಉದ್ಧೇಶಿಸಲಾಗುತ್ತಿದೆ. ಹೀಗಾಗಿ ಗ್ರೀನ್ ಮೊಬಿಲಿಟಿ ರ‍್ಯಾಲಿಯಲ್ಲಿ ಹಸಿರು ಇಂಧನ ಬಳಸಿಕೊಂಡು ಸಂಚರಿಸುವ ವಾಹನಗಳು ಭಾಗವಹಿಸುತ್ತಿವೆ. ರ‍್ಯಾಲಿಯು 42 ಕಿ.ಮೀ ಸಂಚರಿಸಲಿದ್ದು, ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ ಆರಂಭವಾಗಿ ಮಾದಾವರ ನೀಲಕಂಠ ಪಾರ್ಕಿಂಗ್ ಮೈದಾನದಲ್ಲಿ ಮುಕ್ತಾಯವಾಗಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಮೂರು ದಿನಗಳ...
ಕ್ರೈಮ್ರಾಜ್ಯಸುದ್ದಿ

ಧಾರವಾಡ ಕೃಷಿ‌ ವಿವಿ ವಿದ್ಯಾರ್ಥಿ ನಗ್ನವಾಗಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ – ಕಹಳೆ ನ್ಯೂಸ್

ಧಾರವಾಡ: ಧಾರವಾಡ ಕೃಷಿ‌ ವಿವಿ ವಿದ್ಯಾರ್ಥಿಯೋರ್ವ ನಗ್ನವಾಗಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.‌ ಕೃಷಿ ವಿವಿ ಅಂತಿಮ ವರ್ಷದ ವಿದ್ಯಾರ್ಥಿ (Student) ರೋಹಿತ್ ಸಿ.ಪಿ‌ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನಿನ್ನೆ (ಭಾನುವಾರ) ಮಧ್ಯಾಹ್ನ ಹಾಸ್ಟೆಲ್ ಮೆಸ್‌ನಲ್ಲಿ ಊಟ‌ ಮಾಡಿದ ಈ‌ತ, ನಂತರ ಹಾಸ್ಟೆಲ್ (Hostel) ರೂಂಗೆ ಹೋಗಿದ್ದಾನೆ.‌ ಅದರ ನಂತರ ಆತನ ಗೆಳೆಯರು ಹಾಗೂ ಕುಟುಂಬದವರಯ ಎಷ್ಟೇ ಮೊಬೈಲ್ ಕರೆ‌ ಮಾಡಿದರೂ ಆತ ಕರೆ ಸ್ವೀಕರಿಸಿರಲಿಲ್ಲ.‌ ಈ...
ದಕ್ಷಿಣ ಕನ್ನಡಬಂಟ್ವಾಳರಾಜ್ಯ

ರುದ್ರಗಿರಿಯ ರಣಕಹಳೆ | ಹಿಂದೂ ಜಾಗರಣ ವೇದಿಕೆ ಹೋರಾಟದ ಫಲಶ್ರುತಿ, ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸುತ್ತ 2 ಕಿ.ಮೀ. ಗಣಿಗಾರಿಕೆ ನಿಷೇಧ : ಜಿಲ್ಲಾಡಳಿತದಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವ – ಕಹಳೆ ನ್ಯೂಸ್

ಬಂಟ್ವಾಳ: ಇಲ್ಲಿನ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸುತ್ತಮುತ್ತಲ 2 ಕಿ.ಮೀ. ವ್ಯಾಪ್ತಿಯನ್ನು ಕ್ಷೇತ್ರದ ಪಾವಿತ್ರ್ಯ ಮತ್ತು ಸಂರಕ್ಷಣೆಯ ಜತೆಗೆ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಗಣಿಗಾರಿಕಾ ಚಟುವಟಿಕೆ ನಿಷೇಧಿತ ಪ್ರದೇಶವೆಂದು ಘೋಷಿಸುವ ಕುರಿತು ದ.ಕ.ಜಿಲ್ಲಾಡಳಿತ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ ಕ್ಷೇತ್ರದ ಸುತ್ತ ಗಣಿಗಾರಿಕೆ ನಿಷೇಧಿಸುವ ನಿಟ್ಟಿನಲ್ಲಿ ಪ್ರಸ್ತಾವ ಸಲ್ಲಿಸಲು ಮಂಗಳೂರು ಸಹಾಯಕ ಕಮಿಷನರ್‌ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು ಕಳೆದ...
ಬೆಂಗಳೂರುರಾಜ್ಯಸುದ್ದಿ

ಪತ್ರಕರ್ತರ ರಾಜ್ಯ ಮಟ್ಟದ 37ನೇ ಸಮ್ಮೇಳನ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ ; ಬೇಡಿಕೆಗಳಿಗೆ ಬಜೆಟ್​ನಲ್ಲಿ ಅನುಮೋದನೆ – ಕಹಳೆ ನ್ಯೂಸ್

ವಿಜಯಪುರ: ಪತ್ರಿಕೋದ್ಯಮದ ಹರಿಕಾರ ಖ್ಯಾತಿಯ ಮೊಹರೆ ಹನುಮಂತರಾಯರ ತವರಿನಲ್ಲಿ ಪ್ರಪ್ರಥಮ ಬಾರಿಗೆ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿರುವ ಎರಡು ದಿನಗಳ ಪತ್ರಕರ್ತರ 37 ನೇ ರಾಜ್ಯಮಟ್ಟದ ಸಮ್ಮೇಳನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ವಿದ್ಯುಕ್ತ ಚಾಲನೆ ನೀಡಿದರು. ಇಲ್ಲಿನ ಕಂದಗಲ್ಲ ಹನುಮಂತರಾಯ ರಂಗಮಂದಿರದ ಮೊಹರೆ ಹನುಮಂತರಾಯ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ಸಮ್ಮೇಳನವನ್ನು ಸಿಎಂ ಬೊಮ್ಮಾಯಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶತಮಾನದ ಸಂತ ಪರಮ ಪೂಜ್ಯ ಲಿಂ. ಸಿದ್ಧೇಶ್ವರ ಶ್ರೀ ಹಾಗೂ...
ದಕ್ಷಿಣ ಕನ್ನಡಬೆಂಗಳೂರುರಾಜ್ಯಸುದ್ದಿ

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿನ ತ್ಯಾಜ್ಯ ನಿರ್ವಹಣೆ ಸಮಸ್ಯೆ ಪರಿಹಾರಕ್ಕೆ ‘ಸ್ವಚ್ಛ ಮಂದಿರ ಅಭಿಯಾನ’ : ಫೆ.10ರಂದು ಉದ್ಘಾಟನೆ – ರೋಹಿಣಿ ಸಿಂಧೂರಿ- ಕಹಳೆ ನ್ಯೂಸ್

ಬೆಂಗಳೂರು: ಭಕ್ತಾದಿಗಳಿಗೆ ದೇವಾಲಯಗಳಲ್ಲಿ ನೈರ್ಮಲ್ಯದ ವಾತಾವರಣ ಮತ್ತು ಸ್ವಚ್ಚ ಪರಿಸರವನ್ನು ನೀಡುವ ಉದ್ದೇಶವನ್ನು ಹೊಂದಿರುವ ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಮಂದಿರ ಅಭಿಯಾನ ಉದ್ಘಾಟನೆಗೆ ಸಿದ್ದವಾಗಿದೆ. ಫೆ. 10 ರಂದು ನಿಮಿಷಾಂಭ ದೇವಸ್ಥಾನದಿಂದ ಉದ್ಘಾಟನೆ ಮಾಡಲಾಗುವುದು ಎಂದು ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆಯನ್ನು ನೀಡಿರುವ...
ದಕ್ಷಿಣ ಕನ್ನಡಬೆಳ್ತಂಗಡಿರಾಜ್ಯಸುದ್ದಿ

ಬೆಳ್ತಂಗಡಿಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಮಲಿನ ನೀರು ಶುದ್ಧೀಕರಣ ಘಟಕ ; ಶೀಘ್ರ ಲೋಕಾರ್ಪಣೆ ಮಾಡಲಾಗುವುದು ಎಂದ ಶಾಸಕ ಹರೀಶ್‌ ಪೂಂಜ – ಕಹಳೆ ನ್ಯೂಸ್

ಬೆಳ್ತಂಗಡಿ: ಮಾನವನ ನೇರ ನಿರ್ಲಕ್ಷ್ಯ ಹಾಗೂ ದುರಾಸೆಯಿಂದ ಭವಿಷ್ಯದ ಪರಿಸರ ಅಕ್ಷರಶಃ ಮಾಲಿನ್ಯಕರವಾಗಲಿದೆ. ಇದನ್ನು ಇಂದೇ ಸರಿಪಡಿಸಿ ಸುಸ್ಥಿತಿಗೆ ತರುವ ಉದ್ದೇಶದಿಂದ ಬೆಳ್ತಂಗಡಿ ಪ.ಪಂ. ಮುಂದಡಿಯಿಟ್ಟಿದ್ದು, ಪಟ್ಟಣ ವ್ಯಾಪ್ತಿಯ ಶೌಚಾಲಯದ ದ್ರವ ತ್ಯಾಜ್ಯವನ್ನು ಶುದ್ಧೀಕರಿಸಿ ಮರುಬಳಕೆಗೆ ಯೋಗ್ಯವಾಗಿಸುವ ಘಟಕ ಸ್ಥಾಪಿಸಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆ.ಯು. ಎಸ್‌. ಮತ್ತು ಡಿ.ಬಿ.)ಯಿಂದ ಯೋಜನೆ ಅನುಷ್ಠಾನಗೊಳಿಸಿದ್ದು 6.7 ಕೋ.ರೂ. ಘಟಕ ವೆಚ್ಚ, 5 ವರ್ಷಗಳ ನಿರ್ವಹಣೆ, ಸಕ್ಕಿಂಗ್‌ಯಂತ್ರ ಸಹಿತ...
ರಾಜ್ಯಸುದ್ದಿ

ಆರ್‌ಎಸ್‌ಎಸ್‌ ಬಲವೂ ಅಲ್ಲ, ಎಡವೂ ಅಲ್ಲ, ನಮ್ಮದು ರಾಷ್ಟ್ರೀಯ ಪಂಥ ; ಜೈಪುರದಲ್ಲಿ ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ – ಕಹಳೆ ನ್ಯೂಸ್

ಜೈಪುರ : ಆರ್‌ಎಸ್‌ಎಸ್‌ ಬಲಪಂಥವೂ ಅಲ್ಲ, ಎಡ ಪಂಥವೂ ಅಲ್ಲ. ನಮ್ಮದು ರಾಷ್ಟ್ರೀಯ ಪಂಥ. ರಾಜಕೀಯದ ಒಲವಿಲ್ಲದೆ, ರಾಷ್ಟ್ರ ಹಿತಕ್ಕಾಗಿ ಮಾತ್ರ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಎಂದು ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ದೇಶದಲ್ಲಿರುವ ಜನರ ಆಚರಣೆಗಳೂ ವಿಭಿನ್ನವಾಗಿದ್ದರೂ, ಅವರೆಲ್ಲರ ಪೂರ್ವಜರು ಹಿಂದೂಗಳೇ ಹಾಗಾಗಿ ದೇಶದಲ್ಲಿರುವವರೆಲ್ಲರೂ ಹಿಂದೂಗಳೇ ಎಂದು ಹೊಸಬಾಳೆ ಪ್ರತಿಪಾದಿಸಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಲವಂತದಿಂದ ಗೋಮಾಂಸ ತಿಂದವರನ್ನು ಹಿಂದೂಗಳಲ್ಲ ಎಂದು ಹೇಳಿ...
ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಫೆ.11ರಂದು ಪುತ್ತೂರಿಗೆ ಕೇಂದ್ರ ಸಚಿವ ಅಮಿತ್‌ ಶಾ ಭೇಟಿ, ಸಹಕಾರಿ ಸಮಾವೇಶ ಯಶಸ್ಸಿಗೆ ಸಂಸದ ನಳಿನ್‌ ಸೂಚನೆ – ಈಶ್ವರಮಂಗಲ ಹನುಮಗಿರಿ ಭಾರತ ಮಾತಾ ಮಂದಿರ ಉದ್ಘಾಟನೆ ; ಎಂ.ಟಿ. ರಸ್ತೆಯಲ್ಲಿ ಕ್ಯಾಂಪ್ಕೋ ಅಗ್ರಿ ಮಾಲ್‌ಗೆ ಶಿಲಾನ್ಯಾಸ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನ ಮೈದಾನದಲ್ಲಿ ಫೆ. 11ರಂದು ಹಮ್ಮಿಕೊಳ್ಳಲಾಗಿರುವ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಹಾಗೂ ಸಹಕಾರ ಸಮಾವೇಶದಲ್ಲಿ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವರಾದ ಅಮಿತ್‌ ಶಾ ಭಾಗವಹಿಸಲಿದ್ದಾರೆ. ಜಿಲ್ಲಾಡಳಿತ ತತ್‌ಕ್ಷಣದಿಂದಲೇ ಎಲ್ಲ ತಯಾರಿ, ಸಿದ್ಧತೆ ನಡೆಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ನಿರ್ದೇಶನ ನೀಡಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು...
1 80 81 82 83 84 167
Page 82 of 167