ಬೆಂಗಳೂರು ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟಿರುವ ವಂಚನೆ ಆರೋಪಿ ಯುವರಾಜನ ಮೊಬೈಲ್‍ನಲ್ಲಿ ಸವದಿ, ನಿರಾಣಿ, ಸೋಮಣ್ಣ, ವೇಣುಗೋಪಾಲ್ ಫೋಟೋ-ಕಹಳೆ ನ್ಯೂಸ್
ಬೆಂಗಳೂರು: ಬೆಂಗಳೂರು ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟಿರುವ ವಂಚನೆ ಆರೋಪಿ ಯುವರಾಜನ ಮೊಬೈಲ್‍ನಲ್ಲಿ ಹಲವಾರು ರಾಜಕಾರಣಿಗಳ ಫೋಟೋ ಸಿಕ್ಕಿದ್ದು, ಕುತೂಹಲ ಮೂಡಿಸಿದೆ. ತನಗೆ ಬಿಜೆಪಿಯ ದೊಡ್ಡ ದೊಡ್ಡ ನಾಯಕರ ಸಂಪರ್ಕವಿದೆ. ಎಲ್ಲ ಕೆಲಸಗಳನ್ನೂ ಮಾಡಿಸಿಕೊಡುತ್ತೇನೆ ಎಂದು ಹೇಳಿ ಈಗಾಗಲೆ ಸಾವಿರಾರು ಜನರಿಗೆ ವಂಚಿಸಿರುವ ಆರೋಪ ಹೊತ್ತಿರುವ ಯುವರಾಜ ಸ್ವಾಮಿ ಎನ್ನುವಾತನನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವತಃ ಯುವರಾಜನ ಬಂಧನಕ್ಕೆ ಸೂಚನೆ ನೀಡಿದ್ದು, ಅಮಿತ್...