ಬೆಳ್ತಂಗಡಿ ತಾಲೂಕಿನ ಬಂದಾರು ಸರಕಾರಿ ಶಾಲೆಯಲ್ಲಿ ವಿದ್ಯಾಭಿಮಾನಿಗಳ ಸಹಕಾರದಿಂದ 4 ಲಕ್ಷ ರೂ. ವೆಚ್ಚದಲ್ಲಿ 2 ಎಕ್ರೆಯಲ್ಲಿ ಅಡಿಕೆ ತೋಟ ನಿರ್ಮಾಣ ; ಬೋರ್‌ವೆಲ್ ವ್ಯವಸ್ಥೆ ಕಲ್ಪಿಸಿದ್ದ ಶಾಸಕ ಹರೀಶ್ ಪೂಂಜ – ಕಹಳೆ ನ್ಯೂಸ್
ಬೆಳ್ತಂಗಡಿ: ಸರಕಾರಕ್ಕೆ ಸರಕಾರಿ ಶಾಲೆಗಳ ಉಪಚಾರ ಸಾಕಾಗಿದೆ. ಅಗತ್ಯ ಸಲಕರಣೆಗೂ ಅನುದಾನ ಸಿಗದ ಪರಿಸ್ಥಿತಿ ಸರಕಾರಿ ಶಾಲೆಗಳದ್ದು. ಕೆಲವೊಂದಕ್ಕೆ ಶಿಕ್ಷಕರೇ ತಮ್ಮ ವೇತನದಿಂದ ಭರಿಸಬೇಕಾದ ಸಂದಿಗ್ಧತೆಯೂ ಇದೆ. ಈ ಮಧ್ಯೆ ಸರಕಾರಿ ಶಾಲೆಗಳ ಮಕ್ಕಳ ಸಂಖ್ಯೆ ಹೆಚ್ಚಿಸಲು ನಾನಾ ಕಸರತ್ತು ನಡೆಸುವುದನ್ನು ಕಂಡು ಸರಕಾರಿ ಶಾಲೆಗಳ ಪೋಷಕರು ಬಸವಳಿದಿದ್ದಾರೆ. ಸರಕಾರಿ ಶಾಲೆಗಳ ಅಭಿವೃದ್ಧಿ ದೂರದೃಷ್ಟಿಯಿಂದ ತಾವೇ ಆದಾಯ ಮೂಲವನ್ನು ಕಂಡುಕೊಳ್ಳುತ್ತಿರುವ ಹಲವು ಶಾಲೆಗಳ ಸಾಧನೆಗಳನ್ನು ಕಂಡಿದ್ದೇವೆ. ಅಂಥದ್ದರಲ್ಲಿ ತಾಲೂಕಿನ ಬಂದಾರು ಗ್ರಾಮದ...