ಒಟ್ಟಿಗೆ ಸಿನೆಮಾದಲ್ಲಿ ನಟಿಸಲಿದ್ದಾರಾ ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್?-ಕಹಳೆ ನ್ಯೂಸ್
ಬೆಂಗಳೂರು : ನಟ, ನೃತ್ಯ ನಿರ್ದೇಶಕ ನಾಗೇಂದ್ರ ಪ್ರಸಾದ್ ಪ್ರಥಮ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಅವರ ಸಿನಿಮಾದಲ್ಲಿ ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಒಟ್ಟಿಗೆ ನಟಿಸಲಿದ್ದಾರೆಂಬ ಮಾಹಿತಿ ಚಂದನವನದಲ್ಲಿ ಹರಿದಾಡುತ್ತಿದೆ. ಈ ಸಿನಿಮಾವನ್ನು ನಾಗೇಂದ್ರ ಪ್ರಸಾದ್ ಅವರು ತಮಿಳಿನ 'ಓ ಮೈ ಕಾಡುವಲೆ' ಚಿತ್ರದಿಂದ ಸ್ಫೂರ್ತಿ ಪಡೆದು ಮಾಡಲಾಗುತ್ತಿದೆಯಂತೆ. ಮತ್ತು ಕನ್ನಡ ಅವತರಣಿಕೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆಯಂತೆ. ಇನ್ನು ಈ ಸಿನಿಮಾಗೆ...