Recent Posts

Sunday, January 19, 2025

ಬೆಂಗಳೂರು

ಬೆಂಗಳೂರು

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೋಜನ ಕೂಟಕ್ಕೆ ಹಲವು ಶಾಸಕರು ಗೈರು-ಕಹಳೆ ನ್ಯೂಸ್

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮಂಗಳವಾರ ರಾತ್ರಿ ಕರೆದಿದ್ದ ಭೋಜನ ಕೂಟಕ್ಕೆ ಹಲವು ಶಾಸಕರು ಮತ್ತು ಸಚಿವರು ಗೈರಾಗಿದ್ದರು. ವಿಧಾನಮಂಡಲ ಅಧಿವೇಶನದ ಕಾರಣ ಮುಖ್ಯಮಂತ್ರಿಯವರ ನಿವಾಸ ಕಾವೇರಿ ಯಲ್ಲಿ ಭೋಜನ ಕೂಟ ಆಯೋಜಿಸಲಾಗಿದ್ದು, ಈ ಭೋಜನ ಕೂಟಕ್ಕೆ ಬಸನಗೌಡ ಪಾಟೀಲ ಯತ್ನಾಳ, ಅಪ್ಪಚ್ಚುರಂಜನ್, ಅರವಿಂದ ಬೆಲ್ಲದ, ಸುನಿಲ್ ಕುಮಾರ್, ತಿಪ್ಪಾರೆಡ್ಡ ಹಾಗೂ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಆನಂದ್ ಸಿಂಗ್, ಕೆ.ಎಸ್.ಈಶ್ವರಪ್ಪ, ಹಾಜರಾಗಿರಲಿಲ್ಲ. ಈ...
ಬೆಂಗಳೂರು

ಕೆಜಿಎಫ್ 2 ಸಿನೆಮಾದ ಬಿಡುಗಡೆ ದಿನವನ್ನು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಿಸಲು ಯಶ್ ಅಭಿಮಾನಿಗಳಿಂದ ಮೋದಿಗೆ ಮನವಿ-ಕಹಳೆ ನ್ಯೂಸ್

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗುತ್ತಿದ್ದಂತೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಹು ನಿರೀಕ್ಷೆಯ ಕೆಜಿಎಫ್ ಚಾಪ್ಟರ್-2 ಸಿನೆಮಾವು ಜುಲೈ 16 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾವನ್ನು ನೋಡುವುದಕ್ಕಾಗಿ ಜುಲೈ 16ನ್ನು ರಾಷ್ಟ್ರೀಯ ರಜೆಯ ದಿನವನ್ನಾಗಿ ಘೋಷಿಸಬೇಕು ಎಂದು ಯಶ್ ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಓನ್ಲಿ ಯಶ್ ಹೆಸರಿನ ಟ್ವೀಟರ್ ಖಾತೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಅಭಿಮಾನಿಗಳು ಪ್ರಧಾನಿಯನ್ನು...
ಬೆಂಗಳೂರು

ಪ್ರಶ್ನೆ ಪತ್ರಿಕೆ ಬಹಿರಂಗ ಹಿನ್ನಲೆ ಮುಂದುಡಲ್ಪಟ್ಟ ಎಫ್‌ಡಿಎ ಪರೀಕ್ಷೆ ಇನ್ನು ಫೆಬ್ರವರಿ 28ಕ್ಕೆ ನಡೆಯಲಿದೆ-ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಸಹಾಯಕ, ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪ್ರಶ್ನೆ ಪತ್ರಿಕೆ ಬಹಿರಂಗಗೊ0ಡ ಹಿನ್ನಲೆಯಲ್ಲಿ ಮುಂದೂಡಲಾಗಿತ್ತು. ಈಗ ಪರೀಕ್ಷಾ ದಿನಾಂಕವನ್ನು ಕೆಪಿಎಸ್ಸಿ ಪ್ರಕಟಿಸಿದ್ದು, ಇದೇ ತಿಂಗಳು 28 ರಂದು ನಡೆಯುವುದೆಂದು ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ. ಸತ್ಯವತಿ ಪತ್ರಿಕಾ ಪ್ರಕಟನೆ ಹೊರಡಿಸಿದ್ದಾರೆ....
ಬೆಂಗಳೂರು

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದವರ ಮೇಲೆ ಹಲ್ಲೆ ; ಆರೋಪಿಗಳ ಬಂಧನ-ಕಹಳೆ ನ್ಯೂಸ್

ಬೆಂಗಳೂರು : ನಗರದ ಬಿಸ್ಮಿಲ್ಲಾನಗರದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದ ಗುಂಪಿನ ಮೇಲೆ ದುಷರ್ಮಿಗಳ ತಂಡವೊಂದು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತರನ್ನು ಅಡ್ನಾನ್, ಅಹ್ಮದ್ ಪಾಷಾ, ಅಬ್ದುಲ್ ಗೌಸ್, ಮೊಹಮ್ಮದ್, ಶಬೀರ್, ಸೈಯದ್ ಸುಹೇಲ್, ಹಾಗೂ ಸೈಯದ್ ಅಕ್ಮಲ್ ಎಂದು ಗುರುತಿಸಲಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕಾಗಿ ಶೇಷಾಚಲ, ಯಶವಂತ್, ಸುರೇಶ್ ಎಂಬುವವರು ನಿಧಿ ಸಂಗ್ರಹ ಮಾಡುತ್ತಿದ್ದ...
ಬೆಂಗಳೂರು

ಬೆಂಗಳೂರು, ಸಿಲಿಕಾನ್ ಸಿಟಿಯಲ್ಲಿ ಬೋನಿಗೆ ಬಿದ್ದ ಚಿರತೆ-ಕಹಳೆ ನ್ಯೂಸ್

ಬೆಂಗಳೂರು : ಅರಣ್ಯ ಇಲಾಖೆ ಸಿಬ್ಬಂದಿ, ಹಲವು ದಿನಗಳಿಂದ ಸಿಲಿಕಾನ್ ಸಿಟಿ ಜನರಲ್ಲಿ ಆತಂಕವನ್ನುಂಟುಮಾಡಿ, ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಒಂಭತ್ತು ದಿನಗಳಿಂದ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಕೊನೆಗೂ ಚಿರತೆಯನ್ನು ಸೆರೆ ಹಿಡಿಯಲಾಗಿದ್ದು, ಬೇಗೂರು ಸಮೀಪದ ಪ್ರೆಸ್ಟೀಜ್ ಸಾಂಗ್ ಆಫ್ ಸೌತ್ ಅಪಾರ್ಟ್ ಮೆಂಟ್ ಹಿಂಭಾಗದ ಕ್ವಾರಿ ಬಳಿ ಚಿರತೆ ಬೋನಿಗೆ ಬಿದ್ದಿದೆ. ಹಾಗೂ ಬೋನಿಗೆ ಬಿದ್ದ ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ರವಾನಿಸಲಾಗಿದೆ....
ಬೆಂಗಳೂರು

ಕೋವಿಡ್ ಲಸಿಕೆ ಸಂಪೂರ್ಣ ಸುರಕ್ಷಿತ, ಆತಂಕ ಬೇಡ ; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್-ಕಹಳೆ ನ್ಯೂಸ್

ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಅವರು ದೇಶದಲ್ಲಿ ಕೊರೋನಾ ನಿಯಂತ್ರಿಸುವ ದೃಷ್ಟಿಯಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ವಿತರಣೆ ಕೈಗೊಳ್ಳಲಾಗಿದ್ದು, ಈ ಎರಡೂ ಲಸಿಕೆಗಳು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಅವರು ಲಸಿಕೆಯ ಬಗ್ಗೆ ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ. ಸಾರ್ವಜನಿಕರು ಸುಳ್ಳು ವದಂತಿಗಳಿಗೆ ಕಿವಿಗೊಡದೆ, ಕೇವಲ ಸರ್ಕಾರದ ಅಧಿಕೃತ ಮಾಹಿತಿಯನ್ನು ಮಾತ್ರ ಪರಿಗಣಿಸಬೇಕೆಂದು ಟ್ವೀಟ್ ಮಾಡಿದ್ದಾರೆ. ಹಾಗೂ...
ಬೆಂಗಳೂರು

ದೆಹಲಿಯಲ್ಲಿ ಮಂಗಳವಾರ ನಡೆದ ಟ್ಯ್ರಾಕ್ಟರ್ ರ‍್ಯಾಲಿ ಹಿಂಸಾಚಾರಕ್ಕೆ ಭಾರತದಲ್ಲಿದ್ದುಕೊಂಡೇ ಹಿಂಸೆಗೆ ಪ್ರಚೋದನೆ ನೀಡಿದವರು, ಸುಳ್ಳು ಹಬ್ಬಿಸಿದ ದ್ರೋಹಿಗಳೇ ಕಾರಣ; ಶ್ರೀರಾಮುಲು-ಕಹಳೆ ನ್ಯೂಸ್

ಬೆಂಗಳೂರು : ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಮಂಗಳವಾರ ದೆಹಲಿಯಲ್ಲಿ ನಡೆದ ಟ್ಯ್ರಾಕ್ಟರ್ ರ‍್ಯಾಲಿ ಹಿಂಸಾಚಾರಕ್ಕೆ ಭಾರತದಲ್ಲಿದ್ದುಕೊಂಡೇ ಹಿಂಸೆಗೆ ಪ್ರಚೋದನೆ ನೀಡಿದವರು, ಸುಳ್ಳು ಹಬ್ಬಿಸಿದ ದ್ರೋಹಿಗಳೇ ಕಾರಣ ಎಂದು ದೂರಿದ್ದಾರೆ. ಈ ಕುರಿತು ಅವರು ವಿದೇಶದಲ್ಲಿ ಪ್ರತಿಪಕ್ಷದ ನಾಯಕನನ್ನು 'ಶಾಡೋ ಪ್ರೈಮ್ ಮಿನಿಸ್ಟರ್' ಎನ್ನುತ್ತಾರೆ. ಆದರೆ ನಮ್ಮ ದೇಶದ ಕಾಂಗ್ರೆಸ್ ಪಕ್ಷ, ಅದರ ನಾಯಕರು ರೈತರ ವಿಚಾರದಲ್ಲಿಯೇ ಪಿತೂರಿ ಮಾಡುತ್ತಾರೆ ಎಂಬುದಕ್ಕೆ ಕೃಷಿ ಕಾಯ್ದೆ ವಿಚಾರದಲ್ಲಿ ರೈತರನ್ನು...
ಬೆಂಗಳೂರು

ಕರ್ನಾಟಕಕ್ಕೆ ಮುಂಬೈಯನ್ನು ಸೇರ್ಪಡೆ ಮಾಡಬೇಕು, ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ ; ಲಕ್ಷ್ಮಣ ಸವದಿ-ಕಹಳೆ ನ್ಯೂಸ್

ಬೆಂಗಳೂರು, : ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕರ್ನಾಟಕಕ್ಕೆ ಮುಂಬೈಯನ್ನು ಸೇರ್ಪಡೆ ಮಾಡಬೇಕು, ಅಲ್ಲಿಯವರಗೆ ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ. ಹಾಗೇ ಅವರು ನಮ್ಮ ಕ್ಷೇತ್ರ ಇರುವುದು ಮುಂಬೈ ಕರ್ನಾಟಕದಲ್ಲಿ ಹಾಗಾಗಿ ನನ್ನ ಕ್ಷೇತ್ರದ ಮೊದಲ ಶಾಸಕ ಮುಂಬೈ ವಿಧಾನಸಭೆಗೆ ಹೋಗಿದ್ದರು. ಮತ್ತು ಮುಂಬೈನಲ್ಲಿ ನಮ್ಮ ಆಸ್ತಿ ಇದೆ. ನಾವು ಮುಂಬೈನ್ನು ಕರ್ನಾಟಕದ ಭಾಗ ಎಂದು ತೀರ್ಮಾನವಾಗಿದೆ ಹಾಗಾಗಿ ಕರ್ನಾಟಕಕ್ಕೆ ಸೇರಿಸಿ, ಎಂದು...
1 112 113 114 115 116 126
Page 114 of 126