ಮದರಸಾದಲ್ಲಿ ಮಧ್ಯರಾತ್ರಿ ವಿದ್ಯಾರ್ಥಿಯ ಖಾಸಗಿ ಭಾಗಕ್ಕೆ ಎಣ್ಣೆ ಹಚ್ಚಿ ಅಸಹಜ ಲೈಂಗಿಕ ದೌರ್ಜನ್ಯ : ಮದರಸಾದ ಟ್ರಸ್ಟಿ, ವಿಕೃತ ಕಾಮುಕರ ವಿರುದ್ದ ಪ್ರಕರಣ ರದ್ದು ಪಡಿಸಲು ಹೈಕೋರ್ಟ್ ನಕಾರ – ಕಹಳೆ ನ್ಯೂಸ್
“ಮದರಸಾದಲ್ಲಿ ಕಲಿಯುತ್ತಿದ್ದ 11 ವರ್ಷದ ಬಾಲಕನ ಮೇಲೆ ಅದೇ ಮದರಸಾದ ಇಬ್ಬರು ಶಿಕ್ಷಕರು ಅಸಹಜ ಸಂಭೋಗ ನಡೆಸಿದ್ದಾರೆ” ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮದರಸಾದ ಸಂಸ್ಥಾಪಕ ಟ್ರಸ್ಟಿಯ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ. ಬೆಂಗಳೂರಿನ ಪೈಜಾನ್ ಮಾಣಿಕ್ ಮಸ್ತಾನ್ ಮದರಸಾದ ಟ್ರಸ್ಟಿ ಮೊಹಮದ್ ಅಮೀರ್ ರಾಜಾ ಅವರು ತನ್ನ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ...