ದಾಖಲೆಯ 16ನೇ ಬಜೆಟ್‌ಗೆ ಸಿಎಂ ಸನ್ನದ್ಧ : 4 ಲಕ್ಷ ಕೋ. ರೂ. ಸಿದ್ದು ಬಜೆಟ್-ಕಹಳೆ ನ್ಯೂಸ್
ಬೆಂಗಳೂರು: “ಪಂಚ ಗ್ಯಾರಂಟಿ’ ಯೋಜನೆಗಳಿಂದಾಗಿ ರಾಜ್ಯದ ಅಭಿವೃದ್ಧಿ ತಾಳ ತಪ್ಪಿದೆ ಎಂಬ ಅಪಸ್ವರಗಳ ನಡುವೆಯೇ ವಿತ್ತ ಖಾತೆಯನ್ನು ತಮ್ಮಲ್ಲಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 16ನೇ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಬೆಳಗ್ಗೆ 10.15ಕ್ಕೆ ಮಂಡನೆಯಾಗಲಿರುವ 2025- 26ನೇ ಸಾಲಿನ ಬಜೆಟ್ ಹಲವು ನಿರೀಕ್ಷೆ, ಕುತೂಹಲಗಳನ್ನು ಸೃಷ್ಟಿಸಿದೆ. ವಿಶೇಷವಾಗಿ ಗ್ಯಾರಂಟಿ ಯೋಜನೆಗಳು, ವಿವಿಧ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳ ಜತೆಗೆ ಅಭಿವೃದ್ಧಿ ಯೋಜನೆಗಳಿಗೆ ಬೇಡಿಕೆಗೆ ತಕ್ಕಂತೆ ಅನುದಾನ ನೀಡಿ ಅಭಿವೃದ್ಧಿ...