ತೃತೀಯ ವಿಶ್ವ ಹವ್ಯಕ ಸಮ್ಮೇಳನ – ೨೩೦೦ ಕಿ.ಮೀ ದೂರದ ಅಹಿಚ್ಛತ್ರದಿಂದ ಜ್ಯೋತಿಗೆ ಚಾಲನೆ -ಕಹಳೆ ನ್ಯೂಸ್
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದಿಂದ ವಿಶ್ವ ಹವ್ಯಕ ಸಮ್ಮೇಳನಕ್ಕೆ ಜ್ಯೋತಿಯನ್ನು ತರಲಾಗುತ್ತಿದ್ದು, ೨೩೦೦ ಕಿ.ಮೀ ದೂರದಿಂದ ತಂದಿರುವ ಜ್ಯೋತಿಯಿಂದ ದೀಪಬೆಳಗುವ ಮೂಲಕ ಡಿ.೨೭ ರಂದು ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನೆ ವಿಧ್ಯುಕ್ತವಾಗಿ ನಡೆಯಲಿದೆ. ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪ್ರಾಚೀನ ಅಹಿಚ್ಛತ್ರದ ಗ್ರಾಮದಲ್ಲಿರುವ ರಾಮದೇವಾಲಯದಿಂದ 'ಅಹಿಚ್ಛತ್ರ ಜ್ಯೋತಿ'ಗೆ ಚಾಲನೆ ನೀಡಲಾಗಿದ್ದು, ಈ ದೇವಾಲಯದಲ್ಲಿ ಕಳೆದ ೫೦ ವರ್ಷದಿಂದ ಅಖಂಡ ಜ್ಯೋತಿಯು ಬೆಳಗುತ್ತಿದ್ದು, ಅಖಂಡ ಜ್ಯೋತಿಯಿಂದ ಶ್ರೀರಾಮದೇವರ ಸನ್ನಿಧಿಯಲ್ಲಿ...