Recent Posts

Monday, January 20, 2025

ಬೆಂಗಳೂರು

ಬೆಂಗಳೂರು

ತೆರೆ ಮೇಲೆ ಬರಲಿದೆ ಕಂಬಳ ಕುರಿತ ಸಿನಿಮಾ-ಕಹಳೆ ನ್ಯೂಸ್

ಬೆಂಗಳೂರು : ಉಡುಪಿ ಹಾಗೂ ದಕ್ಷಿಣಕನ್ನಡ ಭಾಗದಲ್ಲಿ ಹೆಚ್ಚು ಜನಪ್ರಿಯವಾದ ಕ್ರೀಡೆ ಕಂಬಳದ ಕುರಿತು ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಕೆಸರುಗದ್ದೆಯಲ್ಲಿ ಉಸೈನ್ ಬೋಲ್ಟ್‍ಗಿಂತಲೂ ವೇಗವಾಗಿ ಓಡಿ ದಾಖಲೆ ನಿರ್ಮಿಸಿ ಕಂಬಳದ ಓಟಗಾರ ಶ್ರೀನಿವಾಸ ಗೌಡ ಅವರ ಕುರಿತು ಸಿನಿಮಾ ಮಾಡುವುದಾಗಿ ಕಳೆದ ವರ್ಷ ನಿರ್ಮಾಪಕ ನಿಖಿಲ್ ಮಂಜು ಹೇಳಿದ್ದರು, ಆದರೆ ಇದೀಗ ರಾಜೇಂದ್ರ ಸಿಂಗ್ ಬಾಬು ಕಂಬಳದ ವಿಷಯವನ್ನು...
ಬೆಂಗಳೂರು

ಸಿಡಿಯಿಂದ ಆನೆಬಲ ಬಂದಿದೆ, ರಾಜೀನಾಮೆ ಕೊಡಲ್ಲ; ಶಾಸಕ ಬಾಲಚಂದ್ರ ಜಾರಕಿಹೊಳಿ ಸಹೋದರನ ಪರ ಬ್ಯಾಟಿಂಗ್-ಕಹಳೆ ನ್ಯೂಸ್

ಬೆಂಗಳೂರು : ಶಾಸಕ ಬಾಲಚಂದ್ರ ಜಾರಕಿಹೊಳಿ , ಸಿಡಿಯಿಂದ ಆನೆಬಲ ಬಂದಿದೆ, ರಾಜೀನಾಮೆ ಕೊಡಲ್ಲ ಎಂದು ಸಹೋದರನ ಪರ ಬ್ಯಾಟಿಂಗ್ ಮಾಡಿದ್ದಾರೆ. ಸಹೋದರನನ್ನು ರಾಜಕೀಯವಾಗಿ ಕುಗ್ಗಿಸಲು ಈ ರೀತಿಯಾದ ಬಲೆ ಹೆಣೆಯಲಾಗಿದೆ. ಇದೊಂದು ಫೇಕ್ ವಿಡಿಯೋ ಆಗಿದೆ. ಒಂದುವೇಳೆ ಸಿಡಿ ನಿಜವಾಗಿದ್ದರೆ ನಾನೇ ಖುದ್ದು ರಾಜೀನಾಮೆ ನೀಡಲು ಹೇಳುತ್ತೇನೆ ಎಂದು ಹೇಳಿದ್ದಾರೆ. ಅದೊಂದು ಫೇಕ್ ವಿಡಿಯೋ ಆಗಿದ್ದು, 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗುವುದು. ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್‍ಲೋಡ್...
ಬೆಂಗಳೂರು

ಹೆಗ್ಗನಹಳ್ಳಿಯ ರಾಜಗೋಪಾಲನಗರದಲ್ಲಿ ಪುತ್ರಿಯರ ಮೇಲೆಯೇ ಕೆಟ್ಟ ಕಣ್ಣಿಟ್ಟಿದ್ದ ಪತಿಯನ್ನು ಸುಪಾರಿ ನೀಡಿ ಕೊಲ್ಲಿಸಿದ ಪತ್ನಿ-ಕಹಳೆ ನ್ಯೂಸ್

ಬೆಂಗಳೂರು : ಹೆಗ್ಗನಹಳ್ಳಿಯ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತನ್ನ ಪುತ್ರಿಯರೊಂದಿಗೆಯೇ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಪುತ್ರ ಸೇರಿ ಸುಪಾರಿ ನೀಡಿ ಕೊಲ್ಲಿಸಿದ ಘಟನೆ ನಡೆದಿದೆ. ತನ್ನ ಪತಿಯ ವರ್ತನೆಯಿಂದ ಬೇಸತ್ತು ಸುಪಾರಿ ಕೊಟ್ಟು ತನ್ನ ಪತಿಯನ್ನೇ ಕೊಲ್ಲಿಸಿದ ಪತ್ನಿ ಮತ್ತು ಆಕೆಯ ಪುತ್ರ ಸೇರಿ ಐವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹತ್ಯೆಯಾದ ವ್ಯಕ್ತಿ ಹೆಗ್ಗನಹಳ್ಳಿ ನಿವಾಸಿ 52 ವರ್ಷದ ಮೊಹಮ್ಮದ್ ಹಂಜಲ ಎಂದು...
ಬೆಂಗಳೂರು

ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ವಿರೋಧಿಸಿ ಮಾರ್ಚ್ 16 ರಂದು ಒಗ್ಗಟ್ಟಿನ ಬೃಹತ್ ಪ್ರತಿಭಟನೆ; ಖಾಸಗೀಕರಣ ವಿರೋಧಿ ವೇದಿಕೆಯಿಂದ ಬೆಂಗಳೂರಿನಲ್ಲಿ ದುಂಡುಮೇಜಿನ ಸಭೆ-ಕಹಳೆ ನ್ಯೂಸ್

ಬೆಂಗಳೂರು : ದೇಶದ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣಗೊಳಿಸುವುದರ ವಿರುದ್ದ ಸಂಘಟಿತರಾಗಿ ಹೋರಾಟ ಮಾಡುವ ಉದ್ದೇಶದಿಂದ ಮಾರ್ಚ್ 16 ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟವನ್ನು ಆಯೋಜಿಸುವುದಾಗಿ ಖಾಸಗೀಕರಣ ವಿರೋಧಿ ವೇದಿಕೆಯ ವತಿಯಿಂದ ಇಂದು ನಡೆದ ಸಭೆಯಲ್ಲಿ ತಿರ್ಮಾನಿಸಲಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸಂಘಟನೆಗಳ ಮುಖಂಡರುಗಳ ಮಾತುಗಳನ್ನು ಕೇಳಿದ ನಂತರ ಮಾತನಾಡಿದ ಖಾಸಗೀಕರಣ ವಿರೋಧಿ ಸಮಿತಿಯ ಸಂಚಾಲಕಿ ಎಸ್ ವರಲಕ್ಷ್ಮಿ, ಖಾಸಗೀಕರಣದ ವಿರುದ್ದ ಎಲ್ಲಾ ಸಂಘಟನೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ವಿರೋಧ ವ್ಯಕ್ತಪಡಿಸುತ್ತಲೇ...
ಬೆಂಗಳೂರು

ನಡು ರಸ್ತೆಯಲ್ಲಿ ಮಹಿಳೆಯ ಭೀಕರ ಹತ್ಯೆ; ಗಾಯದಿಂದ ನರಳುತ್ತಿದ್ದ ಮಹಿಳೆಗೆ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ!-ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರಿನ ಬ್ರೂಕ್ ಫೀಲ್ಡ್ ನಲ್ಲಿ ಹಾಡ ಹಗಲೇ ಮಹಿಳೆಯೋರ್ವರನ್ನು ನಡು ರಸ್ತೆಯಲ್ಲಿ ಚೂರಿಯಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮನೆಯಿಂದ ಮಹಿಳೆ ಹೊರ ಬರುತ್ತಿದ್ದಂತೆಯೇ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಚಾಕುವಿನಿಂದ ಮನಬಂದಂತೆ ಚುಚ್ಚಿದ್ದಾರೆ. ಬಳಿಕ ಸ್ಥಳದಲ್ಲಿಯೇ ಚಾಕುವನ್ನು ಬಿಟ್ಟು ಓಡಿ ಹೋಗಿದ್ದಾರೆ. ಮಹಿಳೆ ತೀವ್ರ ಗಾಯಗಳಿಂದ ಸ್ಥಳದಲ್ಲಿ ಬಿದ್ದ ನರಳಾಡುತ್ತಿದ್ದರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಇದರಿಂದಾಗಿ ಗಂಭೀರ ಗಾಯಗಳಿಂದ ನರಳಿದ ಮಹಿಳೆ ಕೊನೆಯುಸಿರೆಳೆಸಿದ್ದಾರೆ....
ಬೆಂಗಳೂರು

ಶೀಘ್ರದಲ್ಲೇ ಸರಕಾರಿ ಬಸ್ ಪ್ರಯಾಣ ದರ ದುಬಾರಿ ಸಾಧ್ಯತೆ!-ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಬಸ್‍ಗಳ ದರವನ್ನು ಹೆಚ್ಚಿಸುವ ಬಗ್ಗೆ ಸಾರಿಗೆ ಖಾತೆಯನ್ನು ಹೊಂದಿರುವ ಕರ್ನಾಟಕದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮಾಹಿತಿಯನ್ನು ನೀಡಿದ್ದಾರೆ. ಮತ್ತು ಈ ಬಗ್ಗೆ ಮುಖ್ಯಮಂತ್ರಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಹೆಚ್ಚುತ್ತಿರುವ ಇಂಧನದ ಬೆಲೆಗಳು ಮತ್ತು ಸಾಂಕ್ರಾಮಿಕದ ಸಮಯದಲ್ಲಿ ಉಂಟಾದ ನಷ್ಟದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸರ್ಕಾರಿ ನಿಗಮವನ್ನು ಉಳಿಸಲು ಶುಲ್ಕ ಹೆಚ್ಚಳ ಅಗತ್ಯವಿದೆ ಎಂದು ಸಾರಿಗೆ ಇಲಾಖೆ ಸುಳಿವು...
ಬೆಂಗಳೂರು

ಬಸವಕಲ್ಯಾಣ ಚುನಾವಣೆ, ವಿಜಯೇಂದ್ರ ಅಥವಾ ಲಕ್ಷ್ಮಣ ಸವದಿ ಇಬ್ಬರ ಪೈಕಿ ಯಾರಾದರೂ ಒಬ್ಬರು ಕಣಕ್ಕೆ ; ಲಕ್ಷ್ಮಣ ಸವದಿ-ಕಹಳೆ ನ್ಯೂಸ್

ಬೆಂಗಳೂರು : ಡಿಸಿಎಂ ಲಕ್ಷ್ಮಣ ಸವದಿ ಅವರು ನಾವು 18 ಟಿಕೆಟ್ ಆಕಾಂಕ್ಷಿಗಳೊಂದಿಗೆ ಸಭೆ ನಡೆಸಿದ್ದು, ಚುನಾವಣೆಯಲ್ಲಿ ಎಲ್ಲರೂ ಕೂಡಾ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಚುನಾವಣೆಯ ದಿನಾಂಕ ಪ್ರಕಟವಾದ ಬಳಿಕ ಪಕ್ಷದ ಅಭ್ಯರ್ಥಿಗಳ ಪಟ್ಟಿ ಮಾಡಿ ಬಿಜೆಪಿ ಹೈಕಮಾಂಡ್‍ಗೆ ರವಾನೆ ಮಾಡಲಿದೆ ಎಂದು ಹೇಳಿದ್ದಾರೆ. ಚುನಾವಣಾ ಪ್ರಚಾರ ಕಾರ್ಯ ಶುಕ್ರವಾರದಿಂದ ಪ್ರಾರಂಭವಾಗಲಿದೆ.ಚುನಾವಣಾ ದಿನಾಂಕ ಪ್ರಕಟಿಸುವ ಮುನ್ನವೇ ಕ್ಷೇತ್ರದ ಎಲ್ಲಾ ಮತದಾರರನ್ನು ಭೇಟಿ ಮಾಡಬೇಕು ಎಂದಿದ್ದಾರೆ....
ಬೆಂಗಳೂರು

ಸಚಿವ ಸುಧಾಕರ್ ಆಪ್ತ ಕಾರ್ಯದರ್ಶಿಗೆ ಎಚ್ಚರಿಕೆ ನೀಡಿದ ಶಾಸಕ ರೇಣುಕಾಚಾರ್ಯ-ಕಹಳೆ ನ್ಯೂಸ್

ಬೆಂಗಳೂರು : ಹೊನ್ನಾಳಿ ಶಾಸಕ ರೇಣುಕಾಚಾರ್ಯ ದೂರವಾಣಿ ಮೂಲಕ ಆರೋಗ್ಯ ಸಚಿವ.ಡಾ. ಸುಧಾಕರ್ ಅವರು ತಮ್ಮ ಕ್ಚೇತ್ರದ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಅವರ ಆಪ್ತ ಕಾರ್ಯದರ್ಶಿಗೆ ಧಮಕಿ ಹಾಕಿದ್ದಾರೆಂದು ವರದಿಯಾಗಿದೆ. ಈ ಕುರಿತು ಸಚಿವ ಸುಧಾಕರ್ ಅವರ ಆಪ್ತ ಕಾರ್ಯದರ್ಶಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ರೇಣುಕಾಚಾರ್ಯ, ಹತ್ತಾರು ಬಾರಿ ಭೇಟಿ ಮಾಡಿದರು ನಿಮ್ಮ ಸಚಿವರು ಕೆಲಸ ಮಾಡುತ್ತಿಲ್ಲ. ಶುಕ್ರವಾರ ಮಧ್ಯಾಹ್ನದ ಒಳಗೆ ನನ್ನ ಕೆಲಸ ಆಗದಿದ್ದರೆ, ಇನ್ನೊಂದು...
1 108 109 110 111 112 126
Page 110 of 126